ಶಿವಮೊಗ್ಗದಲ್ಲಿ ಸ್ವಾತಂತ್ರ್ಯ ಸಂಭ್ರಮ, ಜಿಲ್ಲೆಯಾದ್ಯಂತ ಯಾರೆಲ್ಲ ಧ್ವಜಾರೋಹಣ ಮಾಡಿದರು? ಇಲ್ಲಿದೆ ಡಿಟೇಲ್ಸ್‌

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIMOGA, 15 AUGUST 2024 : 78ನೇ ಸ್ವಾತಂತ್ರ್ಯ ದಿನಾಚರಣೆ (Independence Day) ಹಿನ್ನೆಲೆ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಇವತ್ತು ಧ್ವಜಾರೋಹಣ ನೆರವೇರಿಸಲಾಯಿತು. ಎಲ್ಲೆಲ್ಲಿ ಯಾರು ಧ್ವಜಾರೋಹಣ ಮಾಡಿದರು? ಯಾರೆಲ್ಲ ಏನೆಲ್ಲ ಹೇಳಿದರು? ಇಲ್ಲಿದೆ ಫಟಾಫಟ್‌ ಅಪ್‌ಡೇಟ್‌.

ಸಚಿವ ಮಧು ಬಂಗಾರಪ್ಪ ಧ್ವಜಾರೋಹಣ

#eaeff0 SHIMOGA-NEWS-FATAFATಶಿವಮೊಗ್ಗದ ಡಿಎಆರ್‌ ಮೈದಾನದಲ್ಲಿ ಸಚಿವ ಮಧು ಬಂಗಾರಪ್ಪ ಧ್ವಜಾರೋಹಣ ನೆರವೇರಿಸಿದರು. ಇದೇ ವೇಳೆ ಧ್ವಜ ವಂದನೆ, ಪಥ ಸಂಚಲನ ನಡೆಯಿತು. ವಿವಿಧ ಶಾಲೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬಳಿಕ ಸಚಿವ ಮಧು ಬಂಗಾರಪ್ಪ ಶಿವಮೊಗ್ಗದ ಜನರನ್ನು ಉದ್ದೇಶಿಸಿ ಮಾತನಾಡಿದರು.

Shimoga Independence Day

ಆಂತರಿಕ ಭಾವನೆಗಳು ಶುದ್ಧವಾಗಿರಬೇಕು. ಇದರಿಂದ ಹಿರಿಯರು ತಂದು ಕೊಟ್ಟ ಸ್ವಾತಂತ್ರ್ಯಕ್ಕೆ ಪರಿಪೂರ್ಣ ಅರ್ಥ ಲಭಿಸಲಿದೆ. ಇಂದಿನ ಸ್ವಾತಂತ್ರ್ಯ ಸಂಭ್ರಮಕ್ಕೆ ಮಹಾತ್ಮ ಗಾಂಧೀಜಿ ಸೇರಿ ಅನೇಕ ಹೋರಾಟಗಾರರ ಪರಿಶ್ರಮವಿದೆ. ಇದು ವ್ಯರ್ಥವಾಗಕೂಡದು.ಮಧು ಬಂಗಾರಪ್ಪ, ಸಚಿವ

ಭದ್ರಾವತಿಯಲ್ಲಿ ಧ್ವಜಾರೋಹಣ

#eaeff0 BHADRAVATHI-NEWS-FATAFAT.ಭದ್ರಾವತಿಯ ಹಳೆ ನಗರದ ಕನಕ ಮಂಟಪ ಮೈದಾನದಲ್ಲಿ ತಹಶೀಲ್ದಾರ್‌ ನಾಗರಾಜ್‌ ಧ್ವಜಾರೋಹಣ ಮಾಡಿದರು. ಶಾಸಕ ಸಂಗಮೇಶ್ವರ್‌ ಮತ್ತು ತಹಶೀಲ್ದಾರ್‌ ನಾಗರಾಜ್‌ ಅವರು ಧ್ವಜ ವಂದನೆ ಸ್ವೀಕರಿಸಿದರು.

Bhadravathi Independence Day

ಮಕ್ಕಳು ಡಾಕ್ಟರ್‌, ಇಂಜಿನಿಯರ್‌ ಆಗಲಿ ಎಂದು ಪೋಷಕರು ಅಪೇಕ್ಷಿಸುವುದರ ಜೊತೆಗೆ ಅವರಲ್ಲಿ ದೇಶ ಪ್ರೇಮವನ್ನು ಬೆಳೆಸಬೇಕು.ಬಿ.ಕೆ.ಸಂಗಮೇಶ್ವರ, ಶಾಸಕ

ತೀರ್ಥಹಳ್ಳಿಯಲ್ಲಿ ಧ್ವಜಾರೋಹಣ

#eaeff0 THIRTHAHALLI-NEWS-FATAFATಯು.ಆರ್.ಅನಂತಮೂರ್ತಿ ಪ್ರೌಢಶಾಲೆ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ತಹಶೀಲ್ದಾರ್‌ ಜಕ್ಕಣ್ಣಗೌಡರ್‌ ಧ್ವಜಾರೋಹಣ ನೆರವೇರಿಸಿದರು. ವಿವಿಧ ಶಾಲೆ, ಕಾಲೇಜು ವಿದ್ಯಾರ್ಥಿಗಳು, ಪೊಲೀಸ್‌ ಸಿಬ್ಬಂದಿಯಿಂದ ಪಥ ಸಂಚಲನ ನಡೆಯಿತು. ಶಾಸಕ ಆರಗ ಜ್ಞಾನೇಂದ್ರ, ಡಿವೈಎಸ್‌ಪಿ ಗಜಾನನ ವಾಮನ ಸುತಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Thirthahalli Independence Day

