SHIVAMOGGA LIVE NEWS | 20 JULY 2024
SHIMOGA : ಸಿಟಿ ಸೆಂಟರ್ (CITY CENTRE) ಪಕ್ಕದಲ್ಲಿ ನೆಹರು ರಸ್ತೆಯಲ್ಲಿ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿದೆ. ಹೊನ್ನಾಳಿಯ ಹಾಲೇಶ್ ಎಂಬುವವರು ತಮ್ಮ ಸ್ಪ್ಲೆಂಡರ್ ಬೈಕ್ ಅನ್ನು ಸಿಟಿ ಬಸ್ ಸ್ಟಾಪ್ ಪಕ್ಕದ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ್ದರು. ಸಂಜೆ 5.30ರ ಹೊತ್ತಿಗೆ ಸಿಟಿ ಸೆಂಟರ್ ಮಾಲ್ಗೆ ಹೋಗಿ ಸಂಜೆ 6 ಗಂಟೆಗೆ ಹಿಂತಿರುಗಿದಾಗ ಪಾರ್ಕಿಂಗ್ ಸ್ಥಳದಲ್ಲಿ ಬೈಕ್ ಇರಲಿಲ್ಲ. ಎಲ್ಲೆಡೆ ಹುಡುಕಿದರೂ ಬೈಕ್ ಸಿಕ್ಕಿರಲಿಲ್ಲ. ಏಪ್ರಿಲ್ 2ರಂದು ಘಟನೆ ಸಂಭವಿಸಿದೆ. ವೈಯಕ್ತಿಕ ಕಾರಣಕ್ಕೆ ತಡವಾಗಿ ದೂರು ನೀಡುತ್ತಿರುವುದಾಗಿ ಹಾಲೇಶ್ ಉಲ್ಲೇಖಿಸಿದ್ದಾರೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೈರ್ ಖರೀದಿಸಿ ಹಣ ಕೊಡದೆ ಪರಾರಿಯಾದವ ಅರೆಸ್ಟ್ |
BHADRAVATHI : ಬಿ.ಹೆಚ್.ರಸ್ತೆಯ ಅನುಟೆಕ್ ಅಂಗಡಿಯಲ್ಲಿ ಕಾಪರ್ ವೈಯರ್ ಖರೀದಿಸಿ ಹಣ ಕೊಡದೆ ವಂಚಿಸಿ ಪರಾರಿಯಾಗಿದ್ದ ಆರೋಪಿಯನ್ನು ಭದ್ರಾವತಿಯ ಹಳೆ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ದಾವಣಗೆರೆಯ ಆಜಾದ್ ನಗರದ ಸೈಫುಲ್ಲಾ ಖಾನ್ ಬಂಧಿತ. ವಿಚಾರಣೆ ವೇಳೆ ಬಳ್ಳಾರಿಯಲ್ಲಿ ಇದೇ ರೀತಿ ವಂಚಿಸಿದ ಪ್ರಕರಣವು ಬೆಳಕಿಗೆ ಬಂದಿದೆ. ಎರಡು ಪ್ರಕರಣ ಸಂಬಂಧ 2.07 ಲಕ್ಷ ರೂ. ಮೌಲ್ಯದ ವಿ ಗಾರ್ಡ್ ಕಾಪರ್ ವೈರ್, 80 ಸಾವಿರ ರೂ. ಮೌಲ್ಯದ ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ.
ಡಿವೈಎಸ್ಪಿ ಗಜಾನನ ವಾಮನ ಸುತಾರ್, ಸರ್ಕಲ್ ಇನ್ಸ್ಪೆಕ್ಟರ್ ಶ್ರೀಶೈಲಕುಮಾರ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಪಿಎಸ್ಐಗಳಾದ ಶರಣಪ್ಪ ಹಂಡ್ರಗಲ್, ಚಂದ್ರಶೇಖರ್ ನಾಯ್ಕ್ ನೇತೃತ್ವದಲ್ಲಿ, ಸಿಬ್ಬಂದಿ ಮಹೇಶ್ವರ ನಾಯ್ಕ್, ಹಾಲಪ್ಪ, ನಾರಾಯಣಸ್ವಾಮಿ, ಮೌನೇಶ್ ಶೀಕಲ್, ಚಿಕ್ಕಪ್ಪ ಸಣ್ಣತಂಗೇರ ಮತ್ತು ಪ್ರವೀಣ್ ಜಿ.ಎ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ ⇓
ಭದ್ರಾ ಡ್ಯಾಮ್ಗೆ ಭರಪೂರ ನೀರು, ಏರಿತು ತುಂಗಾ, ಲಿಂಗನಮಕ್ಕಿ ಜಲಾಶಯಗಳ ಒಳ ಹರಿವು, ಎಷ್ಟಾಗಿದೆ?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200