ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 24 MAY 2024
SHIMOGA : ಬುದ್ದಿವಾದ ಹೇಳಲು ಮುಂದಾದ 112 ಇಆರ್ ಎಎಸ್ ಸಿಬ್ಬಂದಿ ಸಮವಸ್ತ್ರ (UNIFORM) ಹರಿದು ಹಲ್ಲೆ ಮಾಡಿದ ವ್ಯಕ್ತಿ ವಿರುದ್ಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಲವಗೊಪ್ಪದಿಂದ 112 ಸಹಾಯವಾಣಿಗೆ ಮೇ 19ರಂದು ಮಹಿಳೆಯೊಬ್ಬರು ಕರೆ ಮಾಡಿದ್ದರು. ತಮ್ಮ ಮನೆ ಬಳಿ ವ್ಯಕ್ತಿಯೊಬ್ಬ ತಮ್ಮ ಮೇಲೆ ಹಲ್ಲೆ ಮಾಡುತ್ತಿದ್ದಾನೆ ಎಂದು ದೂರು ನೀಡಿದ್ದರು.
ಇದನ್ನೂ ಓದಿ – ಕೃಷಿ ಹೊಂಡದಲ್ಲಿ ಬಿದ್ದ ಬಾಲಕನ ರಕ್ಷಣೆಗೆ ಧಾವಿಸಿದ ಯುವಕ, ಇಬ್ಬರು ಸಾವು, ಹೇಗಾಯ್ತು ಘಟನೆ?
ವಿಚಾರ ತಿಳಿದು ಸ್ಥಳಕ್ಕೆ ರೆಸ್ಪಾಂಡೆಂಟ್ ಮಹಿಳಾ ಮುಖ್ಯ ಪೇದೆ ಜತೆ ಪೇದೆ ತೆರಳಿದ್ದರು. ಸ್ಥಳದಲ್ಲಿ ಮಹಿಳೆಯು ಆರೋಪಿಸಿದ ವ್ಯಕ್ತಿಯನ್ನು ವಿಚಾರಿಸುವಾಗ ಆತ ಪೇದೆಯನ್ನು ನಿಂದಿಸಿ ಹಲ್ಲೆ ಮಾಡಿದ್ದಾನೆ. ಅಲ್ಲದೆ ಮಹಿಳಾ ರೆಸ್ಪಾಂಡೆಂಟ್ಗೂ ನಿಂದಿಸಿದ್ದಾನೆ. ಪೇದೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣದ ಸಂಬಂಧ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422