ಶಿವಮೊಗ್ಗ : ಮಗ ಅಭಿಜಯ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ್ದರಿಂದ ಸಂಭ್ರಮಾಚರಣೆಗೆ ಕಾಶ್ಮೀರಕ್ಕೆ (Kashmir) ತೆರಳಿದ್ದ ಮಂಜುನಾಥ್ ರಾವ್, ಉಗ್ರರ ದಾಳಿಗೆ ಬಲಿಯಾಗಿದ್ದಾರೆ. ಪತ್ನಿ ಮತ್ತು ಪುತ್ರನ ಕಣ್ಣೆದುರಲ್ಲೇ ಮಂಜುನಾಥ್ ರಾವ್ ತಲೆಗೆ ಉಗ್ರರು ಗುಂಡು ಹಾರಿಸಿದ್ದಾರೆ.
ಮಗನ ಉತ್ತಮ ಸಾಧನೆಗೆ
ಮಂಜುನಾಥ್ ರಾವ್ ಮತ್ತು ಪಲ್ಲವಿ ದಂಪತಿ ಪುತ್ರ ಅಭಿಜಯ ಪಿಯುಸಿ ಪರೀಕ್ಷೆಯಲ್ಲಿ ಶೇ.97ರಷ್ಟು ಅಂಕ ಗಳಿಸಿದ್ದ. ಮಗನ ಸಾಧನೆ ಸಂಭ್ರಮಿಸಲು ಕುಟುಂಬ ಕಾಶ್ಮೀರಕ್ಕೆ (Kashmir) ತೆರಳಿತ್ತು.
ಮಗನ ಫಲಿತಾಂಶ ಕೇಳಿ ಖುಷಿಯಾಗಿ ಮೂವರು ಸಂಭ್ರಮಿಸಲು ಕಾಶ್ಮೀರಕ್ಕೆ ತೆರಳಿದ್ದರು. ಆದರೆ ದೇವರ ಇಚ್ಛೆ ಏನಿತ್ತು ಗೊತ್ತಿಲ್ಲ.
– ಎಸ್.ಎನ್.ಚನ್ನಸಬಪ್ಪ, ಶಾಸಕ



ಇನ್ನೆರಡು ದಿನಕ್ಕೆ ವಾಪಸ್ ಬರಬೇಕಿತ್ತು
ಏ.19ರಂದು ಮಂಜುನಾಥ್ ರಾವ್, ಪಲ್ಲವಿ ಮತ್ತು ಅಭಿಜಯ ಅವರು ಪ್ಯಾಕೇಜ್ ಟೂರ್ ಮೇಲೆ ಕಾಶ್ಮೀರಕ್ಕೆ ತೆರಳಿದ್ದರು. ಏ.24ರಂದು ಮೂವರು ಶಿವಮೊಗ್ಗಕ್ಕೆ ಹಿಂತಿರುಗಬೇಕಿತ್ತು. ಆದರೆ ಮಿನಿ ಸ್ವಿಟ್ಜರ್‌ಲ್ಯಾಂಡ್ ಎಂದು ಕರೆಯಿಸಿಕೊಳ್ಳುವ ಪಹಾಲ್ಗಾಮ್‌ನ ಪೀಕ್ ಪಾಯಿಂಟ್‌ನಲ್ಲಿ ಉಗ್ರರ ದಾಳಿಗೆ ಮಂಜುನಾಥ್ ರಾವ್ ಬಲಿಯಾಗಿದ್ದಾರೆ.
ಇದನ್ನೂ ಓದಿ » ಉಗ್ರರ ದಾಳಿಗೆ ಮಗ ಬಲಿಯಾದ ವಿಚಾರ ತಾಯಿಗೆ ತಿಳಿದಿಲ್ಲ, ಹೇಗಿದೆ ಮಂಜುನಾಥ್ ಮನೆ ಬಳಿ ಪರಿಸ್ಥಿತಿ?

