ಚೋರಡಿ ಬಳಿ ಬೈಕ್‌ಗೆ ಓಮ್ನಿ ಡಿ*ಕ್ಕಿ | ಉಂಬ್ಳೆಬೈಲಿನಲ್ಲಿ ಬೈಕುಗಳು ಮುಖಾಮುಖಿ ಡಿ*ಕ್ಕಿ – 3 ಫಟಾಫಟ್‌ ಸುದ್ದಿ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIMOGA FATAFAT NEWS, 3 OCTOBER 2024

ಉಂಬ್ಳೆಬೈಲಿನಲ್ಲಿ ಬೈಕ್‌ಗಳು ಡಿಕ್ಕಿ, ದಂಪತಿಗೆ ಗಾಯ

EBEDEF FATAFAT-1-NEW.webpಶಿವಮೊಗ್ಗ NEWS : ಬೈಕ್‌ನಲ್ಲಿ ತೆರಳುತ್ತಿದ್ದ ದಂಪತಿಗೆ ಎದುರಿನಿಂದ ಬಂದ ಮತ್ತೊಂದು ಬೈಕ್‌ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ದಂಪತಿಗೆ ಗಾಯಗೊಂಡಿದ್ದು ಮೆಗ್ಗಾನ್‌ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಶಿವಮೊಗ್ಗ ತಾಲೂಕು ಉಂಬ್ಳೆಬೈಲು ಗ್ರಾಮದ ಫಾರೆಸ್ಟ್‌ ಚೆಕ್‌ ಪೋಸ್ಟ್‌ ಸಮೀಪ ಘಟನೆ ಸಂಭವಿಸಿದೆ. ಉಮೇಶ್‌ ಮತ್ತು ಅವರ ಪತ್ನಿ ಶ್ರೀಮತಿ ಗಾಯಗೊಂಡಿದ್ದಾರೆ. ದಂಪತಿ ತಮ್ಮ ಬೈಕ್‌ನಲ್ಲಿ ಕೆಲಸಕ್ಕೆ ತೆರಳುತ್ತಿದ್ದರು. ಎದುರಿನಿಂದ ವಿಜಯ್‌ ಎಂಬಾತ ಚಲಿಸಿಕೊಂಡು ಬಂದ ಬೈಕ್‌ ಇವರ ಬೈಕ್‌ಗೆ ಡಿಕ್ಕಿ ಹೊಡೆದಿದೆ ಎಂದು ಆರೋಪಿಸಲಾಗಿದೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಚೋದನಕಾರಿ ಪೋಸ್ಟ್‌, ಕೇಸ್‌ ದಾಖಲು

EBEDEF FATAFAT-2-NEW.webpಶಿವಮೊಗ್ಗ NEWS : ಫೇಸ್‌ಬುಕ್‌ನಲ್ಲಿ ತಿರುಪತಿ ಲಡ್ಡು ಕುರಿತು ಪ್ರಚೋದನಕಾರಿ ಪೋಸ್ಟ್ ಪ್ರಕಟಿಸಿದ್ದ ಯುವಕನ ವಿರುದ್ಧ ತುಂಗಾ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಖಚಿತ ಮಾಹಿತಿ ಮೇರೆಗೆ ಫೇಸ್‌ಬುಕ್‌ ಪೋಸ್ಟ್‌ ಪರಿಶೀಲಿಸಿದ ಪೊಲೀಸರು, ಅಹಮದ್‌ ಖಾನ್‌ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಧರ್ಮ, ಜಾತಿಗಳ ನಡುವೆ ದ್ವೇಷ ಬಿತ್ತುವ ಸಂದೇಶ ಪ್ರಕಟಿಸಲಾಗಿತ್ತು ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆ ಸ್ವಯಂ ಪ್ರೇರಿತವಾಗಿ ದೂರು ದಾಖಲು ಮಾಡಿಕೊಳ್ಳಲಾಗಿದೆ.

