ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA NEWS, 27 SEPTEMBER 2024 : ಹಣದ ಪಡೆದು ಜಾಮೀನು (Bail) ನೀಡಲು ಬಂದಿದ್ದ ಮಹಿಳೆ ಸೇರಿ ಇಬ್ಬರ ವಿರುದ್ಧ ನ್ಯಾಯಾಧೀಶರ ಸೂಚನೆ ಮೇರೆಗೆ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಪ್ರಕರಣವೊಂದರಲ್ಲಿ ಆರೋಪಿಯೊಬ್ಬರಿಗೆ ಜಾಮೀನು ನೀಡಲು ಬೆಂಗಳೂರಿನ ಗಂಗಮ್ಮ ಎಂಬುವವರು ಬಂದಿದ್ದರು. ಆರೋಪಿ ತನಗೆ ಪರಿಚಯ ಇದ್ದಾರೆ ಎಂದು ತಿಳಿಸಿದ್ದರು. ಪ್ರಶ್ನಿಸಿದಾಗ ಗಂಗಮ್ಮಳಿಗು, ಆರೋಪಿಗು ಪರಿಯವಿಲ್ಲ ಎನ್ನುವುದು ಬೆಳಕಿಗೆ ಬಂದಿದೆ. ಅಲ್ಲದೆ ಜಾಮೀನು ನೀಡಿದರೆ 5 ಸಾವಿರ ರೂ. ಹಣ ನೀಡುವುದಾಗಿ ಮಾಮು ಎಂಬಾತ ತಿಳಿಸಿದ್ದ ಎಂದು ನ್ಯಾಯಾಲಯದಲ್ಲಿ ಗಂಗಮ್ಮ ಒಪ್ಪಿಕೊಂಡಿದ್ದಾರೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಪರಿಚಯ ಇಲ್ಲದಿದ್ದರು ಪರಿಚಯವಿದೆ ಎಂದು, ಹಣದ ಆಮಿಷಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂಬುದು ಗೊತ್ತಾಗಿದೆ. ಹಾಗಾಗಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಇಬ್ಬರ ವಿರುದ್ಧ ಪ್ರಕರಣ ದಾಖಲು ಮಾಡುವಂತೆ ಆದೇಶಿಸಿದರು. ಅದರಂತೆ ನ್ಯಾಯಾಲಯದ ಹಿರಿಯ ಶಿರಸ್ತೆದಾರ್ ಅವರ ದೂರಿನ ಮೇರೆಗೆ ಗಂಗಮ್ಮ ಮತ್ತು ಮಾಮು ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ » ಶಿವಮೊಗ್ಗದ ರೈಲ್ವೆ ಕೋಚಿಂಗ್ ಟರ್ಮಿನಲ್‌ಗೆ ಮಿನಿಸ್ಟರ್ ಭೇಟಿ, ಯಾವಾಗ ಮುಗಿಯುತ್ತೆ ಕಾಮಗಾರಿ?