ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 16 JULY 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ತುಂಗಾ ಜಲಾಶಯದಿಂದ ಭಾರಿ ಪ್ರಮಾಣದ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ಹಾಗಾಗಿ ತುಂಗಾ ನದಿ ಮೈದುಂಬಿಕೊಂಡಿದೆ. ನಗರದ ಕೋರ್ಪಲಯ್ಯ ಛತ್ರ ಮಂಟಪ (MANTAPA) ಸಂಪೂರ್ಣ ಮುಳುಗಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಈ ಮಳೆಗಾಲದಲ್ಲಿ ಇದೇ ಮೊದಲ ಬಾರಿಗೆ ಮಂಟಪ ಮುಳುಗಿದೆ. ವಿಚಾರ ತಿಳಿದು ಮಂಟಪ ಮುಳುಗಿರುವುದನ್ನು ಕಣ್ತುಂಬಿಕೊಳ್ಳಲು ಜನರು ಹೊಳೆ ಬದಿಗೆ ಬರುತ್ತಿದ್ದಾರೆ. ಹಳೆ ಸೇತುವೆ ಮೇಲೆ ನಿಂತು ಮಂಟಪ ಮುಳುಗಿರುವ ಫೋಟೊ, ವಿಡಿಯೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ.
ಈ ಮೊದಲು ತುಂಗಾ ಜಲಾಶಯದಿಂದ ಒಂದು ಲಕ್ಷ ಕ್ಯೂಸೆಕ್ವರೆಗೆ ನೀರು ಹೊರ ಬಿಟ್ಟಾಗ ಮಾತ್ರ ಮಂಟಪ ಮುಳುಗುತ್ತಿತ್ತು. ಈಗ ತಡೆಗೋಡೆ ನಿರ್ಮಾಣವಾದ ಹಿನ್ನೆಲೆ 61 ಕ್ಯೂಸೆಕ್ ನೀರು ಹೊರ ಬಿಟ್ಟಾಗಲೆ ಮಂಟಪ ಮುಳುಗಿದೆ.