ಮೈಸೂರು – ಶಿವಮೊಗ್ಗ ಎಕ್ಸ್‌ಪ್ರೆಸ್‌ ರೈಲಿಗೆ ಸಿಲುಕಿ ವ್ಯಕ್ತಿ ಸಾವು, ಹೇಗಾಯ್ತು ಘಟನೆ?

SHIVAMOGGA LIVE NEWS | 3 JUNE 2024 (ಈ ಸುದ್ದಿಯನ್ನು ಇನ್ನು 28 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

SHIMOGA : ವಿದ್ಯಾನಗರದ ಮಹಾದೇವಿ ಟಾಕೀಸ್‌ ನಿಲ್ದಾಣದಲ್ಲಿ ರೈಲಿಗೆ (TRAIN) ಸಿಲುಕಿ ಕಾರ್ಮಿಕರೊಬ್ಬರು ಸಾವನ್ನಪ್ಪಿದ್ದಾರೆ. ಗುರುಪುರದ ನಿವಾಸಿ ಎಸ್‌.ರುದ್ರಪ್ಪ (68) ಮೃತರು. ಮಹಾದೇವಿ ಟಾಕೀಸ್ ಹಿಂಭಾಗದ ರೈಲ್ವೆ ಹಳಿ ಅಕ್ಕಪಕ್ಕದಲ್ಲಿದ್ದ ಸೌದೆ ತರಲು ಹೋಗಿದ್ದಾಗ ಅವಘಡ ಸಂಭವಿಸಿದೆ. ಮೇಲ್ಸೇತುವೆ ಸಮೀಪ ರೈಲ್ವೆ ಹಳಿ ಬಳಿ ತೆರಳುತ್ತಿದ್ದಾಗ ಮೈಸೂರು-ತಾಳಗುಪ್ಪ ರೈಲು ಡಿಕ್ಕಿ ಹೊಡೆದಿದೆ. ರುದ್ರಪ್ಪ ಅವರು ಕಿವುಡು ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಶಿವಮೊಗ್ಗ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಇವತ್ತು ಮಳೆಯಾಗುತ್ತಾ? ಎಷ್ಟಿರುತ್ತೆ ತಾಪಮಾನ? ಇಲ್ಲಿದೆ ಇಡೀ ದಿನದ ರಿಪೋರ್ಟ್

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

Old-aged-man-succumbed-to-mysore-shimoga-express-train-at-shimoga.

Leave a Comment