ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 5 JULY 2024
SHIMOGA : ಸದ್ಯದಲ್ಲೆ ಶಿವಮೊಗ್ಗ – ಯಶವಂತಪುರ ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭವಾಗಲಿದೆ. ಅಲ್ಲದೆ ಹೊಸ ರೈಲ್ವೆ ಸಂಪರ್ಕ ಮತ್ತು ಯೋಜನೆಗಳಿಗೆ ರೈಲ್ವೆ ಸಚಿವರಿಗೆ ಮನವಿ ಮಾಡಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ.ವೈ.ರಾಘವೇಂದ್ರ, ಶಿವಮೊಗ್ಗಕ್ಕೆ ಹೊಸ ರೈಲುಗಳು, ವಿವಿಧ ಯೋಜನೆಗಳ ಮಂಜೂರಾತಿ ಕುರಿತು ತಿಳಿಸಿದರು.
ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ರಾಜ್ಯ ಸಚಿವ ವಿ.ಸೋಮಣ್ಣ ಅವರನ್ನು ಭೇಟಿಯಾಗಿದ್ದೆ. ಸರ್ಕಾರ ರಚನೆಯಾಗಿ ಒಂದು ತಿಂಗಳ ಒಳಗೆ ಶಿವಮೊಗ್ಗ – ಚೆನ್ನೈ ನಡುವೆ ಹೊಸ ರೈಲು ಮಂಜೂರು ಮಾಡಿದ್ದಾರೆ. ಗುರುವಾರ ಸಂಜೆ ಅಧಿಕೃತ ಆದೇಶವಾಗಿದೆ. ಸಂಜೆ 4 ಗಂಟೆಗೆ ಶಿವಮೊಗ್ಗದಿಂದ ಹೊರಟು ಬೆಳಗ್ಗೆ 4.45ಕ್ಕೆ ಚೆನ್ನೈ ತಲುಪಲಿದೆ. ಪ್ರತಿ ದಿನ ಈ ರೈಲು ಸಂಚರಿಸಲಿದೆ. ಶಿವಮೊಗ್ಗದಿಂದ ಬೆಂಗಳೂರು ಮಾರ್ಗವಾಗಿ ಚೆನ್ನೈ ತಲುಪಲಿದೆ. ಚೆನ್ನೈನಿಂದ ರಾತ್ರಿ 11.30ಕ್ಕೆ ಹೊರಟು ಮರುದಿನ ಮಧ್ಯಾಹ್ನ 1 ಗಂಟೆಗೆ ಶಿವಮೊಗ್ಗ ತಲುಪಲಿದೆ. ಸದ್ಯದಲ್ಲೇ ರೈಲಿಗೆ ಚಾಲನೆ ನೀಡುವ ದಿನಾಂಕ ಪ್ರಕಟಿಸಲಾಗುತ್ತದೆ.ಸದ್ಯದಲ್ಲೆ ಹೊಸ ರೈಲು, ಸಮಯ ಪ್ರಕಟ

ಶಿವಮೊಗ್ಗ – ಬೀರೂರು ಮಧ್ಯೆ 62 ಕಿ.ಮೀ ರೈಲ್ವೆ ಮಾರ್ಗ ಡಬ್ಲಿಂಗ್ ಕಾರ್ಯಕ್ಕೆ ನೈಋತ್ಯ ರೈಲ್ವೆ ವತಿಯಿಂದ ರೈಲ್ವೆ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈಚೆಗೆ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯ ಮರುದಿನವೇ 1258 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿದ್ದಾರೆ. ಆದಷ್ಟು ಶೀಘ್ರ ಯೋಜನೆಗೆ ಒಪ್ಪಿಗೆ ಸಿಗುವ ಸಾಧ್ಯತೆ ಇದೆ.ಬೀರೂರುವರೆಗೆ ಮಾರ್ಗ ಡಬ್ಲಿಂಗ್ ಪ್ರಸ್ತಾವನೆ

