ರಾಜ್ಯದಲ್ಲಿ ಕಡಿಮೆಯಾದ ಮಳೆ ಆರ್ಭಟ, ಮುಂಗಾರು ಕುರಿತು ಹೊರಬಿತ್ತು ಮಹತ್ವದ ಮಾಹಿತಿ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

SHIVAMOGGA LIVE NEWS | 23 MAY 2024

RAINFALL NEWS : ರಾಜ್ಯಾದ್ಯಂತ ಮಳೆ (RAINFALL) ಮುಂದುವರಿದಿದೆ. ಆದರೆ ಆರ್ಭಟ ಕಡಿಮೆಯಾಗಿದೆ. ಕರ್ನಾಟಕದಲ್ಲಿ ಐದು ದಿನ ಸಾಧಾರಣ ಮಳೆಯಾಗಲಿದೆ. ಇನ್ನೊಂದೆಡೆ ಮುಂಗಾರು ಇನ್ನಷ್ಟು ವ್ಯಾಪಿಸಲು ಪರಿಸ್ಥಿತಿ ಅನುಕೂಲಕರವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ರಾಜ್ಯದಲ್ಲಿ ಸಾಧಾರಣ ಮಳೆ

ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗಳಲ್ಲಿ ಮೇ 23, 24ರಂದು ಮತ್ತು ಮೈಸೂರಿನಲ್ಲಿ ಮುಂದಿನ 24 ಗಂಟೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ ಯಲ್ಲೋ ಅಲರ್ಟ್‌ ಘೋಷಿಸಲಾಗಿದೆ. ಇನ್ನೊಂದೆಡೆ ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಮೇ 27ರವರೆಗೆ ಸಾಧಾರಣ ಮಳೆಯಾಗಲಿದೆ. ಇತ್ತ ಕರಾವಳಿಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ಮುಂಗಾರು ವ್ಯಾಪಕಗೊಳ್ಳಲ್ಲಿದೆ

ಇತ್ತ ಮುಂಗಾರು ವ್ಯಾಪಕಗೊಳ್ಳಲು ಅನುಕೂಲಕರ ಪರಿಸ್ಥಿತಿ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅಂಡಮಾನ್‌ ನಿಕೋಬಾರ್‌ ದ್ವೀಪಗಳಲ್ಲಿ ಮಾನ್ಸೂನ್‌ ಮತ್ತಷ್ಟು ವ್ಯಾಪಿಸಲಿದೆ. ಈ ವಾರಾಂತ್ಯದಲ್ಲಿ ಅದು ಕೇರಳ ಪ್ರವೇಶಿಸಲಿದೆ. ಆದಾಗಿ ಎರಡ್ಮೂರು ದಿನದಲ್ಲಿ ಮುಂಗಾರು ರಾಜ್ಯ ಪ್ರವೇಶಿಸಲಿದೆ ಎಂದು ಅಂದಾಜಿಸಲಾಗಿದೆ. ಈ ಮಧ್ಯೆ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದೆ. ಆದರೆ ಇದು ಮುಂಗಾರಿನ ಮೇಲೆ ಯಾವುದೆ ಪರಿಣಾಮ ಉಂಟು ಮಾಡುವುದಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ – ನಡು ದಾರಿಯಲ್ಲೆ ಡಿಸೇಲ್‌ ಖಾಲಿಯಾಗಿ ನಿಂತ KSRTC ಬಸ್‌, ಮಳೆಯಲ್ಲಿ ಪ್ರಯಾಣಿಕರ ಪರದಾಟ

Leave a Comment