ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 7 JUNE 2024
RAINFALL NEWS : ಶಿವಮೊಗ್ಗ ಜಿಲ್ಲೆಯಾದ್ಯಂತ ಮುಂಗಾರು ಆವರಿಸಿಕೊಳ್ಳುತ್ತಿದೆ. ಇದರ ನಡುವೆ ಸಿಡಿಲು (LIGHTENING) ಬಡಿದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಅಂಗಡಿಯೊಂದು ಬೆಂಕಿಗೆ ಆಹುತಿಯಾಗಿದೆ.
ಸಿಡಿಲಿಗೆ ವ್ಯಕ್ತಿ ಬಲಿ
ಆಗುಂಬೆ ಸಮೀಪದ ಬಿದರಗೋಡು ಗ್ರಾಮದ ಗುಜುಗೊಳ್ಳಿ ಎಂಬಲ್ಲಿ ಗುರುವಾರ ಅಡಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನಿಗೆ ಸಿಡಿಲು ಬಡಿದು ಅಸುನೀಗಿದ್ದಾರೆ. ನಾಗೇಂದ್ರ (45) ಮೃತ ಕಾರ್ಮಿಕ. ಆಗುಂಬೆ ಭಾಗದಲ್ಲಿ ಗುಡುಗು ಸಿಡಿಲು ಸಹಿತ ಭಾರಿ ಮಳೆಯಾಗುತ್ತಿತ್ತು. ಗುಜಗೊಳ್ಳಿ ಗ್ರಾಮದ ಅಡಕೆ ತೋಟದಲ್ಲಿ ಕೆಲಸ ಮಾಡುವಾಗ ಮರಕ್ಕೆ ಬಡಿದ ಸಿಡಿಲು ಮರದ ಪಕ್ಕದಲ್ಲೇ ಇದ್ದ ನಾಗೇಂದ್ರಗೆ ತಾಗಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಘಟನೆ ಬೆನ್ನಿಗೆ ತೋಟದ ಮಾಲೀಕ ಕೇಶವ ಕಿಣಿ ಅವರ ಮೊಮ್ಮಗ ರಕ್ಷಿತ್ ಕಿಣಿ ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿ ಎರಡು ಲಕ್ಷ ರೂ. ಮೊತ್ತದ ಪರಿಹಾರದ ಚೆಕ್ ನೀಡಿದ್ದಾರೆ.
ಸಿಡಿಲಿಗೆ ಅಂಗಡಿ ಆಹುತಿ
HOLEHONNURU : ಜಾವಳ್ಳಿ ಬಸ್ ಸ್ಟಾಪ್ ಸಮೀಪ ಬುಧವಾರ ಸಂಜೆ ಸಿಡಿಲು ಬಡಿದು ಜಾವಳ್ಳಿಯ ವೇದಾವತಿ ಎಂಬುವವರ ಪ್ರಾವಿಜನ್ ಸ್ಟೋರ್ ಸುಟ್ಟು ಕರಕಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಬೆಂಕಿ ನಂದಿಸಿದ್ದಾರೆ. ಅಂಗಡಿ ವಸ್ತುಗಳು ಸಂಪೂರ್ಣ ಆಹುತಿಯಾಗಿವೆ. ಸಿಡಿಲು ಬಡಿದಾಗ ಮಾಲೀಕರು ಮನೆ ಹಿಂಭಾಗದಲ್ಲಿ ಇದ್ದು, ಅಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ – ಹೊಟೇಲ್‌ನಲ್ಲಿ ಬ್ಯಾಗ್ ಮರೆತ ಗ್ರಾಹಕ, ಒಳಗಿತ್ತು ಲಕ್ಷ ಲಕ್ಷ ಹಣ, ವಾಪಸ್ ಬಂದು CCTV ನೋಡಿದ್ಮೇಲೆ ಕಾದಿತ್ತು ಆಘಾತ
LATEST NEWS
- ಶಿವಮೊಗ್ಗ ವಿಮಾನ ನಿಲ್ದಾಣ, ಮಹತ್ವದ ಟೆಸ್ಟ್ನಲ್ಲಿ ಪಾಸ್, DoVR ಕೆಲಸ ಶುರು, ಏನಿದು? ಪ್ರಯೋಜನ ಏನು?

- ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯು ಹೆಚ್ಚಿದ ತಾಪಮಾನ? ಇವತ್ತು ಎಷ್ಟಿರುತ್ತೆ?

- ಭಟ್ಕಳದ ಮಹಿಳೆ ಸೇರಿ ನಾಲ್ವರು ನಗರ ಠಾಣೆ ಪೊಲೀಸರ ಬಲೆಗೆ, ಕಾರಣವೇನು? ಏನೇನೆಲ್ಲ ಸಿಕ್ತು?

- ಇಂದಿನ ಪಂಚಾಂಗ – ಯಾವ್ಯಾವ ಸಮಯ ಯಾವಾಗಿದೆ?

- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

About The Editor
ನಿತಿನ್ ಆರ್.ಕೈದೊಟ್ಲು






