ಇನ್‌ಸ್ಟಾಗ್ರಾಂಗೆ ಬಂತು ರಿಕ್ವೆಸ್ಟ್‌, ಅಕ್ಸೆಪ್ಟ್‌ ಮಾಡಿದ ಯುವತಿಗೆ ಕಾದಿತ್ತು ಶಾಕ್‌, ಆರೋಪಿಗೆ ವರ್ಷಗಟ್ಟಲೆ ಜೈಲು ಫಿಕ್ಸ್‌

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 20 JUNE 2024

SHIMOGA : ವಿದ್ಯಾರ್ಥಿನಿಯೊಬ್ಬಳ (ಹೆಸರು, ಊರು ಗೌಪ್ಯ) ಫೋಟೊವನ್ನು ಅಶ್ಲೀಲವಾಗಿ ಎಡಿಟ್‌ (Edited) ಮಾಡಿ ಇನ್‌ಸ್ಟಾಗ್ರಾಂನಲ್ಲಿ ಅಕೌಂಟ್‌ ಸಿದ್ದಪಡಿಸಿ ಸ್ನೇಹಿತರಿಗೆ ರಿಕ್ವೆಸ್ಟ್‌ ಕಳುಹಿಸಲಾಗಿದೆ. ಅಲ್ಲದೆ ಈ ಮೇಲ್‌ ಮೂಲಕವು ವಿದ್ಯಾರ್ಥಿನಿಗೆ ಮೆಸೇಜ್‌ ಕಳುಹಿಸಿ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಲಾಗಿದೆ.

ವಿದ್ಯಾರ್ಥಿನಿಯೊಬ್ಬಳ ಸ್ನೇಹಿತೆಗೆ ಇನ್‌ಸ್ಟಾಗ್ರಾಂನಲ್ಲಿ ಫ್ರೆಂಡ್‌ ರಿಕ್ವೆಸ್ಟ್‌ ಬಂದಿತ್ತು. ಅದನ್ನು ಅಕ್ಸೆಪ್ಟ್‌ ಮಾಡಿದಾಗ ವಿದ್ಯಾರ್ಥಿನಿಯ ಫೋಟೊವನ್ನು ಅಶ್ಲೀಲವಾಗಿ ಎಡಿಟ್‌ ಮಾಡಿರುವ ಫೋಟೊವನ್ನು ಪೋಸ್ಟ್‌ ಮಾಡಲಾಗಿತ್ತು. ರಾತ್ರಿ ವೇಳೆಗೆ ವಿದ್ಯಾರ್ಥಿನಿಯ ಜಿ ಮೇಲ್‌ ಖಾತೆಗೆ ಈ ಮೇಲ್‌ ಮೂಲಕ ಮೆಸೇಜ್‌ ಕಳುಹಿಸಲಾಗಿತ್ತು. ಮನನೊಂದ ವಿದ್ಯಾರ್ಥಿನಿ ಶಿವಮೊಗ್ಗದ ಸಿಇಎನ್‌ ಠಾಣೆಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಆರೋಪ ಸಾಬೀತಾದರೆ ಜೈಲು ಫಿಕ್ಸ್

ಕೃತ್ಯ ಎಸಗಿದಾತನ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಅನುಮತಿ ಇಲ್ಲದೆ ಪೋಟೊ ಬಳಕೆ ಅಪರಾಧ. ಯಾರದ್ದೋ ಫೋಟೊ ಬಳಕೆ, ನಕಲಿ ಖಾತೆಗಳನ್ನು ಸೃಷ್ಟಿಸುವಂತಿಲ್ಲ. ಕಾಯ್ದೆ ಸೆಕ್ಷನ್‌ 66 ಸಿ, 66 ಡಿ, 67 ಅಡಿ ಪ್ರಕರಣ ದಾಖಲಾಗಿದೆ.

ಆರೋಪ ಸಾಬೀತಾದಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿದವನಿಗೆ ಸೆಕ್ಷನ್‌ 66ಸಿ ಅಡಿ ಮೂರು ವರ್ಷ ಜೈಲು ಮತ್ತು ಒಂದು ಲಕ್ಷ ರೂ.ವರೆಗೆ ದಂಡ ಮತ್ತು 66 ಡಿ ಅಡಿ ಮೂರು ವರ್ಷ ಜೈಲು, ಒಂದು ಲಕ್ಷ ರೂ. ವರೆಗೆ ದಂಡ ವಿಧಿಸಬಹುದಾಗಿದೆ. ಐಟಿ ಕಾಯ್ದೆ ಸೆಕ್ಷನ್‌ 67 ಅಡಿ ಆರೋಪ ಸಾಬೀತಾದಲ್ಲಿ ಮೂರು ವರ್ಷ ಜೈಲು ಮತ್ತು ಐದು ಲಕ್ಷ ರೂ.ವರೆಗೆ ದಂಡ ವಿಧಿಸಬಹುದಾಗಿದೆ.

ಇದನ್ನೂ ಓದಿ – ಶಿವಮೊಗ್ಗದಲ್ಲಿ ನಟ ದರ್ಶನ್‌ ವಿರುದ್ಧ ಆಕ್ರೋಶ, ವೀರಶೈವ ಸಮಾಜದಿಂದ ಹೋರಾಟ, ಯಾರೆಲ್ಲ ಏನೇನು ಹೇಳಿದರು?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment