ಕಾರಣಗಿರಿಯಲ್ಲಿ ವೈಭವದ ಸಿದ್ಧಿವಿನಾಯಕ ಸ್ವಾಮಿ ರಥೋತ್ಸವ, ದೊಡ್ಡ ಸಂಖ್ಯೆಯ ಭಕ್ತರು ಭಾಗಿ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 12 MAY 2024

HOSANAGARA : ಪುರಾಣ ಪ್ರಸಿದ್ಧ ಕಾರಣಗಿರಿಯ ಶ್ರೀ ಸಿದ್ಧಿವಿನಾಯಕ ಸ್ವಾಮಿ ಮಹಾರಥೋತ್ಸ ಸಂಭ್ರಮದಿಂದ ನಡೆಯಿತು. ಶನಿವಾರ ಅಭಿಜನ್ ಮುಹೂರ್ತದಲ್ಲಿ ದೇವರ ಅದ್ಧೂರಿ ಮಹಾರಥೋತ್ಸವ ನಡೆಯಿತು.

ಕಾರಣಗಿರಿ ಸಿದ್ಧಿವಿನಾಯಕ ಸ್ವಾಮಿ ದೇವರ ರಜತ ರಥೋತ್ಸವ ಮತ್ತು ಮನ್ಮಹಾರಥೋತ್ಸವದಲ್ಲಿ ದೊಡ್ಡ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು. ಜಿಲ್ಲೆ ಮತ್ತು ಹೊರ ಜಿಲ್ಲೆಯಿಂದ ಜನರು ಆಗಮಿಸಿದ್ದರು. ರಥೋತ್ಸವದ ಹಿನ್ನೆಲೆ ದೇವರ ಉತ್ಸವವು ಪ್ರತಿ ದಿನವೂ ಒಂದೊಂದು ಊರಿಗೆ ಹೋಗಿ ಅಲ್ಲಿ ವಸಂತ ಪೂಜೆ ನಡೆಸಲಾಯಿತು. ಶನಿವಾರ ಸಂಜೆ ಮಹಾ ರಥೋತ್ಸವವು ಕಾರಣಗಿರಿ ವೃತ್ತದವರೆಗೆ ಮಂಗಳ ವಾದ್ಯಗಳೊಂದಿಗೆ ಸಾಗಿ ಬಂತು. (ಫೋಟೊ : ವಿನಾಯಕ ವಾರಂಬಳ್ಳಿ)

ಇದನ್ನೂ ಓದಿ – ಶಿವಮೊಗ್ಗದಲ್ಲಿ ಇವತ್ತು ಮಳೆ ಸುರಿಯುವ ಸಾಧ್ಯತೆ, ಕೂಲ್‌ ಕೂಲ್‌ ಆಗಲಿದೆ ಜಿಲ್ಲೆ, ಎಷ್ಟಿದೆ ತಾಪಮಾನ?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment