ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIMOGA, 26 JULY 2024 : ಗಾಳಿ, ಮಳೆಗೆ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಮರಗಳು (TREE) ಧರೆಗುರುಳಿವೆ, ಮನೆಗಳ ಗೊಡೆ ಕುಸಿದಿವೆ.
ಅಶೋಕ ನಗರ ಮರ ಬಿದ್ದು ಶಿವಮೊಗ್ಗದಲ್ಲಿ ಮನೆ ಜಖಂ 
ಶಿವಮೊಗ್ಗ ಲೈವ್.ಕಾಂ : ಭಾರಿ ಗಾಳಿ ಮಳೆಗೆ ಅಶೋಕ ನಗರದ ನರ್ಸಿಂಗ್ ಕ್ವಾರ್ಟರ್ಸ್‌ನಲ್ಲಿ ಮರ ಬುಡಮೇಲಾಗಿ ಮನೆ ಮೇಲೆ ಉರುಳಿದೆ. ಮನೆ ಸಂಪೂರ್ಣ ಜಖಂ ಆಗಿದೆ. ಮೆಗ್ಗಾನ್ ಆಸ್ಪತ್ರೆಯ ಲ್ಯಾಬ್ ಟೆಕ್ನಿಷಿಯನ್ ರಾಧಮ್ಮ ಎಂಬುವವರ ಮನೆ ಮೇಲೆ ಮರ ಉರುಳಿದೆ. ಮನೆಯಲ್ಲಿದ್ದ ಮೂವರು ಅದೃಷ್ಟವಶಾತ್ ಪರಾಗಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಠಾಣೆ ಹಿಂಬದಿಯ ನರ್ಸಿಂಗ್ ಕ್ವಾರ್ಟರ್ಸ್‌ನಲ್ಲಿ ಇಂದು ಬೆಳಗ್ಗೆ ಘಟನೆ ಸಂಭವಿಸಿದೆ.
ಎಂಆರ್‌ಎಸ್ ಮಳೆಗೆ ಮನೆ ಗೋಡೆ ಕುಸಿತ 
ಶಿವಮೊಗ್ಗ ಲೈವ್.ಕಾಂ : ನಗರದ ಎಂಆರ್‌ಎಸ್ ಸಮೀಪದ ಎನ್.ಆರ್.ಪುರ ರಸ್ತೆಯಲ್ಲಿರುವ ಮೊದಲ ಅಡ್ಡರಸ್ತೆಯಲ್ಲಿ ಮನೆಯೊಂದರ ಗೋಡೆ ಕುಸಿದಿದೆ. ಭಾರಿ ಮಳೆಗೆ ನೂರ್‌ಜಾನ್ ಎಂಬುವವರ ಮನೆ ಗೋಡೆ ಕುಸಿದಿದೆ. ಮನೆಯಲ್ಲಿದ್ದವರಿಗೆ ಯಾವುದೆ ಅಪಾಯ ಸಂಭವಿಸಿಲ್ಲ.
ತೀರ್ಥಹಳ್ಳಿ
ರಸ್ತೆಗೆ ಅಡ್ಡಲಾಗಿ ಬಿದ್ದ ಮರ
ಶಿವಮೊಗ್ಗ ಲೈವ್.ಕಾಂ : ತೀರ್ಥಹಳ್ಳಿ ತಾಲೂಕು ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತುಂಬಡಿ ಸಮೀಪ ರಸ್ತೆಗೆ ಅಡ್ಡಲಾಗಿ ಮರ ಉರುಳಿದೆ. ಘಟನೆಯಲ್ಲಿ ವಿದ್ಯುತ್ ತಂತಿಗಳು ತುಂಡಾಗಿವೆ. ರಸ್ತೆಗೆ ಮರ ಬಿದ್ದಿರುವುದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.
ಇದನ್ನೂ ಓದಿ ⇓
ಹೊಸನಗರದಲ್ಲಿ ಕೆಎಸ್‌ಆರ್‌ಟಿಸಿ ಬಸ್ಸಿನ ಮೇಲೆ ಉರುಳಿದ ವಿದ್ಯುತ್ ಕಂಬ
LATEST NEWS
- ಶಿವಮೊಗ್ಗ ವಿಮಾನ ನಿಲ್ದಾಣ, ಮಹತ್ವದ ಟೆಸ್ಟ್ನಲ್ಲಿ ಪಾಸ್, DoVR ಕೆಲಸ ಶುರು, ಏನಿದು? ಪ್ರಯೋಜನ ಏನು?

- ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯು ಹೆಚ್ಚಿದ ತಾಪಮಾನ? ಇವತ್ತು ಎಷ್ಟಿರುತ್ತೆ?

- ಭಟ್ಕಳದ ಮಹಿಳೆ ಸೇರಿ ನಾಲ್ವರು ನಗರ ಠಾಣೆ ಪೊಲೀಸರ ಬಲೆಗೆ, ಕಾರಣವೇನು? ಏನೇನೆಲ್ಲ ಸಿಕ್ತು?

- ಇಂದಿನ ಪಂಚಾಂಗ – ಯಾವ್ಯಾವ ಸಮಯ ಯಾವಾಗಿದೆ?

- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

About The Editor
ನಿತಿನ್ ಆರ್.ಕೈದೊಟ್ಲು





