ಶಿವಮೊಗ್ಗದಲ್ಲಿ ಮುಳುಗಿದ ಕೋರ್ಪಲಯ್ಯ ಛತ್ರ ಮಂಟಪ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 16 JULY 2024

SHIMOGA : ತುಂಗಾ ಜಲಾಶಯದಿಂದ ಭಾರಿ ಪ್ರಮಾಣದ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ಹಾಗಾಗಿ ತುಂಗಾ ನದಿ ಮೈದುಂಬಿಕೊಂಡಿದೆ. ನಗರದ ಕೋರ್ಪಲಯ್ಯ ಛತ್ರ ಮಂಟಪ (MANTAPA) ಸಂಪೂರ್ಣ ಮುಳುಗಿದೆ.

ಈ ಮಳೆಗಾಲದಲ್ಲಿ ಇದೇ ಮೊದಲ ಬಾರಿಗೆ ಮಂಟಪ ಮುಳುಗಿದೆ. ವಿಚಾರ ತಿಳಿದು ಮಂಟಪ ಮುಳುಗಿರುವುದನ್ನು ಕಣ್ತುಂಬಿಕೊಳ್ಳಲು ಜನರು ಹೊಳೆ ಬದಿಗೆ ಬರುತ್ತಿದ್ದಾರೆ. ಹಳೆ ಸೇತುವೆ ಮೇಲೆ ನಿಂತು ಮಂಟಪ ಮುಳುಗಿರುವ ಫೋಟೊ, ವಿಡಿಯೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡುತ್ತಿದ್ದಾರೆ.

Korpalayya-chatra-mantapa-drowned-in-Shimoga

ಈ ಮೊದಲು ತುಂಗಾ ಜಲಾಶಯದಿಂದ ಒಂದು ಲಕ್ಷ ಕ್ಯೂಸೆಕ್‌ವರೆಗೆ ನೀರು ಹೊರ ಬಿಟ್ಟಾಗ ಮಾತ್ರ ಮಂಟಪ ಮುಳುಗುತ್ತಿತ್ತು. ಈಗ ತಡೆಗೋಡೆ ನಿರ್ಮಾಣವಾದ ಹಿನ್ನೆಲೆ 61 ಕ್ಯೂಸೆಕ್‌ ನೀರು ಹೊರ ಬಿಟ್ಟಾಗಲೆ ಮಂಟಪ ಮುಳುಗಿದೆ.

Tunga River

ಇದನ್ನೂ ಓದಿ ⇓

ಭದ್ರಾ ಜಲಾಶಯದ ಒಳ ಹರಿವು ಭಾರಿ ಹೆಚ್ಚಳ, ನೀರಿನ ಮಟ್ಟ 3.4 ಅಡಿ ಏರಿಕೆ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment