ಬಸ್‌, ಕಾರು ಮುಖಾಮುಖಿ ಡಿಕ್ಕಿ | ರೈಲ್ವೆ ಹಳಿ ಪಕ್ಕದಲ್ಲಿ ಮೃತದೇಹ – 3 ಫಟಾಫಟ್‌ ಸುದ್ದಿ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

FATAFAT NEWS, 2 OCTOBER 2024

ಬಸ್‌, ಕಾರು ಮುಖಾಮುಖಿ ಡಿಕ್ಕಿ

EBEDEF fatafat-1-1.webpಆನಂದಪುರ NEWS : ರಾಷ್ಟ್ರೀಯ ಹೆದ್ದಾರಿ–69ರ ಮುಂಬಾಳು ಗ್ರಾಮದ ಮಸೀದಿ ಬಳಿ ಬಸ್ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿದೆ. ಶಿವಮೊಗ್ಗದಿಂದ ಸಾಗರದ ಕಡೆಗೆ ಹೋಗುತ್ತಿದ್ದ ಬಸ್ ಹಾಗೂ ಸಾಗರದಿಂದ ಶಿವಮೊಗ್ಗದ ಕಡೆಗೆ ಬರುತ್ತಿದ್ದ ಕಾರು ಮುಖಾಮುಖಿ ಡಿಕ್ಕಿಯಾಗಿವೆ. ಕಾರಿನ ಮುಂಭಾಗ ಬಹುತೇಕ ಜಖಂ ಆಗಿದೆ. ಏರ್ ಬ್ಯಾಗ್ ತೆರೆದಿದ್ದರಿಂದ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Bus-and-Car-at-anandapura-in-sagara.

ರೈಲ್ವೆ ಹಳಿ ಪಕ್ಕದಲ್ಲಿ ಮೃತದೇಹ ಪತ್ತೆ

EBEDEF fatafat-2.webpಆನಂದಪುರ NEWS : ಸಮೀಪದ ಅಂದಾಸುರ ಗ್ರಾಮದಲ್ಲಿ ರೈಲ್ವೆ ಹಳಿ ಪಕ್ಕ ಮಂಗಳವಾರ ಮೃತದೇಹ ಪತ್ತೆಯಾಗಿದೆ. ಮೃತನನ್ನು ದಾವಣಗೆರೆ ಮೂಲದ ಜೆಸಿಬಿ ಚಾಲಕ ಬಸವರಾಜ್ ಎಂದು ಗುರುತಿಸಲಾಗಿದೆ. ರೈಲಿಗೆ ಸಿಲುಕಿದ್ದರೆ ದೇಹ ಛಿದ್ರವಾಗಿರುತ್ತಿತ್ತು. ಆದರೆ ಅಲ್ಪಸ್ವಲ್ಪ ಗಾಯದ ಗುರುತು ಇದೆ. ಹೀಗಾಗಿ ಕೊಲೆ ಶಂಕೆ ವ್ಯಕ್ತವಾಗಿದೆ. ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕಾಡುಕೋಣ ತಿವಿತ, ಬೈಕ್‌ ಸವಾರನಿಗೆ ಗಾಯ

EBEDEF fatafat-3.webpತೀರ್ಥಹಳ್ಳಿ NEWS : ಮೇಗರವಳ್ಳಿ ಸಮೀಪದ ಅಣ್ಣುವಳ್ಳಿ ಸೇತುವೆ ಬಳಿ ಸೋಮವಾರ ರಾತ್ರಿ ಹೆದ್ದಾರಿಯಲ್ಲಿ ಕಾಡುಕೋಣ ತಿವಿದು ಬೈಕ್‌ ಸವಾರ ಗಾಯಗೊಂಡಿದ್ದಾನೆ. ಹುಣ್ಣಿಮೆಸರ ವೆಂಕಟೇಶ (50) ಗಾಯಗೊಂಡವರು. ಮೇಗರವಳ್ಳಿಯಿಂದ ಉಂಟೂರುಕಟ್ಟೆ ಕಡೆಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಅಡ್ಡ ಬಂದ ಕಾಡುಕೋಣ ತಿವಿದ ರಭಸಕ್ಕೆ ವೆಂಕಟೇಶ ಕಾಲು ಮತ್ತು ಹಲ್ಲುಗಳಿಗೆ ಪೆಟ್ಟು ಬಿದ್ದಿದೆ. ಸ್ಥಳಕ್ಕೆ ಧಾವಿಸಿದ ಮೇಗರವಳ್ಳಿ ಅರಣ್ಯಾಧಿಕಾರಿಗಳು ಅವರನ್ನು ಪಟ್ಟಣದ ಜೆ.ಸಿ ಆಸ್ಪತ್ರೆಗೆ ದಾಖಲಿಸಿದ್ದು, ವೆಂಕಟೇಶ ಚೇತರಿಸಿಕೊಂಡಿದ್ದಾರೆ.

ಇದನ್ನೂ ಓದಿ » ಶಿವಮೊಗ್ಗದಲ್ಲಿ ಬೆಳ್ಳುಳ್ಳಿಗಾಗಿ ಅಧಿಕಾರಿಗಳ ದಾಳಿ, ಸ್ಯಾಂಪಲ್‌ ಸಂಗ್ರಹ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment