ಬಸ್ಸಿನಲ್ಲಿ ಟಿಕೆಟ್‌ ಮಾಡಿಸಲು ಪತ್ನಿ ಬಳಿ 2 ರೂ. ಚಿಲ್ಲರೆ ಕೇಳಿದ ಪತಿ, ಮರು ಕ್ಷಣ ಕಾದಿತ್ತು ಆಘಾತ

SHIMOGA, 21 AUGUST 2024 : ಬಸ್‌ ಹತ್ತುವಾಗ ಮಹಿಳೆಯರ ವ್ಯಾನಿಟಿ ಬ್ಯಾಗ್‌ನಿಂದ (Vanity Bag) ನಗದು, ಚಿನ್ನಾಭರಣ ಕಳ್ಳತನ ಪ್ರಕರಣಗಳು ಮುಂದುವರೆದಿದೆ. ಶಿವಮೊಗ್ಗ ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಮದಾರಿಪಾಳ್ಯದ ಮೊಹಮ್ಮದ್‌ ಮುಹೀಬುಲ್ಲಾ ಎಂಬುವವರ ಪತ್ನಿಯ ವ್ಯಾನಿಟಿ ಬ್ಯಾಗ್‌ನಿಂದ ಚಿನ್ನಾಭರಣ ಕಳ್ಳತನ ಮಾಡಲಾಗಿದೆ. (ಈ ಸುದ್ದಿಯನ್ನು ಇನ್ನು 47 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಟಿಕೆಟ್‌ಗಾಗಿ ಹಣ ತೆಗೆಯಲು ಹೋದಾಗ

ಮೊಹಮ್ಮದ್‌ ಮುಹೀಬುಲ್ಲಾ ತನ್ನ ಪತ್ನಿ ಮತ್ತು ಮಕ್ಕಳ ಜೊತೆಗೆ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ದಾವಣಗೆರೆಗೆ ಹೊರಟಿದ್ದರು. ಶಿವಮೊಗ್ಗ ನಿಲ್ದಾಣದಿಂದ ಬಸ್‌ ಹತ್ತಿದ್ದು ಸ್ವಲ್ಪ ದೂರ ಹೋದ ಮೇಲೆ ಮುಹೀಬುಲ್ಲಾ ಟಿಕೆಟ್‌ ಮಾಡಿಸಲು ಎರಡು ರೂ. ಚಿಲ್ಲರೆಗಾಗಿ ಪತ್ನಿ ಬಳಿ ಕೇಳಿದ್ದಾರೆ. ಅವರ ಪತ್ನಿ ವ್ಯಾನಿಟಿ ಬ್ಯಾಗ್‌ಗೆ ಗಮನಿಸಿದಾಗ ಜಿಪ್‌ ತೆಗೆದಿರುವುದು ಗೊತ್ತಾಗಿದೆ.

KSRTC-Bus-General-Image-Shimoga-Bangalore

ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಚಿನ್ನದ ಉಂಗುರ, ಕಿವಿಯೋಲೆಗಳು ನಾಪತ್ತೆಯಾಗಿದ್ದವು. ಇವುಗಳ ಮೌಲ್ಯ 53 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಬಸ್‌ ಹತ್ತುವಾಗ ಹೆಚ್ಚು ಜನ ಸಂದಣಿ ಇತ್ತು. ಈ ವೇಳೆ ಕಳ್ಳರು ವ್ಯಾನಿಟಿ ಬ್ಯಾಗ್‌ನಿಂದ ಆಭರಣ ಕದ್ದಿರಬಹುದು ಎಂದು ಶಂಕಿಸಲಾಗಿದೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ ⇒ SHIMOGA JOBS | ಪ್ರತಿ ತಿಂಗಳು 16 ಸಾವಿರ ರೂ. ಸಂಬಳದ ಕೆಲಸ ಖಾಲಿ ಇದೆ

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

KSRTC-Bus-General-Image-Shimoga-Bangalore

Leave a Comment