ಶಿವಮೊಗ್ಗದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಶ್ರೀಧರ್‌, ಅಭಿನಂದರೆ ಸ್ವೀಕರಿಸಿ ಏನೆಲ್ಲ ಹೇಳಿದರು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 24 JUNE 2024

SHIMOGA : ಜೀವನದಲ್ಲಿ ಗುರಿ, ಆದರ್ಶಗಳಿದ್ದರೆ ನಮ್ಮಲ್ಲಿ ಯಾವ ಕೊರತೆಯಿದೆ ಎಂಬ ಬಗ್ಗೆ ಯೋಚನೆ ಮಾಡುವುದಿಲ್ಲ ಎಂದು ಪದ್ಮಶ್ರೀ ಪ್ರಶಸ್ತಿ (Padmashree Awardee) ಪುರಸ್ಕೃತ, ಚಾಣಕ್ಯ ವಿಶ್ವವಿದ್ಯಾಲಯದ ಕುಲಾಪತಿ ಡಾ.ಎಂ.ಕೆ.ಶ್ರೀಧರ್ ಹೇಳಿದರು.

ಪೀಪಲ್ಸ್ ಫೋರಂ ಫಾರ್ ಕರ್ನಾಟಕ ಎಜುಕೇಶನ್‌ನಿಂದ ನಗರದ ಅಂಬೇಡ್ಕರ್ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಚಳವಳಿಯ ಮೂಲಕ ಆರ್‌ಎಸ್‌ಎಸ್ ಮತ್ತು ಎಬಿವಿಪಿಯ ಸಂಪರ್ಕಕ್ಕೆ ಬಂದೆ. ಈ ಎರಡೂ ಸಂಘಟನೆಗಳು ಶಿಕ್ಷಣ ಕ್ಷೇತ್ರದಲ್ಲಿ ರಾಷ್ಟ್ರೀಯ ವಿಚಾರಧಾರೆಯ ಮೇಲೆ ಕೆಲಸ ಮಾಡಲು ಪ್ರೇರಣೆ ನೀಡಿದವು ಎಂದರು.

ಯಾವುದೆ ಪ್ರಶಸ್ತಿ ಬಂದಾಗ ಅದು ನನಗೆ ಬಂದಿತು ಎಂದುಕೊಳ್ಳುವುದು ಮೂರ್ಖತನ. ಜೀವನದಲ್ಲಿ ಆದರ್ಶ, ಗುರಿ ಬೇಕು. ಅದರ ಜತೆ ಪ್ರಯತ್ನವೂ ಅವಶ್ಯಕ. ಶಿಕ್ಷಣ ಕ್ಷೇತ್ರದಲ್ಲಿ ಆಗಿರುವ ಕೆಲಸಗಳು ಯಾರೋ ಒಬ್ಬರಿಂದ ಆಗಿಲ್ಲ. ಹಲವರ ಶ್ರಮದಿಂದ ಅವು ಆಗಿವೆ. ಆದರೆ ಪ್ರಶಸ್ತಿ ಮಾತ್ರ ವ್ಯಕ್ತಿಗೆ ಸಿಕ್ಕಿದೆ. ತಾವು ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಲು ತೆರಳಿದ ವೇಳೆ ಪ್ರಶಸ್ತಿ ಪಡೆಯಲು ಬಂದಿದ್ದ ಇತರರ ಮುಂದೆ ನನ್ನ ಸಾಧನೆ ಏನೂ ಅಲ್ಲ ಎನ್ನಿಸಿತು ಎಂದರು.

Padmashree-Awardee-Dr-Shridhar-in-Shimoga.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಎಂ.ಕೆ.ಶ್ರೀಧರ್‌ ಅವರಿಗೆ ಶಿವಮೊಗ್ಗದಲ್ಲಿ ಅಭಿನಂದನೆ ಸಲ್ಲಿಸಲಾಯಿತು.

