SHIVAMOGGA LIVE NEWS | 19 JULY 2024
SHIMOGA JOBS : ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ಶಿವಮೊಗ್ಗ ಜಿಲ್ಲೆಯ ಶಾಖೆಗಳ ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳು ಬೇಕಾಗಿದ್ದಾರೆ. ಕಾರಾವಾರದಲ್ಲಿ ಪ್ರಧಾನ ಕಚೇರಿ ಹೊಂದಿರುವ ಈ ಸೊಸೈಟಿ, ರಾಜ್ಯದ 9 ಜಿಲ್ಲೆಗಳಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ 111 ಶಾಖೆಗಳನ್ನು ಹೊಂದಿದೆ.
![]() |
ಯಾವೆಲ್ಲ ಹುದ್ದೆ ಖಾಲಿ ಇದೆ?
ಬ್ರ್ಯಾಂಚ್ ಮ್ಯಾನೇಜರ್, ಅಸಿಸ್ಟೆಂಟ್ ಬ್ರ್ಯಾಂಚ್ ಮ್ಯಾನೇಜರ್, ಸೀನಿಯರ್ ಅಸಿಸ್ಟೆಂಟ್ / ಆಫೀಸರ್, ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಎಂಬಿಎ / ಎಂ.ಕಾಂ / ಬಿ.ಕಾಂ / ಬಿಬಿಎಂ / ಬಿಬಿಎ ಪದವಿ ಹೊಂದಿರಬೇಕು. ಕಂಪ್ಯೂಟರ್ ಜ್ಞಾನ ಇರಬೇಕು.
ಅಟೆಂಡರ್ ಹುದ್ದೆಗಳು ಇವೆ. ಎಸ್ಸೆಸ್ಸೆಲ್ಸಿ / ಪಿಯುಸಿ / ಯಾವುದೇ ಪದವಿ ಹೊಂದಿರಬೇಕು.
ಸಂಬಳ, ಸೌಲಭ್ಯಗಳೇನು?
ಉತ್ತಮ ಸಂಬಳ, ಆಕರ್ಷಕ ಪ್ರೋತ್ಸಾಹಧನ, ಬೋನಸ್, ಪಿ.ಎಫ್, ಗ್ರಾಚುಟಿ ದೊರೆಯಲಿದೆ. ಅಭ್ಯರ್ಥಿಯ ಅರ್ಹತೆ, ಸಾಮರ್ಥ್ಯ ಮತ್ತು ಅನುಭವದ ಆಧಾರದ ಮೇಲೆ ಉತ್ತಮ ಸಂಬಳ ನೀಡಲಾಗುವುದು. ವಯೋಮಿತಿ 21 ರಿಂದ 40 ವರ್ಷ ಇರಬೇಕು. ಸ್ಥಳೀಯರಿಗೆ ಹಾಗೂ ಪುರುಷ ಅಭ್ಯರ್ಥಿಗಳಿಗೆ ಪ್ರಾಧಾನ್ಯತೆ ಇರಲಿದೆ. ಆಸಕ್ತರು ಅರ್ಜಿ ಸಲ್ಲಿಸಲು ತಮ್ಮ ಬಯೋಡೇಟಾ, 1 ಪಾಸ್ ಪೋರ್ಟ್ ಸೈಜ್ ಫೋಟೊದೊಂದಿಗೆ
milagresrecruitment@gmail.com ಗೆ ಇ-ಮೇಲ್ ಮೂಲಕ ಕಳುಹಿಸಬಹುದು ಅಥವಾ ಈ ಕೆಳಗಿನ ವಿಳಾಸಕ್ಕೆ ಕಳಹಿಸಬಹುದು. ವ್ಯವಸ್ಥಾಪಕ ನಿರ್ದೇಶಕರು, ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ಸ್ ಸೊಸೈಟಿ ಲಿ., ಕಾರವಾರ. ಪ್ರಧಾನ ಕಚೇರಿ: ಕೇಶವ್ ಶೇಟ್ ರೋಡ್, 1st ಕ್ರಾಸ್, ಸೋನಾರ್ವಾಡ, ಕಾರವಾರ-581304 ಫೋ: 9538200103
ಇದನ್ನೂ ಓದಿ ⇓
ಬೆಳ್ಳಂಬೆಳಗ್ಗೆ ಶಿವಮೊಗ್ಗ, ಭದ್ರಾವತಿಯಲ್ಲಿ ಲೋಕಾಯುಕ್ತ ದಾಳಿ, ಯಾರ ಮನೆ ಮೇಲೆ ದಾಳಿಯಾಗಿದೆ?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200