ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 17 MAY 2024
RAINFALL NEWS : ಜಿಲ್ಲೆಯ ವಿವಿಧೆಡೆ ಸಂಜೆ ವೇಳೆಗೆ ಮಳೆ (Rain) ಬಿರುಸಾಗಿದೆ. ಗುಡುಗು ಸಹಿತ ಜೋರು ಮಳೆಯಾಗುತ್ತಿದೆ. ಶಿವಮೊಗ್ಗ, ತೀರ್ಥಹಳ್ಳಿ, ಶಿಕಾರಿಪುರ, ಸಾಗರ, ಸೊರಬದಲ್ಲಿ ಮಳೆಯಾಗುತ್ತಿದೆ.
ಶಿವಮೊಗ್ಗ ತಾಲೂಕಿನ ಕೊರ್ಲಹಳ್ಳಿ, ಸಂತೆ ಕಡೂರು, ಹಸೂಡಿ, ಸೂಗೂರು, ಅಬ್ಬಲಗೆರೆ, ಕೊಮ್ಮನಾಳು, ಕುಂಚೇನಹಳ್ಳಿ, ಕೋಟೆಗಂಗೂರು, ಆಯನೂರು, ರಾಮನಗರದಲ್ಲಿ ಜೋರು ಮಳೆಯಾಗುತ್ತಿದೆ. ತೀರ್ಥಹಳ್ಳಿ ತಾಲೂಕಿನ ತೂದೂರು, ಬೆಜ್ಜವಳ್ಳಿ, ಭಾಂಡ್ಯ ಕುಕ್ಕೆ, ತ್ರಯಂಬಕಪುರ, ಕುಡುಮಲ್ಲಿಗೆ, ತೀರ್ಥಮತ್ತೂರು, ಮೇಗರವಳ್ಳಿ, ಅರೆಹಳ್ಳಿ. ಭದ್ರಾವತಿ ತಾಲೂಕಿನ ಅರಳಹಳ್ಳಿ, ನಾಗತಿಬೆಳಗಲು, ಅರೆಬಿಳಚಿ, ಅರಕೆರೆ, ಎಮ್ಮೆಹಟ್ಟಿ, ಮೈದೊಳಲು, ಮಂಗೋಟೆ, ನಿಂಬೆಗೊಂದಿಯಲ್ಲಿ ಮಳೆಯಾಗುತ್ತಿದೆ.
ಇದನ್ನೂ ಓದಿ – ಶಿವಮೊಗ್ಗ ಸಿಟಿಯಲ್ಲಿ ಜೋರು ಮಳೆ, ತಂಪಾಯ್ತು ಇಳೆ
ಶಿಕಾರಿಪುರ ತಾಲೂಕಿನ ಕಲ್ಮನೆ, ಚುರ್ಚಿಗುಂಡಿ, ಈಸೂರು, ಮುಡುಬಸಿದ್ದಾಪುರ, ಬೇಗೂರು, ಮರಳವಳ್ಳಿ, ಚಿಕ್ಕಜಂಬೂರು, ತಾಳಗುಂದದಲ್ಲಿ ಮಳೆಯಾದ ವರದಿಯಾಗಿದೆ. ಸೊರಬ ತಾಲೂಕಿನ ಮುಟುಗುಪ್ಪೆ, ತತ್ತೂರು, ತಲ್ಲೂರು, ಮೂಡಿ ದೊಡ್ಡಿಕೊಪ್ಪ, ಅಗಸನಹಳ್ಳಿ, ದ್ಯಾವನಹಳ್ಳಿ, ಗುಡುವಿಯಲ್ಲಿ ಮಳೆಯಾಗುತ್ತಿದೆ. ಸಾಗರದ ಹಿರನಲ್ಲೂರು, ಕಾಂಡಿಕೆ, ಕೋಳೂರಿನಲ್ಲಿ ಮಳೆಯಾಗುತ್ತಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422