ಇದು ವ್ಯಕ್ತಿಯೊಬ್ಬನಿಂದ ಆದ ಕೆಲಸವಲ್ಲ. ಆ ವ್ಯಕ್ತಿ ಈ ಸಾಧನೆ ಮಾಡಲು ಬಾಲ್ಯದಿಂದ ಸಹಕರಿಸಿದ ಪೋಷಕರು, ಶಿಕ್ಷಕರು, ಬಂಧುಗಳು, ಸ್ನೇಹಿತರು ಕಾರಣರಾಗಿರುತ್ತಾರೆ. ಜೀವನದಲ್ಲಿ ನನಗೆ ಮಾರ್ಗದರ್ಶನ ಮಾಡಿದ ಎಲ್ಲರಿಗೂ ಸಂಘಟನೆಗಳಿಗೂ ಧನ್ಯವಾದಗಳು. ಪ್ರತಿಯೊಬ್ಬರಲ್ಲೂ ಒಳ್ಳೆಯ ಗುಣವಿದೆ. ಕೆಟ್ಟ ವ್ಯಕ್ತಿಯಲ್ಲಿನ ಒಳ್ಳೆ ಗುಣವನ್ನು ನಾವು ಗುರುತಿಸಬೇಕು. ಆಗ ಬದಲಾವಣೆ ಸಾಧ್ಯ ಎಂದರು.

ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಮಾತನಾಡಿ, ಈಗ ಮೊದಲಿನಂತೆ ಪದ್ಮ ಪ್ರಶಸ್ತಿಯನ್ನು ಹುಡುಕಿಕೊಂಡು ಹೋಗಬೇಕಿಲ್ಲ. ಅದೆ ಈಗ ಅರ್ಹರನ್ನು ಹುಡುಕಿಕೊಂಡು ಬರುತ್ತಿದೆ. ಅದಕ್ಕೆ ಎಂ.ಕೆ.ಶ್ರೀಧರ್ ಉದಾಹರಣೆ. ಸ್ವಾತಂತ್ರ್ಯ ಬಂದಾಗಿನಿಂದ ನಮ್ಮ ಮಕ್ಕಳಿಗೆ ಏನು ಹೇಳಿಕೊಡಬೇಕು ಎಂಬ ಬಗ್ಗೆ ಚರ್ಚೆಗಳು ನಿರಂತರವಾಗಿ ನಡೆಯುತ್ತಲೆ ಬಂದಿವೆ. ಮಕ್ಕಳಿಗೆ ನೈತಿಕ ಶಿಕ್ಷಣದ ಅವಶ್ಯಕತೆ ಇದೆ. ಶೈಕ್ಷಣಿಕ ಕ್ರಾಂತಿ ಆಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಶಿಧರ್ ಭೂಪಾಳಂ ವಹಿಸಿದ್ದರು. ಧರ್ಮಪ್ರಸಾದ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರುದ್ರೇಗೌಡ, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಜೆ.ಎಸ್. ಸದಾನಂದ, ಎ.ಜೆ.ರಾಮಚಂದ್ರ, ಡಾ.ರವಿಕಿರಣ್, ಎಬಿವಿಪಿ ರಾಜ್ಯ ಕಾರ್ಯದರ್ಶಿ ಪ್ರವೀಣ್ ಇದ್ದರು.

ಇದನ್ನೂ ಓದಿ – ಯುವತಿಗೆ ವಂಚನೆ, ಹಸೆಮಣೆ ಏರಲು ಸಜ್ಜಾಗಿದ್ದ ಸಾಗರ ಬಿಜೆಪಿ ಮುಖಂಡ ಅರೆಸ್ಟ್‌

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : June 24, 2024

ಬೊಮ್ಮನಕಟ್ಟೆಯಲ್ಲಿ ನಿರ್ಮಾಣ ಹಂತದ ಮನೆಗೆ ಬೆಳಗ್ಗೆ ಬಂದ ಇಂಜಿನಿಯರ್‌ಗೆ ಕಾದಿತ್ತು ಶಾಕ್‌, ಆಗಿದ್ದೇನು?

ಬೊಮ್ಮನಕಟ್ಟೆಯಲ್ಲಿ ನಿರ್ಮಾಣ ಹಂತದ ಮನೆಗೆ ಬೆಳಗ್ಗೆ ಬಂದ ಇಂಜಿನಿಯರ್‌ಗೆ ಕಾದಿತ್ತು ಶಾಕ್‌, ಆಗಿದ್ದೇನು?

ದೀವರ ಕ್ಷೇಮಾಭಿವೃದ್ಧಿ ಸಂಘ; ಕಾರ್ಯಕಾರಿ ಸಮಿತಿ ಪುನರ್‌ ರಚನೆ, ಯಾರಿಗೆ ಯಾವ ಜವಾಬ್ದಾರಿ?

