ಶಿವಮೊಗ್ಗ ಜಿಲ್ಲೆ ಮತ್ತಷ್ಟು ಕೂಲ್‌ ಕೂಲ್, ಇವತ್ತು ಎಲ್ಲೆಲ್ಲಿ ಎಷ್ಟಿರುತ್ತೆ ತಾಪಮಾನ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

SHIVAMOGGA LIVE NEWS | 11 JUNE 2024

WEATHER UPDATE : ಶಿವಮೊಗ್ಗ ಜಿಲ್ಲೆಯಾದ್ಯಂತ ಮುಂಗಾರು ಬಿರುಸಾಗಿದೆ. ಹಾಗಾಗಿ ತಾಪಮಾನ ತುಸು ಕಡಿಮೆಯಾಗಿದೆ. ಶಿವಮೊಗ್ಗದಲ್ಲಿ ಇವತ್ತು ಗರಿಷ್ಠ 29 ಡಿಗ್ರಿ, ಕನಿಷ್ಠ 21 ಡಿಗ್ರಿವರೆಗೆ ಇರಲಿದೆ. ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ಶಿವಮೊಗ್ಗದಲ್ಲಿ ಬೆಳಗ್ಗೆ 8ಕ್ಕೆ 21.9 ಡಿಗ್ರಿ ತಾಪಮಾನ ಇರಲಿದೆ. ಬೆಳಗ್ಗೆ 11ಕ್ಕೆ 22.8 ಡಿಗ್ರಿ, ಮಧ್ಯಾಹ್ನ 12ಕ್ಕೆ 23.1 ಡಿಗ್ರಿ, ಮಧ್ಯಾಹ್ನ 3ಕ್ಕೆ 23.1 ಡಿಗ್ರಿ, ಸಂಜೆ 6ಕ್ಕೆ 22.3 ಡಿಗ್ರಿ, ರಾತ್ರಿ 8ಕ್ಕೆ 21 ಡಿಗ್ರಿ, ರಾತ್ರಿ 10ಕ್ಕೆ 20.9 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ.

ಭದ್ರಾವತಿಯಲ್ಲಿ ಗರಿಷ್ಠ 29 ಡಿಗ್ರಿ, ಕನಿಷ್ಠ 21 ಡಿಗ್ರಿ. ತೀರ್ಥಹಳ್ಳಿಯಲ್ಲಿ ಗರಿಷ್ಠ 27 ಡಿಗ್ರಿ, ಕನಿಷ್ಠ 23 ಡಿಗ್ರಿ. ಹೊಸನಗರ, ಸಾಗರ, ಸೊರಬ, ಶಿಕಾರಿಪುರದಲ್ಲಿ ಗರಿಷ್ಠ 28 ಡಿಗ್ರಿ, ಕನಿಷ್ಠ 23 ಡಿಗ್ರಿ. ಜಿಲ್ಲೆಯಾದ್ಯಂತ ಇವತ್ತು ಗುಡುಗು ಸಹಿತ ಸಾಧಾರಣದಿಂದ ಭಾರಿ ಮಳೆಯಾಗಲಿದೆ ಎಂದು ಕೆಎಸ್‌ಎನ್‌ಡಿಎಂಸಿ ವರದಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ – ಕುಮಾರಸ್ವಾಮಿಗೆ ಉಕ್ಕು ಖಾತೆ, ಭದ್ರಾವತಿಯಲ್ಲಿ ಚಿಗುರೊಡೆದ ನಿರೀಕ್ಷೆ, ಇಲ್ಲಿದೆ ಕಂಪ್ಲೀಟ್‌ ರಿಪೋರ್ಟ್‌

Leave a Comment