ಮತ ಚಲಾಯಿಸಿ ಕೊಠಡಿಯಿಂದ ಹೊರ ಬಂದ ಉದ್ಯಮಿಗೆ ಕಾದಿತ್ತು ಆಘಾತ

SHIVAMOGGA LIVE NEWS | 3 JUNE 2024 (ಈ ಸುದ್ದಿಯನ್ನು ಇನ್ನು 39 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

SAGARA : ನೈಋತ್ಯ ಪದವೀಧರರ ಕ್ಷೇತ್ರದ ಚುನಾವಣೆಗೆ ಮತ ಚಲಾಯಿಸಲು ತೆರಳಿದ್ದ ಸಂದರ್ಭ ಮತಗಟ್ಟೆಯಲ್ಲಿ ಉದ್ಯಮಿಯೊಬ್ಬರ ಮೊಬೈಲ್‌ (Mobile Theft) ಕಳ್ಳತನವಾಗಿದೆ. ಸಾಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮತಗಟ್ಟೆಯಲ್ಲಿ ಉದ್ಯಮಿ ವಿನಯ್‌ ಎಂಬುವವರು ಮತ ಚಲಾಯಿಸಲು ತೆರಳಿದ್ದರು. ಮತ ಚಲಾಯಿಸುವ ಕೊಠಡಿಯೊಳಗೆ ಮೊಬೈಲ್‌ ಕೊಂಡೊಯ್ಯುವಂತಿಲ್ಲ ಎಂದು ಸಿಬ್ಬಂದಿ ತಿಳಿಸಿದ್ದರು.

ಸಿಬ್ಬಂದಿ ಸೂಚಿಸಿದ ಜಾಗದಲ್ಲಿ ಉದ್ಯಮಿ ವಿನಯ್‌ ಮೊಬೈಲ್‌ ಇಟ್ಟು ಹೋಗಿ ಮತ ಚಲಾಯಿಸಿದ್ದರು. ಕೊಠಡಿಯಿಂದ ಹೊರ ಬಂದಾಗ ವಿನಯ್‌ ಅವರ ಮೊಬೈಲ್‌ ನಾಪತ್ತೆಯಾಗಿತ್ತು. ಸಿಬ್ಬಂದಿಯನ್ನು ವಿಚಾರಿಸಿದಾಗ ತಮಗೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ. ಸಿಸಿಟಿವಿ ಕ್ಯಾಮರಾ ಇದ್ದರೂ ಕಾರ್ಯಾಚರಿಸುತ್ತಿಲ್ಲ ಎಂಬ ಸಬೂಬು ಹೇಳಿದ್ದಾರೆ ಎನ್ನಲಾಗಿದೆ. ಘಟನೆ ಸಂಬಂಧ ವಿನಯ್‌ ಅವರು ಸಾಗರ ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ

ಇದನ್ನೂ ಓದಿ – ಮಟನ್‌ ಬದಲು ಮೂಳೆಯೇ ಹೆಚ್ಚಾಗಿದೆ ಅಂದಿದ್ದಕ್ಕೆ ಗ್ರಾಹಕನ ಮೇಲೆ ಅಪ್ರಾಪ್ತನಿಂದ ಮಾರಣಾಂತಿಕ ಅಟ್ಯಾಕ್

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

Sagara Police Station Building

Leave a Comment