ಸೂಡಾಗೆ ಒಂದು ವಾರದ ಡೆಡ್‌ಲೈನ್‌, ಬೇಡಿಕೆ ಈಡೇರಿಸದಿದ್ದರೆ ಕಾನೂನು ಹೋರಾಟದ ವಾರ್ನಿಂಗ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 28 MAY 2024

SHIMOGA : ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಪಕ್ಕದಲ್ಲಿ ಸಾರ್ವಜನಿಕರು ಬಳಕೆಯ ರಸ್ತೆಯಲ್ಲಿ ವಾಹನಗಳ ನಿಲುಗಡೆಗಾಗಿ ಶೆಡ್ (Shed) ನಿರ್ಮಿಸಲಾಗಿದೆ. ಇದನ್ನು ತಕ್ಷಣ ತೆರವು ಮಾಡಬೇಕು ಎಂದು ಒತ್ತಾಯಿಸಿ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಪದಾಧಿಕಾರಿಗಳು ಸೂಡಾ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ರಸ್ತೆಯಲ್ಲಿ ಶೆಡ್‌ ನಿರ್ಮಿಸಿರುವುದು ಕಾನೂನು ಬಾಹಿರ. ಈ ಬಗ್ಗೆ ಜಿಲ್ಲಾಡಳಿತಕ್ಕೆ ದೂರು ನೀಡಿದರೂ ಶೆಡ್‌ ತೆರವಾಗಿಲ್ಲ. ಶಿವಮೊಗ್ಗ ಮಹಾನಗರ ಯೋಜನೆ-2030ರ ನಕ್ಷೆ ಪ್ರಕಾರ ಈ ಶೆಡ್‌ ನಿರ್ಮಿಸಿರುವ ಜಾಗ ರಸ್ತೆಗೆಂದು ಮೀಸಲಾಗಿದೆ. ನಗರಾಭಿವೃದ್ಧಿ ಕಚೇರಿ ನಿರ್ಮಾಣವಾದ ದಿನದಿಂದಲೂ ಈ ಜಾಗ ಸಾರ್ವಜನಿಕರ ಬಳಕೆಗೆ ಮೀಸಲಾಗಿತ್ತು. ಈಗ ಶೆಡ್‌ ನಿರ್ಮಿಸಿರುವುದು ಶಿಕ್ಷಾರ್ಹ ಅಪರಾಧ. ಇನ್ನೊಂದು ವಾರದಲ್ಲಿ ಶೆಡ್‌ ತೆರವು ಮಾಡಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ – ಮೊಬೈಲ್‌ ನೆಟ್‌ವರ್ಕ್‌ಗಾಗಿ ಟವರ್‌ ಏರಿದ ಗ್ರಾಮಸ್ಥರು, ಅಧಿಕಾರಿಗಳು ಸ್ಥಳಕ್ಕೆ ದೌಡು, ಫಿಕ್ಸ್‌ ಆಯ್ತು ಗಡುವು

ಪ್ರಧಾನ ಕಾರ್ಯದರ್ಶಿ ಕೆ.ವಿ.ವಸಂತಕುಮಾರ್, ಸಂಘಟನಾ ಕಾರ್ಯದರ್ಶಿ ಡಾ. ಸತೀಶ್ ಕುಮಾರ್ ಶೆಟ್ಟಿ, ಪ್ರಮುಖರಾದ ಉಮೇಶ್ ಜಾಧವ್, ಚನ್ನವೀರಪ್ಪ ಗಾಮನಗಟ್ಟಿ, ಸೇತುರಾಮ್, ಜನಮೇಜಿರಾವ್, ಚನ್ನಪ್ಪ, ಚಂದ್ರಶೇಖರ ಗೌಡ, ವೆಂಕಟನಾರಾಯಣ್, ಕೇಶವಮೂರ್ತಿ, ಪ್ರಕಾಶ್, ಕೇಶವ, ದಿಗಂತ ಕುಮಾ‌ರ್ ಇತರರಿದ್ದರು.‌

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment