ಇನ್ನೊಂದೇ ತಿಂಗಳು ಬಾಕಿ, ಆಧಾರ್‌ ಕಾರ್ಡ್‌ ಅಪ್‌ಡೇಟ್‌ಗೆ ಸರ್ಕಾರದಿಂದ ಆಫರ್‌, ಏನದು?

SHIVAMOGGA LIVE NEWS | 14 MAY 2024 (ಈ ಸುದ್ದಿಯನ್ನು ಇನ್ನು 65 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

AADHAR NEWS : ಆಧಾರ್‌ ಕಾರ್ಡ್‌ಗೆ ಉಚಿತವಾಗಿ (Free Update) ಅಗತ್ಯ ಮಾಹಿತಿ ಅಪ್‌ಡೇಟ್‌ ಮಾಡಲು ನೀಡಿದ್ದ ಗಡುವು ಜೂ.14ರವರೆಗೆ ವಿಸ್ತರಣೆ ಮಾಡಲಾಗಿದೆ. ಇದನ್ನು ಉಪಯೋಗಿಸಿಕೊಂಡು ಸಾರ್ವಜನಿಕರು ತಮ್ಮ ಆಧಾರ್‌ ಕಾರ್ಡ್‌ಗೆ ಅಗತ್ಯವಿರುವ ಮಾಹಿತಿ ಅಪ್‌ಡೇಟ್‌ ಮಾಡಬಹುದು.

ನಿಯಮದ ಪ್ರಕಾರ ನಾಗರಿಕರು ಪ್ರತಿ ಹತ್ತು ವರ್ಷಕ್ಕೊಮ್ಮೆ ಆಧಾರ್‌ಗೆ ಅಗತ್ಯ ಮಾಹಿತಿ ಅಪ್‌ಡೇಟ್‌ ಮಾಡಬೇಕು. ತಮ್ಮ ಗುರುತು ಮತ್ತು ವಿಳಾಸದ ದಾಖಲೆಗಳನ್ನು ಒದಗಿಸಬೇಕು. ಮಕ್ಕಳ ಬಯೋಮೆಟ್ರಿಕ್‌ ದಾಖಲೆಗಳನ್ನು ನೀಡಬೇಕು.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ

ಈಗ ಆಧಾರ್‌ ಆಪ್‌ಡೇಟ್‌ ಉಚಿತ

ಜೂ.14ರವರೆಗೆ ಸಾರ್ವಜನಿಕರು ಉಚಿತವಾಗಿ ಆಧಾರ್‌ ಅಪ್‌ಡೇಟ್‌ ಮಾಡಬಹುದು. ಆಫ್‌ಲೈನ್‌ ಮತ್ತು ಆನ್‌ಲೈನ್‌ ಮೂಲಕ ಅಪ್‌ಡೇಟ್‌ ಮಾಡಲು ಅವಕಾಶವಿದೆ. ಆ ಬಳಿಕ ಆಫ್‌ಲೈನ್‌ ಅಪ್‌ಡೇಟ್‌ಗೆ 50 ರೂ., ಆನ್‌ಲೈನ್‌ ಅಪ್‌ಡೇಟ್‌ಗೆ 25 ರೂ. ಶುಲ್ಕ ಪಾವತಿಸಬೇಕಾಗುತ್ತದೆ.

ಆನ್‌ಲೈನ್‌ ಅಪ್‌ಡೇಟ್‌ ಹೇಗೆ?

ಆನ್‌ಲೈನ್‌ನಲ್ಲಿ uidai.gov.in ವೆಬ್‌ಸೈಟ್‌ಗೆ ಹೋಗಿ ಭಾಷೆ ಆಯ್ಕೆ ಮಾಡಿ. My Aadhar ಕ್ಲಿಕ್‌ ಮಾಡಿ, Update Your Aadhaar ಕ್ಲಿಕ್‌ ಮಾಡಬೇಕು. Update Aadhar Details ಪೇಜ್‌ನಲ್ಲಿ Document Update ಕೊಡಬೇಕು. ನಂತರ ಆಧಾರ್‌ ನಂಬರ್‌, ಒಟಿಪಿ ನಮೂದಿಸಿ Log In ಕ್ಲಿಕ್‌ ಮಾಡಬೇಕು. ಮಾಹಿತಿ ಅಪ್‌ಲೋಡ್‌ ನೀಡಿದ ನಂತರ submit ಬಟನ್‌ ಕ್ಲಿಕ್‌ ಮಾಡಬೇಕು. ನಂತರ submit update request ಕ್ಲಿಕ್‌ ಮಾಡಿದರೆ ಅಪ್‌ಡೇಟ್‌ ರಿಕ್ವೆಸ್ಟ್‌ ನಂಬರ್‌ ಬರಲಿದೆ.

ಇನ್ನು, ಫೋಟೊ, ಕಣ್ಣಿನ ಐರಿಸ್‌, ಬಯೋಮೆಟ್ರಿಕ್‌ ಅಪ್‌ಡೇಟ್‌ಗೆ ಆಧಾರ್‌ ಎನ್‌ರೋಲ್‌ಮೆಂಟ್‌ ಸೆಂಟರ್‌ಗಳಿಗೆ ಭೇಟಿ ನೀಡಬೇಕು.

ಇದನ್ನೂ ಓದಿ – ಧಗಧಗ ಹೊತ್ತಿ ಉರಿದ ಐರಾವತ, ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿತು ದೊಡ್ಡ ಅನಾಹುತ

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

aadhar-card.webp

Leave a Comment