ಶಿಕಾರಿಪುರದಲ್ಲಿ ಧ್ವಜಾರೋಹಣ

#eaeff0 SHIKARIPURA-NEWS-FATAFATಶಿಕಾರಿಪುರದ ತಾಲೂಕು ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ತಹಶೀಲ್ದಾರ್‌ ಮಲ್ಲೇಶಪ್ಪ ಪೂಜಾರ್‌ ಧ್ವಜಾರೋಹಣ ನೆರವೇರಿಸಿದರು. ಶಾಸಕ ಬಿ.ವೈ.ವಿಜಯೇಂದ್ರ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಪಥ ಸಂಚಲನ ನಡೆಯಿತು.

ದೇಶದ ಮೊದಲ ಸ್ವತಂತ್ರ ಗ್ರಾಮ ಈಸೂರು. ಈ ಗ್ರಾಮದ ಹೋರಾಟಗಾರರ ತ್ಯಾಗ, ಹೋರಾಟ ಇತಿಹಾಸದ ಪುಟದಲ್ಲಿ ದಾಖಲಾಗಿದೆ. ಇದಕ್ಕೆ ನಾವು ಹೆಮ್ಮೆ ಪಡಬೇಕು.ಬಿ.ವೈ.ವಿಜಯೇಂದ್ರ, ಶಾಸಕ

ಹೊಸನಗರದಲ್ಲಿ ಧ್ವಜಾರೋಹಣ

#eaeff0 HOSANAGARA-NEWS-FATAFATಹೊಸನಗರದ ನೆಹರು ಕ್ರೀಡಾಂಗಣದಲ್ಲಿ ತಹಶೀಲ್ದಾರ್‌ ರಶ್ಮಿ ಹಾಲೇಶ್‌ ಅವರು ಧ್ವಜಾರೋಹಣ ಮಾಡಿದರು. ಪೊಲೀಸರು, ಗೃಹ ರಕ್ಷಕ ದಳ, ಶಾಲೆ, ಕಾಲೇಜು ವಿದ್ಯಾರ್ಥಿಗಳು ಪಥ ಸಂಚಲನ ನಡೆಸಿದರು. ಇದೆ ವೇಳೆ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು, ಮೆಸ್ಕಾಂ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.

ಸಾಗರದಲ್ಲಿ ಧ್ವಜಾರೋಹಣ

#eaeff0 SAGARA-NEWS-FATAFATಸಾಗರದ ನೆಹರು ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ಉಪ ವಿಭಾಗದ ಸಹಾಯಕ ಆಯುಕ್ತ ಆರ್.ಯತೀಶ್‌ ಅವರು ಧ್ವಜಾರೋಹಣ ನೆರವೇರಿಸಿದರು. ಪೊಲೀಸ್‌, ಗೃಹ ರಕ್ಷಕ ದಳ, ವಿವಿಧ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳು ಪಥ ಸಂಚಲನದಲ್ಲಿ ಭಾಗವಹಿಸಿದ್ದರು. ಶಾಸಕ ಬೇಳೂರು ಗೋಪಾಲಕೃಷ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Sagara Independence Day

ಪಂಚ ಗ್ಯಾರಂಟಿಗಳನ್ನು ಜನರಿಗೆ ತಲುಪಿಸುವ ಮೂಲಕ ಜನರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಲಾಗುತ್ತಿದೆ. ಕ್ಷೇತ್ರದ ಅಭಿವೃದ್ದಿಗೆ ವಿವಿಧ ಯೋಜನೆಗಳನ್ನು ರೂಪಿಸಲಾಗಿದೆ.ಬೇಳೂರು ಗೋಪಾಲಕೃಷ್ಣ, ಶಾಸಕ

ಸೊರಬದಲ್ಲಿ ಧ್ವಜಾರೋಹಣ

#eaeff0 SORABA-NEWS-FATAFATಸೊರಬದ ರಂಗಮಂದಿರ ಆವರಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ತಹಶೀಲ್ದಾರ್‌ ಮಂಜುಳಾ ಧ್ವಜಾರೋಹಣ ಮಾಡಿದರು. ಪೊಲೀಸರು, ಗೃಹ ರಕ್ಷಕ ದಳ, ಶಾಲೆ ಮಕ್ಕಳಿಂದ ಪಥ ಸಂಚಲನ ನಡೆಯಿತು.

ಇದನ್ನೂ ಓದಿ ⇒ ಶಿವಮೊಗ್ಗ ಸಿಟಿಯ 15 ಕಿ.ಮೀ ವ್ಯಾಪ್ತಿಯಲ್ಲಿವೆ 10 ಪ್ರಮುಖ ಪಿಕ್ನಿಕ್‌ ತಾಣಗಳು, ಇಲ್ಲಿದೆ ಲಿಸ್ಟ್‌

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : August 15, 2024

Leave a Comment