ಸಾ ಮಿಲ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಮಾಲೀಕನ ಮಗ

SHIMOGA NEWS, 24 SEPTEMBER 2024 : ನಗರ ಸಾ ಮಿಲ್‌ (Saw Mill) ಒಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ. ಆತನ ಕುಟುಂಬದವರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ.

ಇಲಿಯಾಸ್‌ ನಗರದಲ್ಲಿರುವ ಸಾ ಮಿಲ್‌ನಲ್ಲಿ ಅದರ ಮಾಲೀಕರ ಪುತ್ರ ಮಂಜುನಾಥ್‌ (32) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಸಾಲದ ವಿಚಾರವಾಗಿ ಕೆಲವು ಮಂಜುನಾಥ್‌ಗೆ ಬೆದರಿಕೆ ಒಡ್ಡುತ್ತಿದ್ದರು. ಹಾಗಾಗಿ ಮಂಜುನಾಥ್‌ನನ್ನು ಕೊಲೆಗೈದು ನೇಣಿಗೇರಿಸಲಾಗಿದೆ ಎಂದು ಕುಟುಂಬದವರು ಶಂಕೆ ವ್ಯಕ್ತಪಡಿಸಿ ದೂರು ನೀಡಿದ್ದಾರೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ಶಿವಮೊಗ್ಗದಿಂದ ದೆಹಲಿಗೆ ವಿಮಾನ, ಮುಂಬೈಗೆ ಯಾಕೆ ಸಿಕ್ತಿಲ್ಲ ಕ್ಲಿಯರೆನ್ಸ್?‌ ಸಂಸದರು ಹೇಳಿದ್ದೇನು?

200123 Police Jeep With Light jpg

Leave a Comment