ಜೋಗ ಜಲಪಾತ, ಫಾಲ್ಸ್‌ ಸಮೀಪವೇ ಇದ್ದ ಮನೆ ತೆರವು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

JOG FALLS NEWS, 2 OCTOBER 2024 : ಜೋಗದ ರಾಣಿ ಫಾಲ್ಸ್ (Jog Falls) ಪ್ರದೇಶದಲ್ಲಿ ಹೃಸ್ತಿಕ್ ರೋಡ್ರಿಗಸ್ ಎಂಬುವರ ಮನೆಯನ್ನು ಜಿಲ್ಲಾಧಿಕಾರಿಗಳ ಆದೇಶದಂತೆ ಉಪ ವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಮಂಗಳವಾರ ಮನೆಯವರ ಪ್ರತಿರೋಧದ ನಡುವೆಯೂ ಕಾರ್ಯಾಚರಣೆ ಮೂಲಕ ತೆರವುಗೊಳಿಸಲಾಯಿತು. ಇಲ್ಲಿ ವಾಹನ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡುವ ಸಲುವಾಗಿ ಮನೆ ತೆರವು ಮಾಡಲಾಗಿದೆ.

ಈ ಹಿಂದೆ ಅವರು ಕಟ್ಟಿಕೊಂಡಿದ್ದ ಕೊಟ್ಟಿಗೆ ಮತ್ತು ಅಡಕೆ ತೋಟಗಳನ್ನು ತೆರವುಗೊಳಿಸಲಾಗಿತ್ತು. ಆಗ ಅವರಿಗೆ ಪರಿಹಾರ ರೂಪದಲ್ಲಿ ನಿಗಮದಿಂದ ವಾಸಕ್ಕೆ ಮನೆ ಹಾಗೂ ಜೋಗ ನಿರ್ವಹಣಾ ಪ್ರಾಧಿಕಾರದಲ್ಲಿ ಪರಿಹಾರದ ಭರವಸೆ ನೀಡಲಾಗಿತ್ತು. ಆದರೆ, ಗಡುವು ಮೀರಿದರೂ ತಾವು ವಾಸಿಸುತ್ತಿರುವ ಮನೆ ತೆರವುಗೊಳಿಸುವುದಕ್ಕೆ ಕುಟುಂಬಸ್ಥರು ನಿರಾಕರಿಸಿದ್ದರು.

ಆನಿವಾರ್ಯವಾಗಿ ಜಿಲ್ಲಾಧಿಕಾರಿಗಳ ಆದೇಶದ ಪ್ರಕಾರ ಸಾಗರದ ಉಪ ವಿಭಾಗಾಧಿಕಾರಿ ಯತೀಶ್ ನೇತೃತ್ವದಲ್ಲಿ ಮನೆ ತೆರವುಗೊಳಿಸಲಾಯಿತು. ಈ ಸಂದರ್ಭ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

JOG FALLS GENERAL IMAGE

ಜೋಗ ಜಲಪಾತಕ್ಕೆ ಹೆಚ್ಚುತ್ತಿರುವ ಪ್ರವಾಸಿಗರ ವಾಹನ ದಟ್ಟಣೆಗೆ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಗೆ ಈ ಮನೆ ಅಡ್ಡಿಯಾಗಿತ್ತು. ಸಾಕಷ್ಟು ಬಾರಿ ಸಂಧಾನ ನಡೆಸಿದರೂ ಸಹ ಮನೆಯವರು ಒಪ್ಪದಿದ್ದ ಕಾರಣ ಅನಿವಾರ್ಯವಾಗಿ ಕ್ರಮ ಕೈಗೊಳ್ಳಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂದರ್ಭ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಎಂ. ಕೆ. ಸುರೇಶ್, ಕಾರ್ಗಲ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಹೊಳೆಬಸಪ್ಪ ಹೋಳಿ ಮತ್ತಿತರರು ಹಾಜರಿದ್ದರು.

ಇದನ್ನೂ ಓದಿ » ಶಿವಮೊಗ್ಗ ಸಿಟಿಯಲ್ಲಿ ಒಂದು ದಿನ ಮಾಂಸ ಮಾರಾಟ ನಿಷೇಧ, ಯಾವಾಗ?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment