SHIVAMOGGA LIVE NEWS | 30 MAY 2024
SHIMOGA : ಮನೆ ಮುಂದೆ ನಿಲ್ಲಿಸಿದ್ದ ಕಾರು, ಬೈಕುಗಳು ಮತ್ತು ಆಟೋಗಳ ಗಾಜುಗಳನ್ನು (Glass) ದುಷ್ಕರ್ಮಿಗಳು ಒಡೆದಿದ್ದಾರೆ. ಹೊಸಮನೆ ಬಡಾವಣೆಯಲ್ಲಿ ರಾತ್ರಿ ಘಟನೆ ಸಂಭವಿಸಿದೆ. ಸ್ಥಳಕ್ಕೆ ದೊಡ್ಡಪೇಟೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ನಾಲ್ಕು ಕಾರುಗಳು, ನಾಲ್ಕು ದ್ವಿಚಕ್ರ ವಾಹನ ಮತ್ತು ಎರಡು ಆಟೋಗಳ ಗಾಜುಗಳನ್ನು ಒಡೆಯಲಾಗಿದೆ. ಸಂದೇಶ್ ಎಂಬುವವರಿಗೆ ಸೇರಿದ ಕಾರು, ಮಂಜು, ಲಿಂಗರಾಜು ಎಂಬುವವರಿಗೆ ಸೇರಿದ ಆಟೋಗಳು, ಸಿದ್ದಪ್ಪ, ಜಗದೀಶ್, ಚಂದ್ರಪ್ಪ ಎಂಬುವವರಿಗೆ ಸೇರಿದ ಬೈಕುಗಳಿಗೆ ಹಾನಿ ಮಾಡಲಾಗಿದೆ. ಜಗದೀಶ್ ಎಂಬುವವರ ಅಂಗಡಿ ಬಾಗಿಲಿನ ಬೀಗಕ್ಕೆ ಮಚ್ಚಿನಿಂದ ಹೊಡೆಯಲಾಗಿದೆ ಎಂದು ಆರೋಪಸಲಾಗಿದೆ.


ಇದನ್ನೂ ಓದಿ – ವಿದೇಶಕ್ಕೆ ತೆರಳಲು ಸಿದ್ಧವಾಗಿದ್ದ ಶಿವಮೊಗ್ಗದ ಪ್ರೊಫೆಸರ್ಗೆ ಲಕ್ಷ ಲಕ್ಷ ವಂಚನೆ, ಆಗಿದ್ದೇನು?