ದೀವರ ಕ್ಷೇಮಾಭಿವೃದ್ಧಿ ಸಂಘ; ಕಾರ್ಯಕಾರಿ ಸಮಿತಿ ಪುನರ್‌ ರಚನೆ, ಯಾರಿಗೆ ಯಾವ ಜವಾಬ್ದಾರಿ?

ಶಿವಮೊಗ್ಗದ ಶಕ್ತಿ ಟೊಯೊಟಾ ಶೋ ರೂಂನಲ್ಲಿ ಕೆಲಸ ಖಾಲಿ ಇದೆ

ಶಿವಮೊಗ್ಗದ ಶಕ್ತಿ ಟೊಯೊಟಾ ಶೋ ರೂಂನಲ್ಲಿ ಕೆಲಸ ಖಾಲಿ ಇದೆ

ಶಿವಮೊಗದ ಸಿಟಿ ಬಸ್ಸಿನಲ್ಲಿ ಶಿಕ್ಷಕಿಯ ₹4,00,000 ದ ಮಾಂಗಲ್ಯ ಸರ ಕಳ್ಳತನ, ಹೇಗಾಯ್ತು ಘಟನೆ?

ಶಿವಮೊಗದ ಸಿಟಿ ಬಸ್ಸಿನಲ್ಲಿ ಶಿಕ್ಷಕಿಯ ₹4,00,000 ದ ಮಾಂಗಲ್ಯ ಸರ ಕಳ್ಳತನ, ಹೇಗಾಯ್ತು ಘಟನೆ?

ಶಿವಮೊಗ್ಗದ ಜಿಲ್ಲೆಯ ಮೂವರು ಪೊಲೀಸರಿಗೆ ಮುಖ್ಯಮಂತ್ರಿ ಪದಕ

ಶಿವಮೊಗ್ಗದ ಜಿಲ್ಲೆಯ ಮೂವರು ಪೊಲೀಸರಿಗೆ ಮುಖ್ಯಮಂತ್ರಿ ಪದಕ

ಕಾಳಿಂಗ ಸರ್ಪದ ಕಾರಣಕ್ಕೆ ಅಡಿಕೆ ಲಾರಿ ಪಲ್ಟಿ, ಆಗಿದ್ದೇನು?

ಕಾಳಿಂಗ ಸರ್ಪದ ಕಾರಣಕ್ಕೆ ಅಡಿಕೆ ಲಾರಿ ಪಲ್ಟಿ, ಆಗಿದ್ದೇನು?

ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ವಿರುದ್ಧ ಕಾಮೆಂಟ್‌ ಹಾಕಿದ ವ್ಯಕ್ತಿಗೆ ಸಂಕಷ್ಟ, ಆಗಿದ್ದೇನು?

ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ವಿರುದ್ಧ ಕಾಮೆಂಟ್‌ ಹಾಕಿದ ವ್ಯಕ್ತಿಗೆ ಸಂಕಷ್ಟ, ಆಗಿದ್ದೇನು?

ಕೆರೆಗೆ ಬಿದ್ದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಸಾವು, ಆಗಿದ್ದೇನು?

ಕೆರೆಗೆ ಬಿದ್ದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಸಾವು, ಆಗಿದ್ದೇನು?

ಶಿವಮೊಗ್ಗದ ಮೈಲಾರೇಶ್ವರ ದೇವಸ್ಥಾನದಲ್ಲಿ ನಾಳೆ ವಿಶೇಷ ಧಾರ್ಮಿಕ ಕಾರ್ಯಕ್ರಮ, ಏನೇನಿರುತ್ತೆ?

ಶಿವಮೊಗ್ಗದ ಮೈಲಾರೇಶ್ವರ ದೇವಸ್ಥಾನದಲ್ಲಿ ನಾಳೆ ವಿಶೇಷ ಧಾರ್ಮಿಕ ಕಾರ್ಯಕ್ರಮ, ಏನೇನಿರುತ್ತೆ?

ಮಾರ್ಚ್‌ 30ರಂದು ಶಿವಮೊಗ್ಗಕ್ಕೆ ಬರ್ತಿದ್ದಾರೆ ಪೇಜಾವರ ಮಠದ ಸ್ವಾಮೀಜಿ

ಮಾರ್ಚ್‌ 30ರಂದು ಶಿವಮೊಗ್ಗಕ್ಕೆ ಬರ್ತಿದ್ದಾರೆ ಪೇಜಾವರ ಮಠದ ಸ್ವಾಮೀಜಿ

Leave a Comment