ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIMOGA, 14 AUGUST 2024 : ಶಿವಮೊಗ್ಗ ನಗರದಲ್ಲಿ ಜೋರು ಮಳೆ (Rain) ಶುರುವಾಗಿದೆ. ದಿಢೀರ್ ಮಳೆಯಿಂದಾಗಿ ಜನರು ಸಂಕಷ್ಟಕ್ಕೀಡಾದರು. ವ್ಯಾಪಾರ, ವಹಿವಾಟಿಗು ತೊಂದರೆ ಉಂಟಾಯಿತು.
ಬೆಳಗ್ಗೆಯಿಂದ ಜೋರು ಬಿಸಿಲು, ಧಗೆಯಿಂದಾಗಿ ಮಳೆಗಾಲದಲ್ಲು ಬೇಸಿಗೆಯ ಅನುಭವವಾಗಿತ್ತು. ರಾತ್ರಿ 8 ಗಂಟೆ ಹೊತ್ತಿಗೆ ಶಿವಮೊಗ್ಗ ನಗರದಲ್ಲಿ ಜೋರು ಮಳೆಯಾಗುತ್ತಿದೆ. ಹಠಾತ್ ಮಳೆಯಿಂದಾಗಿ ಕಚೇರಿಗಳಿಂದ ಮನೆಗೆ ತೆರಳುತ್ತಿರುವವರು, ವ್ಯಾಪಾರ, ವಾಹಿವಾಟು ನಡೆಸುತ್ತಿದ್ದವರಿಗೆ ಸಮಸ್ಯೆ ಉಂಟಾಯಿತು. ಭಾರಿ ಮಳೆ ಹಿನ್ನೆಲೆ ಶಿವಮೊಗ್ಗ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಿದೆ.
ಶಿವಮೊಗ್ಗದ ಸಂತೆ ಕಡೂರು, ಬಿದರೆ, ಹಸೂಡಿ, ಕೂಡ್ಲಿ, ಅಬ್ಬಲಗೆರೆ, ಕೊನಗವಳ್ಳಿ, ರಾಮನಗರ, ಮಲ್ಲಾಪುರ, ಆಯನೂರು, ಭದ್ರಾವತಿಯ ಅರಳಿಕೊಪ್ಪ, ಹಿರಿಯೂರು, ಯರೆಹಳ್ಳಿ, ಮಾವಿನಕಟ್ಟೆ, ಬಿಳಕಿ, ತಡಸ, ಅರೆಬಿಳಚಿ, ಕಲ್ಲಿಹಾಳ್, ದಾಸರಕಲ್ಲಹಳ್ಳಿಯಲ್ಲಿ ಮಳೆಯಾಗುತ್ತಿದೆ. ತೀರ್ಥಹಳ್ಳಿ ತಾಲೂಕಿನ ಸಾಲ್ಗುಡಿ, ಬೆಜ್ಜವಳ್ಳಿ, ತ್ರಿಯಂಬಕಪುರ, ಹೊಸಹಳ್ಳಿ, ಹೆಗ್ಗೋಡು, ಅರೆಹಳ್ಳಿ, ಹೊನ್ನೇತಳುವಿನಲ್ಲಿ ಮಳೆಯಾಗುತ್ತಿದೆ.

ಹೊಸನಗರದ ಸುಳಗೋಡು, ಸೋನಲೆ, ಕೋಡೂರು, ಚಿಕ್ಕಜೇನಿ, ಅರಸಾಳು, ಮಾರುತಿಪುರ, ಮೇಲಿನಬೆಸಿಗೆ, ಸಂಪೆಕಟ್ಟೆ, ಸಾಗರದ ಕೋಳೂರು, ಭೀಮನಕೋಣೆ, ಹಿರೆಬಿಲಗುಂಜಿ, ಭೀಮನೇರಿ, ಸಿರಿವಂತೆ, ಕಾಂಡಿಕೆ, ಹೊಸೂರು, ಆಚಾಪುರ, ಶಿಕಾರಿಪುರದ ಕಲ್ಮನೆ, ಚುರ್ಚಿಗುಂಡಿ, ಈಸೂರು, ಗಾಮಾ, ಮುಡುಬಸಿದ್ದಾಪುರ, ಅಮಟೆಕೊಪ್ಪ, ಅಂಬಾರಗೊಪ್ಪ, ಮತ್ತಿಕೋಟೆ, ಬಗನಕಟ್ಟೆ, ಮಾರವಳ್ಳಿ, ಚಿಕ್ಕಜಂಬೂರು, ಹಿರೆಜಂಬೂರು, ತಾಳಗುಂದ, ಸೊರಬದ ಇಂಡುವಳ್ಳಿ, ಚಿತ್ತೂರು, ಮಾವಳ್ಳಿ, ಹೆಗ್ಗೋಡು, ಹೊಸಬಾಳೆ, ಮಟುಗುಪ್ಪೆ, ಹೆಚ್ಚೆ, ಹಳೆ ಸೊರಬದಲ್ಲಿ ಮಳೆಯಾಗುತ್ತಿದೆ ಎಂದು ತಿಳಿದು ಬಂದಿದೆ.

ಇನ್ನು, ಮಂಗಳವಾರ ರಾತ್ರಿಯು ಶಿವಮೊಗ್ಗ ನಗರ ಮತ್ತು ಜಿಲ್ಲೆಯ ವಿವಿಧೆಡೆ ಭಾರಿ ಮಳೆಯಾಗಿತ್ತು.
ಇದನ್ನೂ ಓದಿ ⇒ ಶಿವಮೊಗ್ಗ ಹಾಲು ಒಕ್ಕೂಟದ ಚುನಾವಣೆ, ಯಾರೆಲ್ಲ ಎಷ್ಟು ಮತ ಗಳಿಸಿದ್ದಾರೆ? ಯಾರೆಲ್ಲ ಗೆದ್ದಿದ್ದಾರೆ? ಇಲ್ಲಿದೆ ಪಟ್ಟಿ
LATEST NEWS
- ಶಿವಮೊಗ್ಗ ವಿಮಾನ ನಿಲ್ದಾಣ, ಮಹತ್ವದ ಟೆಸ್ಟ್ನಲ್ಲಿ ಪಾಸ್, DoVR ಕೆಲಸ ಶುರು, ಏನಿದು? ಪ್ರಯೋಜನ ಏನು?

- ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯು ಹೆಚ್ಚಿದ ತಾಪಮಾನ? ಇವತ್ತು ಎಷ್ಟಿರುತ್ತೆ?

- ಭಟ್ಕಳದ ಮಹಿಳೆ ಸೇರಿ ನಾಲ್ವರು ನಗರ ಠಾಣೆ ಪೊಲೀಸರ ಬಲೆಗೆ, ಕಾರಣವೇನು? ಏನೇನೆಲ್ಲ ಸಿಕ್ತು?

- ಇಂದಿನ ಪಂಚಾಂಗ – ಯಾವ್ಯಾವ ಸಮಯ ಯಾವಾಗಿದೆ?

- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

About The Editor
ನಿತಿನ್ ಆರ್.ಕೈದೊಟ್ಲು





