ಅಕ್ರಮ ಬಡ್ಡಿ ದಂಧೆ, ಶಿವಮೊಗ್ಗದಲ್ಲಿ ಮನೆ ಮೇಲೆ ಪೊಲೀಸರ ದಾಳಿ, ದಾಖಲೆಗಳು ವಶಕ್ಕೆ

SHIVAMOGGA LIVE NEWS | 18 MAY 2024

SHIMOGA : ಅಕ್ರಮವಾಗಿ ಬಡ್ಡಿ (Exorbitant Interest) ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ವೆಂಕಟೇಶನಗರದ ವೆಂಕಟೇಶ್‌ ಎಂಬುವವರ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.

ದಾಳಿ ವೇಳೆ 29,750 ರೂ. ನಗದು, 13 ಖಾಲಿ ಚೆಕ್‌ಗಳು, 55 ಸಾವಿರ ರೂ. ಎಂದು ನಮೂದಾಗಿರುವ ಒಂದು ಚೆಕ್‌, ಸಹಿ ಇರುವ ಖಾಲಿ ಸ್ಟಾಂಪ್‌ ಪೇಪರ್‌, ನಿವೇಶನ ದಾಖಲಾತಿ, ಬಡ್ಡಿ ವ್ಯವಹಾರ ನಮೂದಾಗಿರುವ ಏಳು ನೋಟ್‌ ಪುಸ್ತಕಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮಹಿಳೆಯೊಬ್ಬರಿಗೆ ವೆಂಕಟೇಶ್‌ 5 ಪರ್ಸೆಂಟ್‌ ಬಡ್ಡಿಗೆ ಸಾಲ ನೀಡಿದ್ದರು. ಇದಕ್ಕಾಗಿ ಮನೆಯ ದಾಖಲೆ ಪತ್ರ, ಖಾಲಿ ಚೆಕ್‌ ಪಡೆದಿದ್ದರು. ಸಕಾಲದಲ್ಲಿ ಬಡ್ಡಿ ಮತ್ತು ಅಸಲು ತೀರಸದಿದ್ದರಿಂದ, ಖಾಲಿ ಚೆಕ್‌ಗಳ ಆಧಾರದ ಮೇಲೆ ಕೇಸ್‌ ದಾಖಲಿಸುವುದಾಗಿ ಬೆದರಿಕೆ ಒಡ್ಡಿದ್ದರು. ಈ ಸಂಬಂಧ ವೆಂಕಟೇಶ್‌ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮಹಿಳೆ ಜಯನಗರ ಠಾಣೆಗೆ ದೂರು ನೀಡಿದ್ದರು.

ಇದನ್ನೂ ಓದಿ – ಸಿಗಂದೂರಿನಿಂದ ಮರಳುತ್ತಿದ್ದ ಧಾರವಾಡದ ಮಹಿಳೆ ಬಸ್ಸಿನ ಚಕ್ರಕ್ಕೆ ಸಿಲುಕಿ ಸಾವು

ಶಿವಮೊಗ್ಗದಲ್ಲಿ ಬಡ್ಡಿ ದಂಧೆ ನಡೆಸುತ್ತಿರುವವರ ವಿರುದ್ಧ ಸಾರ್ವಜನಿಕರು ದೂರು ನೀಡಬಹುದು. 112ಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Doddapete-Police-raid-on-Lodge-in-Shimoga.

Leave a Comment