ಸಿಎಂ ವಿರುದ್ಧ ಹೈಕೋರ್ಟ್‌ ತೀರ್ಪು, ಸಂಸದ ರಾಘವೇಂದ್ರ ಮೊದಲ ರಿಯಾಕ್ಷನ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIMOGA NEWS, 24 SEPTEMBER 2024 : ಮೂಡಾ ಹಗರಣ ಸಂಬಂಧ ಪ್ರಾಸಿಕ್ಯೂಷನ್‌ಗೆ (Prosecution) ಹೈಕೋರ್ಟ್‌ ಅನುಮತಿ ನೀಡಿದೆ. ಈ ಹಿನ್ನೆಲೆ ತನಿಖೆಗೆ ಮುಕ್ತ ವಾತಾವರಣ ನಿರ್ಮಿಸಬೇಕಿದೆ. ಹಾಗಾಗಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ ತನಿಖೆಗೆ ಅವಕಾಶ ಕಲ್ಪಿಸಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಆಗ್ರಹಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ ಬಿ.ವೈ.ರಾಘವೇಂದ್ರ, ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ನ್ಯಾಯಾಲಯ ಒಪ್ಪಿಗೆ ನೀಡಿದೆ. ಕಾನೂನು ಎಲ್ಲರಿಗೂ ಒಂದೇ ಎಂಬುದು ಕೋರ್ಟ್‌ನ ತೀರ್ಪು ಮತ್ತೆ ಸ್ಪಷ್ಟಪಡಿಸಿದೆ. ಒಳ್ಳೆ ರೀತಿಯ ತನಿಖೆ ಅಗಬೇಕಿದೆ. ಹಾಗಾಗಿ ಸಿಎಂ ಅವರು ದೂರ ಅಧಿಕಾರದಿಂದ ಉಳಿಯಬೇಕಾಗುತ್ತದೆ. ಕಾನೂನಿಗೆ ಗೌರವ ಕೊಡುವ ಕೆಲಸ ಅಗಬೇಕಿದೆ ಎಂದರು.

BY-Raghavendra-speaks-about-CM-prosecution

ಪ್ರಾಸಿಕ್ಯೂಷನ್‌ಗೆ ಅನುಮತಿ ಸಿಕ್ಕಿದೆ. ಇನ್ಮುಂದೆ ವಿಚಾರಣೆ ಆಗಲಿದೆ. ತಪ್ಪೋ, ಸರಿಯೋ ಅನ್ನುವುದು ಅಲ್ಲಿ ಗೊತ್ತಾಗಲಿದೆ. ಆರೋಪ ಮುಕ್ತವಾಗಿ ಬರಲಿ ಎಂದು ದೇವರಲ್ಲಿ ಕೇಳಿಕೊಳ್ಳುತ್ತೇವೆ. ಆದರೆ ತನಿಖೆಗೆ ಮುಕ್ತ ವಾತಾವರಣ ನಿರ್ಮಿಸಬೇಕಿದೆ. ರಾಜೀನಾಮೆ ಕೊಟ್ಟು ತನಿಖೆಗೆ ಅವಕಾಶ ಮಾಡಿಕೊಡಬೇಕು ಎಂದು ರಾಘವೇಂದ್ರ ಆಗ್ರಹಿಸಿದರು.

ಇದನ್ನೂ ಓದಿ » ಇತ್ತು ಸಂಜೆ ವೇಳೆಗೆ ಬ್ಯಾಂಕ್‌ ಖಾತೆಗೆ 25 ಲಕ್ಷ ರೂ. ಹಣ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment