ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 20 JUNE 2024
SHIMOGA : ನಗರದ ಮಾಂಸಹಾರಿ ಫುಡ್ ಕೋರ್ಟ್ (Food Court) ಮೇಲೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದರು. ಮಳಿಗಗಳಲ್ಲಿ ಸ್ವಚ್ಛತೆ ಮತ್ತು ಆಹಾರದ ಗುಣಮಟ್ಟ ಪರಿಶೀಲಿಸಿದರು. ಹಲವು ಮಳಿಗೆಗಳಿಗೆ ನೊಟೀಸ್ ಜಾರಿ ಮಾಡಿದ್ದಾರೆ.
ಗೋಪಿ ಸರ್ಕಲ್ ಸಮೀಪದಲ್ಲಿರುವ ಮಾಂಸಹಾರ ಫುಡ್ ಕೋರ್ಟ್ ಮೇಲೆ ದಳಿ ನಡೆಸಲಾಗಿದೆ. ಈ ಸಂದರ್ಭ ಸ್ವಚ್ಛತೆ ಕಾಪಾಡದಿರುವುದು, ಆರೋಗ್ಯಕ್ಕೆ ಹಾನಿಕಾರಕ ಬಣ್ಣವನ್ನು ಆಹಾರಕ್ಕೆ ಬಳಕೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆ ಇಂತಹ ಮಳಿಗೆಗಳ ಮಾಲೀಕರಿಗೆ ನೊಟೀಸ್ ಜಾರಿ ಮಾಡಲಾಗಿದೆ.
ನೊಟೀಸ್‌ನಲ್ಲಿ ಏನೇನಿದೆ?
ಆಹಾರ ಪರವಾನಗಿ ನವೀಕರಿಸಿಲ್ಲ. ಮಳಿಗೆಗಳಲ್ಲಿ ಕೆಲಸ ಮಾಡುತ್ತಿರುವವರು ವೈಯಕ್ತಿಕ ಸ್ವಚ್ಛತೆ ಕಾಪಾಡುತ್ತಿಲ್ಲ. ಏಪ್ರಾನ್, ಕೈಗೆ ಗ್ಲೌಸ್, ಮುಖಕ್ಕೆ ಮಾಸ್ಕ್, ತಲೆ ಕೂದಲು ಮುಚ್ಚುವಂತಹ ಟೋಪಿ, ಪಾದರಕ್ಷೆ ಧರಿಸಿಲ್ಲ. ಕೆಲಸ ಮಾಡುವವರು ವೈದ್ಯಕೀಯ ತಪಾಸಣೆ ಪತ್ರ ಹೊಂದಿಲ್ಲ. ಐಎಸ್‌ಐ ಪ್ರಮಾಣಿತ ಬಣ್ಣವನ್ನು ತಿಂಡಿಗಳ ತಯಾರಿಕೆಯಲ್ಲಿ ಬಳಸಿಲ್ಲ ಎಂದು ನೊಟೀಸ್‌ನಲ್ಲಿ ಆರೋಪಿಸಲಾಗಿದೆ.
ಏಳು ದಿನದ ಗಡುವು
ದಾಳಿ ವೇಳೆ ಅಧಿಕಾರಿಗಳು ಗಮನಿಸಿದ ನ್ಯೂನತೆ ಸರಿಪಡಿಸಿ ಏಳು ದಿನಗಳ ಒಳಗೆ ಫೋಟೊ ಸಹಿತ ಲಿಖಿತ ಉತ್ತರ ನೀಡಬೇಕು. ಇಲ್ಲವಾದಲ್ಲಿ ಎಫ್‌ಎಸ್‌ಎಸ್‌ಐ ಕಾಯ್ದೆ ಅಡಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಲಾಗಿದೆ.
ಇದನ್ನೂ ಓದಿ – ತಹಶೀಲ್ದಾರ್ ಕೊಠಡಿ ಬಾಗಿಲಲ್ಲಿ ಕುಳಿತು ಶಾಸಕ ಆರಗ ಜ್ಞಾನೇಂದ್ರ ಪ್ರತಿಭಟನೆ, ಕಾರಣವೇನು?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422