ಶಿವಮೊಗ್ಗ ಜಿಲ್ಲೆಯ ಅಲ್ಲಲ್ಲಿ ಇವತ್ತು ಭಾರಿ ಮಳೆ ಸಾಧ್ಯತೆ, ಎಷ್ಟಿರುತ್ತೆ ಇವತ್ತಿನ ತಾಪಮಾನ?

SHIVAMOGGA LIVE NEWS | 10 JULY 2024

ಸುದ್ದಿಯ ಮುಂದಿನ ಭಾಗ ಕೆಳಗಿದೆ

WEATHER REPORT : ಹವಾಮಾನ ಇಲಾಖೆ ಕಳೆದ ಎರಡು ದಿನದಿಂದ ಶಿವಮೊಗ್ಗ ಜಿಲ್ಲೆಗೆ ಯೆಲ್ಲೊ ಅಲರ್ಟ್‌ ಪ್ರಕಟಿಸಿದ್ದರು ಮಳೆ ಪ್ರಮಾಣ ಕಡಿಮೆಯಾಗಿತ್ತು. ಆದರೆ ಇವತ್ತು ಯಾವುದೆ ಅಲರ್ಟ್‌ ಪ್ರಕಟಿಸಿಲ್ಲ. ಇನ್ನೊಂದೆಡೆ ಜಿಲ್ಲೆಯಲ್ಲಿ ತಾಪಮಾನ ತುಸು ಇಳಿಕೆಯಾಗಿದೆ. ಶಿವಮೊಗ್ಗ ತಾಲೂಕಿನಲ್ಲಿ ಇವತ್ತು ಗರಿಷ್ಠ 28 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 21 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ.

ಶಿವಮೊಗ್ಗದಲ್ಲಿ ಬೆಳಗ್ಗೆ 7ಕಲ್ಕೆ 21.9 ಡಿಗ್ರಿ, ಬೆಳಗ್ಗೆ 10ಕ್ಕೆ 25.7 ಡಿಗ್ರಿ, ಮಧ್ಯಾಹ್ನ 1 ಗಂಟೆಗೆ 26.6 ಡಿಗ್ರಿ, ಸಂಜೆ 5 ಗಂಟೆಗೆ 23.5 ಡಿಗ್ರಿ, ರಾತ್ರಿ 8 ಗಂಟೆಗೆ 21.7 ಡಿಗ್ರಿ, ರಾತ್ರಿ 10ಕ್ಕೆ 21.2 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ.

Nanjappa Hospital Advertisement

WEATHER-REPORT-SHIMOGA-

ಭದ್ರಾವತಿಯಲ್ಲಿ ಗರಿಷ್ಠ 28 ಡಿಗ್ರಿ, ಕನಿಷ್ಠ 21 ಡಿಗ್ರಿ ಸೆಲ್ಸಿಯಸ್‌ ಇರಲಿದೆ. ತೀರ್ಥಹಳ್ಳಿಯಲ್ಲಿ ಗರಿಷ್ಠ 29 ಡಿಗ್ರಿ, ಕನಿಷ್ಠ 23 ಡಿಗ್ರಿ ಸೆಲ್ಸಿಯಸ್‌ ಸಾಧ್ಯತೆ ಇದೆ. ಹೊಸನಗರ, ಸಾಗರ, ಸೊರಬ ಮತ್ತು ಶಿಕಾರಿಪುರದಲ್ಲಿ ಗರಿಷ್ಠ 27 ಡಿಗ್ರಿ, ಕನಿಷ್ಠ 22 ಡಿಗ್ರಿ ಸೆಲ್ಸಿಯಸ್‌ ಇರಲಿದೆ ಎಂದು ತಿಳಿಸಲಾಗಿದೆ. ಜಿಲ್ಲೆಯ ವಿವಿಧೆಡೆ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ – ಅಡಿಕೆ ಧಾರಣೆ | 9 ಜುಲೈ 2024 | ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್?

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.
Shivamogga Live Promotion

Leave a Comment