ಶಿವಮೊಗ್ಗದಿಂದ ಕರಾವಳಿಗೆ ರೈಲ್ವೆ ಸಂಪರ್ಕ ಕಲ್ಪಿಸುವ ಪ್ರಯತ್ನ ಆರಂಭಿಸಲಾಗಿದೆ. ಶಿವಮೊಗ್ಗ – ಬೀರೂರು – ಕಡೂರು ಮೂಲಕ ಸಕಲೇಶಪುರ ಮತ್ತು ಬೇಲೂರಿಗೆ ರೈಲ್ವೆ ಸಂಪರ್ಕ ಕಲ್ಪಿಸಲು ಯೋಜಿಸಲಾಗಿದೆ. ಇದರಿಂದ ಮಂಗಳೂರು, ಸುಬ್ರಹ್ಮಣಕ್ಕೆ ನೇರ ರೈಲ್ವೆ ವ್ಯವಸ್ಥೆ ಮಾಡಬಹುದು.ಶಿವಮೊಗ್ಗದಿಂದ ಕರಾವಳಿಗೆ ಸಂಪರ್ಕಕ್ಕೆ ಪ್ಲಾನ್

ಶಿವಮೊಗ್ಗಕ್ಕೆ ವಂದೇ ಭಾರತ್ ರೈಲು ತರುವ ಪ್ರಯತ್ನವಾಗಿದೆ. ಯಶವಂತಪುರ – ಶಿವಮೊಗ್ಗ ಮಧ್ಯೆ ವಂದೇ ಭಾರತ್ ಸಂಚಾರ ಆರಂಭವಾಗಲಿದೆ. ಈಗಾಗಲೇ ಇದಕ್ಕೆ ಸಿದ್ಧತೆ ಆರಂಭವಾಗಿದೆ. ಸಮಯ ಹೊಂದಾಣಿಕೆ ಕಾರ್ಯ ನಡೆಯುತ್ತಿದೆ. ಸದ್ಯದಲ್ಲೆ ವಂದೇ ಭಾರತ್ ರೈಲು ಶಿವಮೊಗ್ಗಕ್ಕೆ ಬರಲಿದೆ.ಸದ್ಯದಲ್ಲೆ ವಂದೇ ಭಾರತ್ ರೈಲು

ಶಿವಮೊಗ್ಗ ಜಿಲ್ಲೆಗೆ ಹೊಸ ರೈಲ್ವೆ ಯೋಜನೆಗಳು, ರೈಲುಗಳ ಸಮಯ ಮರು ಹೊಂದಾಣಿಕೆ ಸೇರಿದಂತೆ ವಿವಿಧ ವಿಷಯಗಳ ಕುರಿತು ರೈಲ್ವೆ ಸಚಿವರ ಜೊತೆ ಚರ್ಚೆಯಾಗಿದೆ. ಇದಕ್ಕೆ ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ಸಂಸದ ರಾಘವೇಂದ್ರ ತಿಳಿಸಿದರು.
ಇದನ್ನೂ ಓದಿ – ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಸಿಇಓ ವರ್ಗಾವಣೆ, ಯಾರು ಹೊಸ ಸಿಇಓ?
LATEST NEWS
- ಶಿವಮೊಗ್ಗ ವಿಮಾನ ನಿಲ್ದಾಣ, ಮಹತ್ವದ ಟೆಸ್ಟ್ನಲ್ಲಿ ಪಾಸ್, DoVR ಕೆಲಸ ಶುರು, ಏನಿದು? ಪ್ರಯೋಜನ ಏನು?

- ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯು ಹೆಚ್ಚಿದ ತಾಪಮಾನ? ಇವತ್ತು ಎಷ್ಟಿರುತ್ತೆ?

- ಭಟ್ಕಳದ ಮಹಿಳೆ ಸೇರಿ ನಾಲ್ವರು ನಗರ ಠಾಣೆ ಪೊಲೀಸರ ಬಲೆಗೆ, ಕಾರಣವೇನು? ಏನೇನೆಲ್ಲ ಸಿಕ್ತು?

- ಇಂದಿನ ಪಂಚಾಂಗ – ಯಾವ್ಯಾವ ಸಮಯ ಯಾವಾಗಿದೆ?

- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

About The Editor
ನಿತಿನ್ ಆರ್.ಕೈದೊಟ್ಲು






