ಹಿಂದೂ ಮಹಾಸಭಾ ಮೆರವಣಿಗೆ, ಮಫ್ತಿಯಲ್ಲಿದ್ದ ಮಹಿಳಾ ಪೊಲೀಸ್‌ ಮಾಂಗಲ್ಯ ಸರ ನಾಪತ್ತೆ

SHIMOGA NEWS, 23 SEPTEMBER 2024 : ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಯ ಬಂದೋಬಸ್ತ್‌ ಕಾರ್ಯದಲ್ಲಿ ತೊಡಗಿದ್ದ ಮಹಿಳಾ ಪೊಲೀಸ್‌ ಸಿಬ್ಬಂದಿಯ ಮಾಂಗಲ್ಯ ಸರ ಕಳ್ಳತನವಾಗಿದೆ. ಗೋಪಿ ಸರ್ಕಲ್‌ನಲ್ಲಿ ಕೃತ್ಯ ನಡೆದಿರುವ ಅನುಮಾನವಿದೆ.➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗದ ಸಿಇಎನ್‌ ಠಾಣೆ ಮಹಿಳಾ ಸಿಬ್ಬಂದಿ ನಾಗರತ್ನ ಅವರು ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಸಂದರ್ಭ ಮಫ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಗೋಪಿ ಸರ್ಕಲ್‌ನಲ್ಲಿ ಹೆಚ್ಚು ಜನ ಸೇರಿದ್ದಾಗ ನಾಗರಾತ್ನ ಅವರ ಕೊರಳಲಿದ್ದ ಶಾಲು ಸರಿದಂತಾಗಿದೆ. ಆಗ ಮಾಂಗಲ್ಯ ಸರ ಕಳುವಾಗಿರುವ ಸಾದ್ಯತೆ ಇದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

44 ಸಾವಿರ ರೂ. ಮೌಲ್ಯದ ಮಾಂಗಲ್ಯ ಸರದ ಜೊತೆಗೆ ಆರ್ಟಿಫಿಷಿಯಲ್‌ ಚೈನ್‌ ಕೂಡ ಕಳುವಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ಕೈದಿ ಭೇಟಿಗೆ ಜೈಲಿಗೆ ಬಂದವರೇ ಅರೆಸ್ಟ್‌, ಕಾರಣವೇನು?

Leave a Comment