ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA NEWS, 27 SEPTEMBER 2024 : ಕುಲಾಂತರಿ ಬೆಳೆಗೆ ಸಂಬಂಧಿಸಿದಂತೆ ನಡೆಯುವ ರಾಷ್ಟ್ರೀಯ ನೀತಿಯ ಸಭೆಗಳನ್ನು ಮುಕ್ತವಾಗಿ ನಡೆಸಬೇಕು ಎಂದು ಆಗ್ರಹಿಸಿ ರೈತ (Farmers) ಮುಖಂಡ ಕೆ.ಟಿ.ಗಂಗಾಧರ್ ಅವರ ನೇತೃತ್ವದಲ್ಲಿ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಘಟಕದ ವತಿಯಿಂದ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಕುಲಾಂತರ ತಳಿಗಳ ಕುರಿತು ರಾಷ್ಟ್ರೀಯ ನೀತಿ ರೂಪಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಇದಕ್ಕೂ ಮುನ್ನ ರೈತ ಪ್ರತಿನಿಧಿಗಳು, ಸಾಮಾನ್ಯ ಜನರನ್ನು ಸಂಪರ್ಕಿಸಿ, ಅವರನ್ನು ತೊಡಿಗಿಸಿಕೊಳ್ಳುವಂತೆ ಕೋರ್ಟ್ ಸೂಚಿಸಿದೆ. ಆದ್ದರಿಂದ ಸಭೆಗಳು ಮುಕ್ತವಾಗಿರಬೇಕು, ರೈತರ ಅಭಿಪ್ರಾಯಗಳನ್ನು ಒಳಗೊಳ್ಳಬೇಕು ಎಂದು ಅಗ್ರಹಿಸಿದರು.
ಯಶವಂತರಾವ್ ಘೋರ್ಪಡೆ, ಹೆಚ್.ಎಸ್. ಮಂಜುನಾಥೇಶ್ವರ, ಜಗದೀಶ್ ನಾಯ್ಕ್, ಹಾಲೇಶಪ್ಪ ಗೌಡ್ರು, ಈರಣ್ಣ ಪ್ಯಾಟಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ಇದನ್ನೂ ಓದಿ » ಶಿವಮೊಗ್ಗದ ರೈಲ್ವೆ ಕೋಚಿಂಗ್ ಟರ್ಮಿನಲ್‌ಗೆ ಮಿನಿಸ್ಟರ್ ಭೇಟಿ, ಯಾವಾಗ ಮುಗಿಯುತ್ತೆ ಕಾಮಗಾರಿ?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422