ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA, 31 AUGUST 2024 : ನಗರದ ಪೇಸ್ ಪಿಯು ಕಾಲೇಜಿನಲ್ಲಿ ಸಂಸ್ಕೃತದಲ್ಲಿ ವಿಜ್ಞಾನ (Sanskrit) ವಿಷಯದ ಸಂಸ್ಕೃತೋತ್ಸವ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳು ಸಂಸ್ಕೃತದಲ್ಲಿ ಅಡಕವಾಗಿವ ವೈಜ್ಞಾನಿಕ ವಿಷಯಗಳನ್ನು ಪ್ರಸ್ತಾಪಿಸಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ವೇದಗಣಿತ, ಗಣಿತಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಹಾಗೂ ಆಯುರ್ವೇದ ವಿಜ್ಞಾನದ ಸಂಗತಿಗಳನ್ನು ದ್ವಿತೀಯ ಪಿಯುಸಿಯ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು. ಅಲ್ಲದೆ ಸಂಸ್ಕೃತ ಗ್ರಂಥಗಳಲ್ಲಿ ಉಲ್ಲೇಖಿತವಾದ ಅಂಶಗಳನ್ನು ತಿಳಿಸಿದರು. ದ್ವಿತೀಯ ಪಿ.ಯು ವಿದ್ಯಾರ್ಥಿಗಳಾದ ನಂದನ್ ಕೌಡಿಕಿ, ನಚಿಕೇತ್, ಸನಕ ಕೆ. ಎಂ, ಅಭಿನವ್ ಶರ್ಮಾ, ಚನ್ನರಾಜ್, ಶ್ರಿಯಾ, ಅಮೃತ ಹಾಗೂ ಕೇದಾರ್ ವಿಷಯ ಪ್ರಸ್ತಾಪಿಸಿದರು.
ಸಂಸ್ಕೃತ ದಿನದ ಪ್ರಯುಕ್ತ ನಡೆದ ಸಂಸ್ಕೃತೋತ್ಸವ ಕಾರ್ಯಕ್ರಮ ಅರ್ಥಗರ್ಭಿತವಾಗಿತ್ತು. ವೈಜ್ಞಾನಿಕವಾದ ಈ ಸಂಸ್ಕೃತ ಭಾಷೆಯ ಮಹತ್ವವನ್ನು ಭಾರತದಲ್ಲಿ ಎಲ್ಲರೂ ತಿಳಿದು ಇನ್ನಷ್ಟು ಅಧ್ಯಯನ ಮಾಡುವಂತೆ ಆಗಬೇಕು.ಪ್ರೊ. ಬಿ.ಎನ್.ವಿಶ್ವನಾಥಯ್ಯ, ಕಾಲೇಜು ಪ್ರಚಾರ್ಯ
ಕಾರ್ಯಕ್ರಮದಲ್ಲಿ ಸಂಸ್ಕೃತ ಉಪನ್ಯಾಸಕಿ ಡಾ. ಮೈತ್ರೇಯಿ ಹೆಚ್. ಎಲ್ , ಕೇಶವಮೂರ್ತಿ, ಬಸವರಾಜು ಕೆ.ಆರ್, ಪ್ರಭಂಜನ ಜಿ. ಜಿ ಅವರು ಉಪಸ್ಥಿತರಿದ್ದರು.
ಸೈಯದ್ ಮೂಸಾ ಸ್ವಾಗತಿಸಿದರು, ಕುಮಾರಿ ಶರಣ್ಯ ಪ್ರಾರ್ಥಿಸಿದರು, ಸೂರ್ಯಕುಮಾರ್ ವಂದಿಸಿದರು, ರಿಷಿ ಹಾಗೂ ಫಲ್ಗುಣಿ ಕಾರ್ಯಕ್ರಮ ನಿರೂಪಿಸಿದರು. ಸಮೃದ್ಧಿ ನಾಯಕ್, ಮುಂಗಾರು, ಅಮೂಲ್ಯ ಬಾಯರ್ ಹಾಗೂ ರಕ್ಷಾ ರಾವ್ ಸಂಸ್ಕೃತ ಗೀತೆಗಳ ಗಾಯನ ಮಾಡಿದರು.
ಇದನ್ನೂ ಓದಿ ⇒ ಶಿವಮೊಗ್ಗ ಸಿಟಿಯ ಬಹುಭಾಗದಲ್ಲಿ ನಾಳೆ ಅರ್ಧ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ?