ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA NEWS, 20 SEPTEMBER 2024 : ಅಮೇರಿಕಾದ ಪ್ರತಿಷ್ಠಿತ ಸ್ಟಾನ್ ಫೋರ್ಡ್ ವಿಶ್ವವಿದ್ಯಾನಿಲಯ ಹೊರ ತಂದಿರುವ ವಿಶ್ವದ ಟಾಪ್ ಶೇ.2 ರಷ್ಟು ವಿಜ್ಞಾನಿಗಳ (Scientists) ಪಟ್ಟಿಯಲ್ಲಿ ಶಿವಮೊಗ್ಗದ ಮೂವರ ಹೆಸರು ಪ್ರಕಟಿಸಲಾಗಿದೆ.
ಯಾರೆಲ್ಲರ ಹೆಸರು ಇದೆ?
ಕುವೆಂಪು ವಿಶ್ವವಿದ್ಯಾಲಯದ ಗಣಿತ ವಿಜ್ಞಾನದ ಪ್ರಾಧ್ಯಾಪಕ ಪ್ರೊ. ಬಿ.ಜೆ.ಗಿರೀಶ್ ಅವರ ಹೆಸರು ಉತ್ತಮ ವಿಜ್ಞಾನಿಗಳ ಪಟ್ಟಿಯಲ್ಲಿದೆ. 46,890ನೇ ಸ್ಥಾನ ಪಡೆದಿದ್ದಾರೆ. ಇಂಜಿನಿಯರಿಂಗ್, ಅನ್ವಯಿಕ ಭೌತಶಾಸ್ತ್ರ ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಷಯಗಳ ಕುರಿತು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. ತಮ್ಮ ಸಂಶೋಧನಾ ಒಟ್ಟು ಕಾಲಾವಧಿಯಲ್ಲಿ 1,46,024 ಅಂಕಗಳೊಂದಿಗೆ ಸತತ ಆರನೇ ವರ್ಷ ಈ ಪಟ್ಟಿಯಲ್ಲಿ ಸ್ಥಾನ ಪಡೆಯುವ ಸಾಧನೆ ಮಾಡಿದ್ದಾರೆ.» ಪ್ರೊ. ಬಿ.ಜೆ.ಗಿರೀಶ್
ಕುವೆಂಪು ವಿಶ್ವವಿದ್ಯಾಲಯದ ಔದ್ಯೋಗಿಕ ರಸಾಯನಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ. ಬಿ.ಇ.ಕುಮಾರಸ್ವಾಮಿ ಅವರು ಈ ವರ್ಷ 1,69,851ನೇ ಸ್ಥಾನ ಪಡೆದಿದ್ದಾರೆ. ಸತತ ನಾಲ್ಕನೇ ವರ್ಷ ಪಟ್ಟಿಯಲ್ಲಿ ಸ್ಥಾನ ಗಳಿಸಿದ್ದಾರೆ.» ಪ್ರೊ. ಬಿ.ಇ. ಕುಮಾರಸ್ವಾಮಿ
ಶಿವಮೊಗ್ಗ ನಗರದ ಡಾ. ಆರ್.ಎಸ್.ವರುಣ್ ಕುಮಾರ್ ಅವರ ಹೆಸರು ಪಟ್ಟಿಯಲ್ಲಿದೆ. ಕಳೆದ ವರ್ಷವು ವರುಣ್ ಅವರ ಹೆಸರು ಇತ್ತು. ವರುಣ್ ಕುಮಾರ್ ಅವರು ಪತ್ರಕರ್ತ ರವಿಕುಮಾರ್ ಮತ್ತು ಶಶಿಕಲಾ ದಂಪತಿಯ ಪುತ್ರ. ವರುಣ್ ಅವರು ಪ್ರಸ್ತುತ ಮಲೇಷಿಯಾದ ಸನ್ ವೇ ಯೂನಿವರ್ಸಿಟಿಯಲ್ಲಿ ಗಣಿತಶಾಸ್ತ್ರದ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.» ಡಾ.ಆರ್.ಎಸ್. ವರುಣ್
ಇದನ್ನೂ ಓದಿ » ಅಧಿಕಾರಿಗಳು, ಸಿಬ್ಬಂದಿ ಲಂಚ ಕೇಳ್ತಿದ್ದಾರಾ? ನಿಮ್ಮೂರಿಗೆ ಬರ್ತಿದ್ದಾರೆ ಲೋಕಾಯುಕ್ತ, ಯಾವಾಗ?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422