ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 7 JUNE 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ಹೋಟೆಲ್‌ನಲ್ಲಿ (HOTEL) ಗ್ರಾಹಕ ಮರೆತುಹೋಗಿದ್ದ 7 ಲಕ್ಷ ರೂ. ನಗದು ಇದ್ದ ಬ್ಯಾಗ್ ಅನ್ನು ಕಳವು ಮಾಡಿದ್ದ ಆರೋಪಿಯನ್ನು ದೊಡ್ಡಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಎದುರಿನ ಬ್ರೈಟ್ ಹೋಟೆಲ್‌ನಲ್ಲಿ ಘಟನೆ ಸಂಭವಿಸಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
7 ಲಕ್ಷದ ಬ್ಯಾಗ್ ನಾಪತ್ತೆ
ಸಪ್ಲಯರ್, ಅಶೋಕನಗರದ ಹೇಮಂತ್‌ಕುಮಾರ್ ಬಂಧಿತ. ಸಾಗರ ತಾಲೂಕಿನ ಜಂಬಾನಿ ಗ್ರಾಮದ ಲೋಕೇಶ್ ಎಂಬುವರು ಮಂಗಳವಾರ ರಾತ್ರಿ ಬ್ರೈಟ್ ಹೋಟೆಲ್‌ನಲ್ಲಿ ಸ್ನೇಹಿತರೊಂದಿಗೆ ಊಟ ಮಾಡಿದ್ದರು. ಆದರೆ ಹಣವಿದ್ದ ಬ್ಯಾಗ್ ಅನ್ನು ಅಲ್ಲೇ ಬಿಟ್ಟು ಹೊರ ಬಂದಿದ್ದರು. ಕಾರಿನ ಬಳಿ ಹೋದಾಗ ಹಣದ ಬ್ಯಾಗ್ ಬಿಟ್ಟುಬಂದಿರುವುದು ಗಮನಕ್ಕೆ ಬಂದಿದ್ದು ತಕ್ಷಣವೆ ಹೋಟೆಲ್‌ಗೆ ಹೋಗಿ ಪರಿಶೀಲಿಸಿದಾಗ ಬ್ಯಾಗ್ ಇರಲಿಲ್ಲ.
ಹೋಟೆಲ್‌ನಲ್ಲಿದ್ದ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಸಫೈಯರ್ ಹೇಮಂತ್‌ಕುಮಾರ್ ಟೇಬಲ್ ಮೇಲಿದ್ದ ಬ್ಯಾಗ್ ತೆರೆದು ನೋಡಿ, ಅಲ್ಲಿಂದ ಸ್ಟೋರ್ ರೂಮ್‌ಗೆ ಕೊಂಡೊಯ್ದಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಹೋಟೆಲ್ ಮಾಲೀಕ ಸಪ್ಲಯರ್ ಹೇಮಂತ್‌ಕುಮಾರ್‌ಗೆ ಫೋನ್ ಮಾಡಿ ವಿಚಾರಿಸಿದ್ದು ನನಗೇನು ಗೊತ್ತಿಲ್ಲ ಎಂಬ ಹಾರಿಕೆ ಉತ್ತರ ನೀಡಿ ಫೋನ್ ಕರೆ ಸ್ಥಗಿತಗೊಳಿಸಿದ್ದಾನೆ. ಈ ಬಗ್ಗೆ ಲೋಕೇಶ್ ಅವರು ದೊಡ್ಡಪೇಟೆ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಇನ್‌ಸ್ಪೆಕ್ಟರ್ ರವಿ ಪಾಟೀಲ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದು, 7 ಲಕ್ಷ ರೂ. ಹಣವ ವಶಕ್ಕೆ ಪಡೆಯಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಇವತ್ತು ಭಾರಿ ಮಳೆ ಸಾಧ್ಯತೆ, ಎಲ್ಲೆಲ್ಲಿ? ತಾಪಮಾನ ಎಷ್ಟಿದೆ?
ಇನ್ಸ್‌ಪೆಕ್ಟರ್ ರವಿ ಪಾಟೀಲ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಪಿಎಸ್‌ಐ ಸುರೇಶ್, ಸಿಬ್ಬಂದಿ ತಿಮ್ಮಾಭೋವಿ, ಅಣ್ಣಪ್ಪ, ಸುರೇಶ್, ಪಾಲಾಕ್ಷ ನಾಯ್ಕ್, ಚಂದ್ರಾನಾಯ್ಕ್, ಮನೋಹರ್, ನಿತಿನ್, ಪುನಿತ್ ರಾವ್, ಬಸವರಾಜ್ ರವರನ್ನು ಒಳಗೊಂಡ ತನಿಖಾ ತಂಡ ರಚಿಸಲಾಗಿತ್ತು.