ರಸ್ತೆಯಲ್ಲಿ ಹಾವು, ಬೈಕ್‌ನಿಂದ ಕೆಳಗಿಳಿದಾಗ ಜಜ್ಜಿಹೋಯ್ತು ಕಾಲು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SORABA NEWS, 2 OCTOBER 2024 : ರಸ್ತೆಯಲ್ಲಿ ಹಾವು (Snake) ಅಡ್ಡ ಬಂತು ಅಂತಾ ಬೈಕ್‌ ನಿಲ್ಲಿಸಿಕೊಂಡು ಪಕ್ಕದಲ್ಲಿ ನಿಂತಿದ್ದ ಶಿಕ್ಷಕರೊಬ್ಬರಿಗೆ ಮತ್ತೊಂದು ಬೈಕ್‌ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದಾರೆ. ಸೊರಬ ತಾಲೂಕಿನ ಸೊರಬ – ಜಂಗಿನಕೊಪ್ಪ ರಸ್ತೆಯಲ್ಲಿ ಘಟನೆ ಸಂಭವಿಸಿದೆ.

ಕೆಲಸ ಮುಗಿಸಿ ಶಿಕ್ಷಕ ನಟರಾಜ್‌ ಕುಬಟೂರು ಅವರು ಬೈಕ್‌ನಲ್ಲಿ ಮನೆಗೆ ಮರಳುತ್ತಿದ್ದರು. ರಸ್ತೆಯಲ್ಲಿ ಹಾವು ಬಂದಿದ್ದರಿಂದ ಬೈಕ್‌ ನಿಲ್ಲಿಸಿ, ಹಿಂಬದಿಗೆ ಬಂದು ನಿಂತಿದ್ದರು. ಈ ವೇಳೆ ಸೊರಬ ಕಡೆಯಿಂದ ವೇಗವಾಗಿ ಬಂದ ಸ್ಪ್ಲೆಂಡರ್‌ ಬೈಕ್‌, ಶಿಕ್ಷಕ ನಟರಾಜ್‌ ಅವರಿಗೆ ಡಿಕ್ಕಿ ಹೊಡೆದಿದೆ. ಕಾಲಿಗೆ ಗಂಭೀರ ಗಾಯವಾಗಿದ್ದು, ಭುಜ, ಮೂಗು ಸೇರಿದಂತೆ ವಿವಿಧೆಡೆ ಗಾಯವಾಗಿತ್ತು.

ಶಿಕ್ಷಕ ನಟರಾಜ್‌ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಘಟನೆ ಸಂಬಂಧ ಸೊರಬ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ಶಿವಮೊಗ್ಗದಲ್ಲಿ ಬೆಳ್ಳುಳ್ಳಿಗಾಗಿ ಅಧಿಕಾರಿಗಳ ದಾಳಿ, ಸ್ಯಾಂಪಲ್‌ ಸಂಗ್ರಹ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment