ಶಿವಮೊಗ್ಗದಲ್ಲಿ ಪತಿಯೊಂದಿಗೆ ಬಸ್‌ ಹತ್ತಿದ್ದ ಮಹಿಳೆಗೆ ಸ್ವಲ್ಪ ಸಮಯದಲ್ಲಿ ಕಾದಿತ್ತು ಆಘಾತ, ಆಗಿದ್ದೇನು?

SHIVAMOGGA LIVE NEWS | 21 JULY 2024

SHIMOGA : ಬಗರ್‌ ಹುಕುಂ ಸಾಗುವಳಿದಾರರ ಸಭೆ ಮುಗಿಸಿ ಪತಿಯೊಂದಿಗೆ ಕೆಎಸ್‌ಆರ್‌ಟಿಸಿ ಬಸ್‌ ಹತ್ತಿದ್ದ ಮಹಿಳೆಯೊಬ್ಬರ ನೆಕ್ಲೇಸ್‌ (NECKLACE) ಕಳ್ಳತನವಾಗಿದೆ. ಶಿವಮೊಗ್ಗದ ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಘಟನೆ ಸಂಭವಿಸಿದೆ.

ಸೊರಬ ತಾಲೂಕು ಮಳವಳ್ಳಿಯ ಹರೂರು ಗ್ರಾಮದ ನೇತ್ರಾವತಿ ಪತಿಯೊಂದಿಗೆ ಶಿವಮೊಗ್ಗದ ಡಾ. ಅಂಬೇಡ್ಕರ್‌ ಭವನದಲ್ಲಿ ನಡೆದ ಸಭೆಗೆ ಬಂದಿದ್ದರು. ಸಭೆ ಮುಗಿಸಿ ಕೆಎಸ್‍ಆರ್‌ಟಿಸಿ ನಿಲ್ದಾಣದಲ್ಲಿ ಸೊರಬಕ್ಕೆ ತೆರಳುವ ಬಸ್‌ ಹತ್ತಿದ್ದರು. ಸೀಟು ಹಿಡಿದು ಕುಳಿತಿದ್ದ ತಮ್ಮ ವ್ಯಾನಿಟಿ ಬ್ಯಾಗ್‌ ಜಿಪ್‌ ಅರ್ಧ ತೆರೆದುಕೊಂಡಿದ್ದನ್ನು ಗಮನಿಸಿದರು. ಒಳಗೆ ಪರಿಶೀಲಿಸಿದಾಗ ನೆಕ್ಲೇಸ್‌ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

KSRTC-Bus-General-Image

75 ಸಾವಿರ ರೂ. ಮೌಲ್ಯದ 17 ಗ್ರಾಂ ತೂಕದ ನೆಕ್ಲೇಸ್‌ ಕಳುವಾಗಿದೆ. ಬಸ್‌ ಹತ್ತುವಾರ ರಶ್‌ ಇತ್ತು. ಈ ವೇಳೆ ಕಳ್ಳರು ವ್ಯಾನಿಟಿ ಬ್ಯಾಗ್‌ನಿಂದ ನೆಕ್ಲೇಸ್‌ ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ.

Kalleshwara-Enterprises.webp

ಇದನ್ನೂ ಓದಿ ⇓

ಶಿವಮೊಗ್ಗ ಜಿಲ್ಲೆ, ಶೇ.50ರಷ್ಟು ಕಡಿಮೆಯಾದ ಮಳೆ, ಹವಾಮಾನ ಇಲಾಖೆಯಿಂದ ಮತ್ತೊಂದು ಮುನ್ಸೂಚನೆ, ಏನಿದೆ?

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment