ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 18 JUNE 2024
SHIMOGA : ರಾಶಿ ರಾಶಿ ಕಸ. ಎಲ್ಲೆಂದರಲ್ಲಿ ಬೆಳದ ಗಿಡ. ಹತ್ತರ ಹೋದರೆ ಸಾಕು ಕಾನ್ಸರ್ವೆನ್ಸಿಯಿಂದ ಮೂಗಿಗೆ ರಾಚುತ್ತಿತ್ತು ದುರ್ನಾಥ. ಇಂತಹ ಕನ್ಸರ್ವೆನ್ಸಿಯನ್ನು (conservancy) ಶಿವಮೊಗ್ಗದ ಟ್ರಾಫಿಕ್ ಪೊಲೀಸರೆ ಮುಂದೆ ನಿಂತು ಇಂತಹ ಕ್ಲೀನ್ ಮಾಡಿಸಿದ್ದಾರೆ. ಅಲ್ಲಿ ಈಗ ವಾಹನಗಳ ಪಾರ್ಕಿಂಗ್ಗೆ ವ್ಯವಸ್ಥೆ ಮಾಡಿದ್ದಾರೆ.
ಸವಾರ್ ಲೈನ್ ರಸ್ತೆಯ ಮಲ್ನಾಡ್ ಕೆಫೆ ಪಕ್ಕದ ಕನ್ಸರ್ವೆನ್ಸಿ ಕಸದ ತೊಟ್ಟಿಯಂತಾಗಿತ್ತು. ಇವತ್ತು ಸಂಚಾರಿ ಪೊಲೀಸರೆ ಮುಂದೆ ನಿಂತು ಕನ್ಸರ್ವೆನ್ಸಿಯನ್ನು ಸ್ವಚ್ಛಗೊಳಿಸಿದ್ದಾರೆ. ಈ ಕನ್ಸರ್ವೆನ್ಸಿಯಲ್ಲಿ ಇನ್ಮುಂದೆ ಕಸ ಹಾಕುವಂತಿಲ್ಲ ಎಂದು ಸಾರ್ವಜನಿಕರಿಗೆ ಸೂಚಿಸಿದ್ದಾರೆ. ಅಲ್ಲದೆ ಇದೇ ಕನ್ಸರ್ವೆನ್ಸಿಯಲ್ಲಿ ವಾಹನಗಳ ಪಾರ್ಕಿಂಗ್ಗೆ ವ್ಯವಸ್ಥೆ ಮಾಡಿದ್ದಾರೆ.
ಕನ್ಸರ್ವೆನ್ಸಿಯಲ್ಲಿ ವಾಹನಗಳ ಪಾರ್ಕಿಂಗ್ಗೆ ವ್ಯವಸ್ಥೆ ಮಾಡಿದರೆ ಸವಾರ್ಲೈನ್ ರಸ್ತಯಲ್ಲಿ ಟ್ರಾಫಿಕ್ ಸಮಸ್ಯೆ ನೀಗಲಿದೆ. ಇದೇ ಕಾರಣಕ್ಕೆ ಪಶ್ಚಿಮ ಸಂಚಾರ ಠಾಣೆ ಪಿಎಸ್ಐ ತಿರುಮಲೇಶ್, ಎಆರ್ಎಸ್ಐ ಪ್ರಕಾಶ್, ಸಿಬ್ಬಂದಿ ಸಂದೀಪ್, ಪ್ರಕಾಶ್, ಪ್ರಶಾಂತ್, ಮಹಾನಗರ ಪಾಲಿಕೆ ಆರೋಗ್ಯ ನಿರೀಕ್ಷಕ ವಿಕಾಸ್ ಅವರು ಮುಂದೆ ನಿಂತು ಸ್ವಚ್ಛ ಮಾಡಿಸಿದ್ದಾರೆ.
ಸವಾರ್ಲೈನ್ ರಸ್ತೆಯಲ್ಲಿ ಬದಲಿ ದಿನಗಳಂದು ವಾಹನಗಳ ಪಾರ್ಕಿಂಗ್ಗೆ ಅಧಿಸೂಚನೆ ಹೊರಡಿಸಲಾಗಿದೆ. ಇದನ್ನು ಉಲ್ಲಂಘಿಸಿದರೆ ಕ್ರಮ ಜರುಗಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ – ಭದ್ರಾ ಜಲಾಶಯದ ಒಳ ಹರಿವು ಕುಸಿತ, ಅಚ್ಚುಕಟ್ಟು ಭಾಗದ ರೈತರಲ್ಲಿ ಆತಂಕ, ಇವತ್ತು ಎಷ್ಟಿದೆ ನೀರಿನ ಮಟ್ಟ?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422