ಶಿವಮೊಗ್ಗ ಲೈವ್
SHIVAMOGGA LIVE NEWS | 23 JUNE 2024 (ಈ ಸುದ್ದಿಯನ್ನು ಇನ್ನು 35 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
SHIMOGA : ಕೆಎಸ್ಆರ್ಟಿಸಿ ರಾಜಹಂಸ ಬಸ್ ಮತ್ತು ಬೈಕ್ ಮಧ್ಯೆ ಅಪಘಾತ ಸಂಭವಿಸಿ ಯುವಕ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ. ಶಿವಮೊಗ್ಗ ಬೈಪಾಸ್ (Bypass) ರಸ್ತೆಯ ಊರುಗಡೂರು ಸರ್ಕಲ್ನಲ್ಲಿ ಘಟನೆ ಸಂಭವಿಸಿದೆ.
ಶ್ರೀರಾಮಪುರದ ಸಂತೋಷ್ (23) ಮೃತ ದುರ್ದೈವಿ. ಬೆಳಗಿನ ಜಾವ ಹೊಟೇಲ್ ಕೆಲಸಕ್ಕೆ ತೆರಳುತ್ತಿದ್ದಾಗ ಅವಘಡ ಸಂಭವಿಸಿದೆ.

ಶಿವಮೊಗ್ಗ ಬೈಪಾಸ್ ರಸ್ತೆಯಲ್ಲಿ ಭಾನುವಾರ ಬೆಳಗ್ಗೆ ಅಪಘಾತಕ್ಕೀಡಾದ ರಾಜಹಂಸ ಬಸ್
ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ
ರಾಜಹಂಸ ಬಸ್ ಬೆಂಗಳೂರಿನಿಂದ ಬರುತ್ತಿತ್ತು. ಬೈಪಾಸ್ ರಸ್ತೆ ಮೂಲಕ ನಿಲ್ದಾಣದ ಕಡೆಗೆ ತೆರಳುತ್ತಿತ್ತು. ಬೈಕ್ಗೆ ಡಿಕ್ಕಿ ಹೊಡೆದು ಡಿವೈಡರ್ ಹಾರಿ ಬಸ್ ನಿಂತಿತ್ತು. ಸಂತೋಷ್ ಮೃತದೇಹ ಬಸ್ಸಿನಡಿ ಸಿಲುಕಿ ನಜ್ಜುಗುಜ್ಜಾಗಿತ್ತು. ಪಶ್ಚಿಮ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಯಡೂರು ಸಮೀಪ ಅಬ್ಬಿ ಫಾಲ್ಸ್ನಲ್ಲಿ ಕಾಲು ಜಾರಿ ಬಿದ್ದು, ಯುವಕ ನೀರುಪಾಲು
ಗೂಗಲ್ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:
