ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA NEWS, 3 OCTOBER 2024 : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳ (Guarantee Scheme) ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಐದು ಯೋಜನೆಗಳ ಫಲಾನುಭವಿಗಳ ಸಂಖ್ಯೆ, ಸರ್ಕಾರ ಮಾಡುತ್ತಿರುವ ವೆಚ್ಚದ ಕುರಿತು ಮಾಹಿತಿ ನೀಡಲಾಯಿತು. ಇದರ ಅಂಕಿ ಅಂಶ ಇಲ್ಲಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಯಾವ್ಯಾವ ಯೋಜನೆ ಎಷ್ಟು ಜನರಿಗೆ ತಲುಪಿದೆ?
ಶಿವಮೊಗ್ಗ ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆಗೆ 16.86 ಲಕ್ಷ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಈ ಪೈಕಿ 8066 ಮಂದಿಗೆ ತಾಂತ್ರಿಕ ಕಾರಣದಿಂದ ಹಣ ವರ್ಗಾವಣೆ ಸಾಧ್ಯವಾಗಿಲ್ಲ. ಉಳಿದಂತೆ ಯೋಜನೆ ಪ್ರಾರಂಭದಿಂದ ಈ ವರ್ಷದ ಜೂನ್ ತಿಂಗಳವರೆಗೆ 257 ಕೋಟಿ ರೂ ವೆಚ್ಚ ಮಾಡಲಾಗಿದೆ.» ಅನ್ನಭಾಗ್ಯ ಯೋಜನೆ
ಗೃಹ ಲಕ್ಷ್ಮಿ ಯೋಜನೆ ಅಡಿ ಜಿಲ್ಲೆಯಲ್ಲಿ 3,85,335 ಯಾಜಮಾನಿಯರು ಲಾಭ ಪಡೆಯುತ್ತಿದ್ದಾರೆ. ಶೇ.90ರಷ್ಟು ಯಜಮಾನಿಯರು ಈವರೆಗೂ ಗೃಹ ಲಕ್ಷ್ಮಿ ಯೋಜನೆಗೆ ನೋಂದಣಿಯಾಗಿದ್ದಾರೆ. ಈ ಯೋಜನೆ ಅಡಿ ಪ್ರತಿ ತಿಂಗಳು ಯಜಮಾನಿಯರ ಬ್ಯಾಂಕ್ ಖಾತೆಗೆ 2 ಸಾವಿರ ರೂ. ನಗದು ವರ್ಗಾಯಿಸಲಾಗುತ್ತದೆ. ಪ್ರತಿ ತಿಂಗಳು ಶಿವಮೊಗ್ಗ ಜಿಲ್ಲೆಯ ಯಜಮಾನಿಯರಿಗೆ 76,19,94,000 ರೂ. ವೆಚ್ಚವಾಗಲಿದೆ. ಯೋಜನೆ ಜಾರಿ ಆದಾಗಿನಿಂದ ಜೂನ್ 2024ರವರೆಗೆ 799,83,78,00 ರೂ. ವೆಚ್ಚವಾಗಿದೆ.» ಗೃಹ ಲಕ್ಷ್ಮಿ ಯೋಜನೆ
ಗೃಹ ಜ್ಯೋತಿ ಯೋಜನೆಗು ಶಿವಮೊಗ್ಗದಲ್ಲಿ ಉತ್ತಮ ಪ್ರತಿಕ್ರಿಯೆ ಇದೆ. ಜಿಲ್ಲೆಯಲ್ಲಿ ಒಟ್ಟು ವಿದ್ಯುತ್ ಸಂಪರ್ಕ ಪಡೆದ ಮನೆಗಳ ಸಂಖ್ಯೆ 5,37,774. ಈ ಪೈಕಿ 4,70,458 ಲಕ್ಷ ಮನೆಗಳು ಯೋಜನೆ ವ್ಯಾಪ್ತಿಗೆ ಒಳಪಟ್ಟಿವೆ. ಯೋಜನೆ ಜಾರಿ ಆದಾಗಿನಿಂದ ಜೂನ್ 2024ರವರಗೆ 246,28,37,657 ರೂ. ವೆಚ್ಚವಾಗಿದೆ.» ಗೃಹ ಜ್ಯೋತಿ ಯೋಜನೆ
ಶಕ್ತಿ ಯೋಜನೆ ಅಡಿ ಶಿವಮೊಗ್ಗ ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಉಚಿತ ಪ್ರಯಾಣ ಮಾಡಿದ ಮಹಿಳೆಯರ ಸಂಖ್ಯೆ 3,03,61,531. 2023ರ ಜೂನ್‌ನಿಂದ 2024ರ ಸೆಪ್ಟೆಂಬರ್ 17ರವರೆಗೆ ಯೋಜನೆಯಿಂದ ಸಾರಿಗೆ ನಿಗಮಕ್ಕೆ 105,56,92,627 ರೂ. ಲಾಭವಾಗಿದೆ ಎಂದು ತಿಳಿಸಲಾಗಿದೆ. ಯೋಜನೆ ಜಾರಿಯಾದಾಗಿನಿಂದ ಮಹಿಳಾ ಪ್ರಯಾಣಿಕರ ಸಂಖ್ಯೆ ಶೇ.61ರಷ್ಟು ಹೆಚ್ಚಳವಾಗಿದೆ.» ಶಕ್ತಿ ಯೋಜನೆ
ಯುವನಿಧಿ ಯೋಜನೆಗೆ ಶಿವಮೊಗ್ಗ ಜಿಲ್ಲೆಯಲ್ಲಿ 2836 ಫಲಾನುಭವಿಗಳು ನೋಂದಣಿಯಾಗಿದ್ದಾರೆ. ಈವರೆಗೆ ಸರ್ಕಾರ 3,28,56,00 ರೂ. ವೆಚ್ಚ ಮಾಡಿದೆ ಎಂದು ತಿಳಿಸಲಾಗಿದೆ.» ಯುವನಿಧಿ ಯೋಜನೆ
ಇದನ್ನೂ ಓದಿ » ಸಕ್ರೆಬೈಲಿನಲ್ಲಿ ಆನೆಗಳಿಗೆ ತಾಲೀಮು ಶುರು, ಹೇಗಿರುತ್ತೆ ಟ್ರೈನಿಂಗ್?