ತುಂಗಾ ಜಲಾಶಯದ ಒಳ ಹರಿವು ಹೆಚ್ಚಳ, ಶಿವಮೊಗ್ಗದಲ್ಲಿ ಎಂಎಲ್‌ಎ ನೇತೃತ್ವದಲ್ಲಿ ಬಾಗಿನ

SHIVAMOGGA LIVE NEWS | 18 JULY 2024

DAM LEVEL : ಹಿನ್ನೀರು ಭಾಗದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ತುಂಗಾ ಜಲಾಶಯಕ್ಕೆ  ಭಾರಿ ಪ್ರಮಾಣದ ಒಳ ಹರಿವು ಇದೆ. ಇವತ್ತು 71484 ಕ್ಯೂಸೆಕ್‌ ಒಳ ಹರಿವು ದಾಖಲಾಗಿದೆ. ಅಷ್ಟೇ ಪ್ರಮಾಣದ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ಇದರಿಂದ ತುಂಗಾ ನದಿ ಮೈದುಂಬಿ ಹರಿಯುತ್ತಿದೆ.

ತುಂಬಿದ ತುಂಗೆಗೆ ಬಾಗಿನ

ಶಿವಮೊಗ್ಗ ನಗರದಲ್ಲಿ ಕೋರ್ಪಲಯ್ಯ ಛತ್ರ ಮಂಟಪ ಮುಳುಗಿದೆ. ಇದನ್ನು ವೀಕ್ಷಿಸಲು ಜನರು ಮಂಟಪದ ಬಳಿಗೆ ಭೇಟಿ ನೀಡುತ್ತಿದ್ದಾರೆ.

MLA CHANNABASAPPA BAGINA

ಇನ್ನು, ತುಂಗಾ ನದಿ ಸೇತುವೆ ಮೇಲೆ ನಿಂತು ತುಂಗಾ ನದಿಯ ವೈಭವ ಕಣ್ತುಂಬಿಕೊಳ್ಳುತ್ತಿದ್ದಾರೆ. ಇನ್ನು, ಮೈದುಂಬಿದ ತುಂಗೆಗೆ ಶಾಸಕ ಎಸ್‌.ಎನ್.ಚನ್ನಬಸಪ್ಪ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದರು. ಬಿಜೆಪಿ ಮುಖಂಡರು, ಕಾರ್ಯಕರ್ತರು ಈ ಸಂದರ್ಭ ಉಪಸ್ಥಿತರಿದ್ದರು.

ಇದನ್ನೂ ಓದಿ ⇓

ಭದ್ರಾ ಜಲಾಶಯದ ನೀರಿನ ಮಟ್ಟ ಒಂದೇ ದಿನ ನಾಲ್ಕೂವರೆ ಅಡಿ ಹೆಚ್ಚಳ, ಇವತ್ತು ಎಷ್ಟಿದೆ ಒಳ ಹರಿವು?

ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : July 18, 2024 at 9:03 AM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಜುಲೈ 18, 2024

Leave a Comment