ಹವಾಮಾನ ವರದಿ: ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಪ್ರಮಾಣ ಸಂಪೂರ್ಣ ತಗ್ಗಿದೆ. ಗುರುವಾರ ಜಿಲ್ಲೆಯ ಹಲವೆಡೆ ಬಿಸಿಲು ಇತ್ತು. ಇವತ್ತು ವಾತಾವರಣ ಸ್ವಲ್ಪ ಭಿನ್ನವಾಗಿರಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಇಂದು ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಇರುವ ಸಾಧ್ಯತೆ ಇದೆ. ಅಲ್ಲಲ್ಲಿ ಸಾಧಾರಣದಿಂದ ಜೋರು ಮಳೆಯಾಗಬಹುದು ಎಂದು ಆಕ್ಯು ವೆದರ್ ಕೂಡ ಅಂದಾಜಿಸಿದೆ.
ಇಲ್ಲಿದೆ ತಾಲೂಕುವಾರು ಡಿಟೇಲ್ಸ್
ಶಿವಮೊಗ್ಗ: ಗರಿಷ್ಠ ತಾಪಮಾನ 31°C ಹಾಗೂ ಕನಿಷ್ಠ 23°C ಇರಲಿದೆ. ಮೋಡ ಕವಿದ ವಾತಾವರಣ ಇರಲಿದೆ. ಬೆಳಗ್ಗೆ ಮತ್ತು ಮಧ್ಯಾಹ್ನದ ವೇಳೆಗೆ ಸ್ವಲ್ಪ ಮಳೆಯಾಗಲಿದೆ.

ಭದ್ರಾವತಿ: ಇಂದು ಗರಿಷ್ಠ ತಾಪಮಾನ 31°C ಹಾಗೂ ಕನಿಷ್ಠ 23°C ಇರಲಿದೆ. ಮೋಡ ಕವಿದ ವಾತಾವರಣ ಇರಲಿದೆ. ಬೆಳಗ್ಗೆ ಮತ್ತು ಮಧ್ಯಾಹ್ನದ ವೇಳೆಗೆ ಸ್ವಲ್ಪ ಮಳೆಯಾಗಲಿದೆ.

ತೀರ್ಥಹಳ್ಳಿ: ಇವತ್ತು ಗರಿಷ್ಠ 28°C ಹಾಗೂ ಕನಿಷ್ಠ 21°C ತಾಪಮಾನ ದಾಖಲಾಗಲಿದೆ. ಸಾಧಾರಣ ಮಳೆ ಸಾಧ್ಯತೆ. ಅಲ್ಲಲ್ಲಿ ಜೋರು ಮಳೆ ಸಂಭವ.
ಹೊಸನಗರ: ಗರಿಷ್ಠ 29°C ಹಾಗೂ ಕನಿಷ್ಠ 22°C ತಾಪಮಾನ ನಿರೀಕ್ಷಿಸಲಾಗಿದೆ. ಸಾಧಾರಣ ಮಳೆ.
ಸಾಗರ: ಈ ದಿನ ಗರಿಷ್ಠ 28°C ಹಾಗೂ ಕನಿಷ್ಠ 22°C ತಾಪಮಾನ ಇರಲಿದೆ. ಮೋಡ, ಸಾಧಾರಣ ಮಳೆ.
ಸೊರಬ: ಗರಿಷ್ಠ 30°C ಹಾಗೂ ಕನಿಷ್ಠ 23°C ತಾಪಮಾನ ನಿರೀಕ್ಷಿಸಲಾಗಿದೆ. ಮೋಡ ಕವಿದ ವಾತಾವರಣ. ಸಣ್ಣ ಪ್ರಮಾಣದ ಮಳೆ.
ಶಿಕಾರಿಪುರ: ಇಂದು ಗರಿಷ್ಠ 31°C ಹಾಗೂ ಕನಿಷ್ಠ 23°C ತಾಪಮಾನ ದಾಖಲಾಗಲಿದೆ. ಮೋಡ ಕವಿದ ವಾತಾವರಣ. ಸಣ್ಣ ಪ್ರಮಾಣದ ಮಳೆ.