ತೀರ್ಥಹಳ್ಳಿ ಸಂಪೂರ್ಣ ಸ್ಥಬ್ಧ, ಅಂಗಡಿಗಳು ಬಂದ್, ಖಾಸಗಿ ಬಸ್ ಸ್ಟಾಪ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | ತೀರ್ಥಹಳ್ಳಿ | 10 ಜುಲೈ 2019

ಶರಾವತಿ ನದಿ ನೀರನ್ನು ಬೆಂಗಳೂರಿಗೆ ಹರಿಸುವ ಸರ್ಕಾರದ ಯೋಜನೆ ವಿರೋಧಿಸಿ ತೀರ್ಥಹಳ್ಳಿಯಲ್ಲಿ ಬಂದ್ ಮಾಡಲಾಯಿತು. ಜನರು ಸ್ವಯಂ ಪ್ರೇರಿತವಾಗಿ ಬಂದ್’ಗೆ ಬಂಬಲ ಘೋಷಿಸಿದ್ದರು.

ಬಂದ್ ಹಿನ್ನೆಲೆ ತೀರ್ಥಹಳ್ಳಿಯಲ್ಲಿ ವರ್ತಕರು ಅಂಗಡಿ ಮುಂಗಟ್ಟು ಬಂದ್ ಮಾಡಿದ್ದರು. ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆಯಾಗಿತ್ತು. ಬ್ಯಾಂಕು, ಚಿತ್ರಮಂದಿರಗಳು ಕೂಡ ಬಂದ್ ಆಗಿದ್ದವು. ಆದರೆ ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದವು.

ಇನ್ನು, ಶಿವಮೊಗ್ಗ – ಉಡುಪಿ ರಾಷ್ಟ್ರೀಯ ಹೆದ್ದಾರಿ ಮೂಲಕ ಸಂಚರಿಸುತ್ತಿದ್ದ ಖಾಸಗಿ ಸೇವೆಯನ್ನು ಮಧ್ಯಾಹ್ನದವರೆಗೆ ಸ್ಥಗಿತಗೊಳಿಸಲಾಗಿತ್ತು. ತೀರ್ಥಹಳ್ಳಿ ಪಟ್ಟಣದಲ್ಲಿ ವಾಹನ ಸಂಚಾರವಿರಲ್ಲದೆ ಬಣಗುಡುತ್ತಿತ್ತು.

66382738 880390818989006 7327941847450386432 n.jpg? nc cat=103& nc eui2=AeEelTCUvsCu5Aj3eMoNhTyqN3u11dNGq ca7RSS10h5YSB9CNYVnXi3wYzTvNnzckfRBA8tdSI2BF8DhT5dLja9mif1U4FDIY9dHMJKWia49Q& nc oc=AQlhIhkBLbmSp V M lqB2QqkrudzYPkp6ffKR0q0VgKxxdd3puNLv68OUMvT76kWy8& nc ht=scontent.fblr10 1

ಶರಾವತಿ ನೀರನ್ನು ಬೆಂಗಳೂರಿಗೆ ಕೊಂಡೊಯ್ಯುವ ಸರ್ಕಾರದ ಯೋಚನೆ ವಿರೋಧಿಸಿ, ತೀರ್ಥಹಳ್ಳಿ ಪಟ್ಟಣದಲ್ಲಿ 25ಕ್ಕೂ ಹೆಚ್ಚು ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ನಡೆಸಿದವು. ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ತಾಲೂಕು ಕಚೇರಿಗೆ ಬಂದು ಮನವಿ ಸಲ್ಲಿಸಿದರು.

ಪರಿಸರವಾದಿ ಕಲ್ಕುಳಿ ವಿಠಲ ಹೆಗಡೆ, ಜೆ.ಕೆ.ರಮೇಶ್ ಸೇರಿಂದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ ಮೊಬೈಲ್ ನಂಬರ್ | 9964634494

ಈ ಮೇಲ್ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment