ದಸರಾ ಹಬ್ಬ, ರಾಜ್ಯದ 34 ರೈಲುಗಳಿಗೆ ಹೆಚ್ಚುವರಿ ಬೋಗಿ, ಯಾವ್ಯಾವ ರೈಲಿಗೆ?

RAILWAY NEWS : ದಸರಾ ಹಬ್ಬದ ಸಮಯದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಿರಲಿದೆ. ಹಾಗಾಗಿ ವಿವಿಧ ರೈಲುಗಳಿಗೆ ತಾತ್ಕಾಲಿಕವಾಗಿ ಹೆಚ್ಚುವರಿ ಬೋಗಿಗನ್ನು ಜೋಡಿಸಲು ನಿರ್ಧರಿಸಲಾಗಿದೆ. 34 ರೈಲುಗಳಿಗೆ ಅ.4 ರಿಂದ 15ರವೆಗೆ ಹೆಚ್ಚುವರಿ ಬೋಗಿ ಅಳವಡಿಸಲಾಗುತ್ತದೆ.

ಸುದ್ದಿಯ ಮುಂದಿನ ಭಾಗ ಕೆಳಗಿದೆ

ಯಾವೆಲ್ಲ ರೈಲುಗಳಿಗೆ ಹೆಚ್ಚುವರಿ ಬೋಗಿ?

» ಒಂದು ಸ್ವೀಪರ್ ಕ್ಲಾಸ್ ಹೆಚ್ಚುವರಿ ಬೋಗಿ

ಮೈಸೂರು- ಬೆಳಗಾವಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 17301/17302), ಮೈಸೂರು – ಚಾಮರಾಜನಗರ (06233/ 06234), ಮೈಸೂರು- ಬಾಗಲಕೋಟ ಬಸವ ಎಕ್ಸ್‌ಪ್ರೆಸ್‌ (17307/17308), ಹುಬ್ಬಳ್ಳಿ – ಮೈಸೂರು ಹಂಪಿ ಎಕ್ಸ್‌ಪ್ರೆಸ್ (16591 / 16592), ಮೈಸೂರು- ಪಂಡರಾಪುರ ಗೋಲಗುಂಬಜ್ ಎಕ್ಸ್‌ಪ್ರೆಸ್ (16535/16536) ರೈಲುಗಳು.

Nanjappa Hospital Advertisement

» 2 ಸ್ಲೀಪರ್‌ ಕ್ಲಾಸ್‌ ಹೆಚ್ಚುವರಿ ಬೋಗಿ

ಮೈಸೂರು- ತಾಳಗುಪ್ಪ ಎಕ್ಸ್‌ಪ್ರೆಸ್‌ (16228) ರೈಲಿಗೆ ತಲಾ 2 ಸ್ಲೀಪರ್ ಕ್ಲಾಸ್ ಹೆಚ್ಚುವರಿ ಬೋಗಿ ಜೋಡಿಸಲಾಗುತ್ತಿದೆ.

» ಒಂದು ಸಾಮಾನ್ಯ ದ್ವಿತೀಯ ದರ್ಜೆ ಹೆಚ್ಚುವರಿ ಬೋಗಿ

ಮೈಸೂರು- ಚಾಮರಾಜನಗರ ಪ್ಯಾಸೆಂಜರ್ ಸ್ಪೆಷಲ್, ತಾಳಗುಪ್ಪ- ಮೈಸೂರು ಕುವೆಂಪು ಎಕ್ಸ್‌ಪ್ರೆಸ್‌ (16221), ಬೆಂಗಳೂರು- ಅರಸೀಕೆರೆ ಪ್ಯಾಸೆಂಜರ್ (06273/06274), ಬೆಂಗಳೂರು – ಚನ್ನಪಟ್ಟಣ ಪ್ಯಾಸೆಂಜರ್ (06581/ 06582), ಅರಸೀಕೆರೆ – ಮೈಸೂರು ಪ್ಯಾಸೆಂಜರ್ (06213/ 06214-06267/ 06268), ಮೈಸೂರು – ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್‌ (16225-16226), ಶಿವಮೊಗ್ಗ ಟೌನ್- ಚಿಕ್ಕಮಗಳೂರು ಪ್ಯಾಸೆಂಜರ್ (07365- 07366), ಚಿಕ್ಕಮಗಳೂರು- ಯಶವಂತಪುರ (16239/ 16240), ಮೈಸೂರು -ಎಸ್‌ಎಂವಿಟಿ ಬೆಂಗಳೂರು (06269/ 06270), ಎಂವಿಟಿ ಬೆಂಗಳೂರು- ಕರೈಕಲ್ ಎಕ್ಸ್‌ಪ್ರೆಸ್ (16529) ರೈಲುಗಳು.

ಇದನ್ನೂ ಓದಿ » ಈದ್‌ ಮೆರವಣಿಗೆ, ಶಿವಮೊಗ್ಗದಲ್ಲಿ ವಾಹನ ಸಂಚಾರ ಮಾರ್ಗ ಬದಲಾವಣೆ

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.
Shivamogga Live Promotion

Leave a Comment