SHIMOGA, 6 AUGUST 2024 : ಒಂಟಿ ಮಹಿಳೆ ಕೊಲೆ ಪ್ರಕರಣ ಆರೋಪಿಯನ್ನು (Accused) ಕುಂಸಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನು ಮಹಿಳೆಯ ಸಂಬಂಧಿಯೇ ಆಗಿದ್ದು, ಹಲಗೆ ಕಳ್ಳತನಕ್ಕೆ ಹೋದಾಗ ಕೃತ್ಯ ಎಸಗಿದ್ದಾನೆ.
ಮಂಜರಿಕೊಪ್ಪ ಗ್ರಾಮದ ಎಸ್.ಆದರ್ಶ್(30) ಬಂಧಿತ. ಅದೇ ಗ್ರಾಮದಲ್ಲಿ ಒಂಟಿಯಾಗಿ ವಾಸವಿದ್ದ ಸಾವಿತ್ರಮ್ಮ (60) ಅವರನ್ನು ಗುರುವಾರ ಈತ ಹತ್ಯೆ ಮಾಡಿದ್ದ.
ಹಲಗೆ ಕದಿಯಲು ಬಂದು ಹತ್ಯೆ ಮಾಡಿದ
ಕೊಲೆಯಾದ ಸಾವಿತ್ರಮ್ಮ ಬಂಧಿತ ಆದರ್ಶನ ಅತ್ತೆ. ‘ಸಾವಿತ್ರಮ್ಮ ಮನೆಯಲ್ಲಿ ಹಲಗೆ ಕಳವು ಮಾಡಲು ಹೋಗಿದ್ದ. ಎಚ್ಚರಗೊಂಡ ಸಾವಿತ್ರಮ್ಮ ಆದರ್ಶನನ್ನು ಪ್ರಶ್ನೆ ಮಾಡಿದ್ದರು. ಈ ಸಂದರ್ಭ ಆದರ್ಶ ಸಾವಿತ್ರಮ್ಮಳ ಹತ್ಯೆ ಮಾಡಿದ್ದ’ ಎಂದು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಮಾಧ್ಯಮಗಳಿಗೆ ವಾಟ್ಸಪ್‌ನಲ್ಲಿ ಮಾಹಿತಿ ನೀಡಿದ್ದಾರೆ. ಪ್ರಕರಣದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಆರೋಪಿ ಪತ್ತೆಗೆ ಕುಂಸಿ ಠಾಣೆ ಇನ್ಸ್‌ಪೆಕ್ಟರ್ ಹರೀಶ್ ಪಟೇಲ್ ನೇತೃತ್ವದಲ್ಲಿ ಎರಡು ತಂಡ ರಚಿಸಲಾಗಿತು.
ಇದನ್ನೂ ಓದಿ ⇓
ಕೆಎಸ್‌ಆರ್‌ಟಿಸಿ ಶಿವಮೊಗ್ಗ ವಿಭಾಗದಲ್ಲಿ ಗುತ್ತಿಗೆ ಆಧಾರದಲ್ಲಿ ಚಾಲಕರ ನೇಮಕಾತಿ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?
- ಆಯನೂರು ATMನಲ್ಲಿ ಹಣ ಬಿಡಿಸಿದ ರೈತ, 20 ನಿಮಿಷದಲ್ಲೇ ಕಾದಿತ್ತು ಶಾಕ್, ಆಗಿದ್ದೇನು?
- ಶಿವಮೊಗ್ಗದ ಫ್ರೀಡಂ ಪಾರ್ಕ್ನಲ್ಲಿ 3 ದಿನ ಫಲಪುಷ್ಪ ಪ್ರದರ್ಶನ, ಈ ವರ್ಷದ ವಿಶೇಷತೆ ಏನು?
- 2022ರಲ್ಲಿ ಅಪ್ಲೋಡ್ ಆಗಿದ್ದ ವಿಡಿಯೋ, ಶಿವಮೊಗ್ಗದ ಯುವಕನಿಗೆ ಈಗ ಶುರು ಸಂಕಷ್ಟ
- ಅಡಿಕೆ ಧಾರಣೆ | 22 ಜನವರಿ 2025 | ಇವತ್ತು ಯಾವ್ಯಾವ ಅಡಿಕೆ ಎಷ್ಟಿದೆ ರೇಟ್?
- ಸೈನ್ಸ್ ಮೈದಾನ, ಸಂಜೆ ಪಾರ್ಕಿಂಗ್ ಸ್ಥಳಕ್ಕೆ ಬಂದ ವ್ಯಕ್ತಿಗೆ ಕಾದಿತ್ತು ಆಘಾತ
- ಇನ್ಮುಂದೆ ಕಾಗೋಡು ತಿಮ್ಮಪ್ಪ, ಡಾಕ್ಟರ್ ಕಾಗೋಡು ತಿಮ್ಮಪ್ಪ