ಚೋರಡಿ ಬಳಿ ಬೈಕ್‌ಗೆ ಓಮ್ನಿ ಡಿಕ್ಕಿ

EBEDEF FATAFAT-3-NEW.webpಶಿವಮೊಗ್ಗ NEWS : ಬೈಕ್‌ಗೆ ಓಮ್ನಿ ಕಾರು ಡಿಕ್ಕಿ ಹೊಡೆದು ಬೈಕ್‌ ಸವಾರ ಗಂಭೀರ ಗಾಯಗೊಂಡಿದ್ದಾನೆ. ಶಿವಮೊಗ್ಗ ತಾಲೂಕು ಚೋರಡಿ ಬಳಿ ಘಟನೆ ಸಂಭವಿಸಿದೆ. ಡೈರಿಗೆ ಹಾಲು ಹಾಕಿ ರಾಜು ಎಂಬುವವರು ತಮ್ಮ ಬೈಕ್‌ನಲ್ಲಿ ಮರಳುತ್ತಿದ್ದರು. ಬೈಕ್‌ನಲ್ಲಿ ರಸ್ತೆ ದಾಟುತ್ತಿದ್ದಾಗ ಶಿವಮೊಗ್ಗದಿಂದ ವೇಗವಾಗಿ ಬಂದ ಓಮ್ನಿ ಕಾರು ಡಿಕ್ಕಿ ಹೊಡೆದಿದೆ. ರಾಜು ಅವರ ಎಡಗೈ ಮುರಿದೆ, ಎರಡು ಕಾಲಿನ ಮಂಡಿ, ದೇಹದ ವಿವಿಧೆಡೆ ಗಾಯವಾಗಿದೆ. ಕೂಡಲೆ ಅವರನ್ನು ಮೆಗ್ಗಾನ್‌ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಘಟನೆ ಬೆನ್ನಿಗೆ ಚಾಲಕ ಕಾರು ಬಿಟ್ಟು ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ಹಾಲು ಉತ್ಪಾದಕರಿಗೆ ಶಾಕ್‌ ನೀಡಿದ ಶಿಮುಲ್‌, ಖರೀದಿ ದರ ಕಡಿತ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : October 3, 2024

ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ, ಶಿವಮೊಗ್ಗದಲ್ಲಿ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ?

ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ, ಶಿವಮೊಗ್ಗದಲ್ಲಿ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ?

ಬ್ಯಾಂಕ್‌ ಉದ್ಯೋಗಿ, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, ಗಾಯಾಳುಗಳು ಆಸ್ಪತ್ರೆಗೆ

ಬ್ಯಾಂಕ್‌ ಉದ್ಯೋಗಿ, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, ಗಾಯಾಳುಗಳು ಆಸ್ಪತ್ರೆಗೆ

ಶಿವಮೊಗ್ಗದಲ್ಲಿ ಕೆಲಸ ಖಾಲಿ ಇದೆ, ತಿಂಗಳಿಗೆ ₹20,000 ದಿಂದ ₹50,000 ದವರೆಗೆ ಸಂಬಳ

ಶಿವಮೊಗ್ಗದಲ್ಲಿ ಕೆಲಸ ಖಾಲಿ ಇದೆ, ತಿಂಗಳಿಗೆ ₹20,000 ದಿಂದ ₹50,000 ದವರೆಗೆ ಸಂಬಳ

ತಂದೆ, ಮಗನಿಗೆ ಜೀವಾವಧಿ ಶಿಕ್ಷೆ, ದಂಡ ವಿಧಿಸಿದ ಶಿವಮೊಗ್ಗ ಕೋರ್ಟ್‌, ಯಾಕೆ?

ತಂದೆ, ಮಗನಿಗೆ ಜೀವಾವಧಿ ಶಿಕ್ಷೆ, ದಂಡ ವಿಧಿಸಿದ ಶಿವಮೊಗ್ಗ ಕೋರ್ಟ್‌, ಯಾಕೆ?

ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? – 17 ಮಾರ್ಚ್‌ 2026 – ಅಡಿಕೆ ಧಾರಣೆ

ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? – 17 ಮಾರ್ಚ್‌ 2026 – ಅಡಿಕೆ ಧಾರಣೆ

ಶಿವಮೊಗ್ಗ ಡಿ.ಸಿ ಎದುರು ಮೈದಾನಕ್ಕೆ ಬ್ಯಾರಿಕೇಡ್‌, ಹಿಂದೂ ಸಂಘಟನೆಗಳು ಗರಂ, ಕಾರಣವೇನು?

ಶಿವಮೊಗ್ಗ ಡಿ.ಸಿ ಎದುರು ಮೈದಾನಕ್ಕೆ ಬ್ಯಾರಿಕೇಡ್‌, ಹಿಂದೂ ಸಂಘಟನೆಗಳು ಗರಂ, ಕಾರಣವೇನು?

ಬೆಳಗ್ಗೆ ಲೇಔಟ್‌ಗೆ ಬಂದ ಲೆಕ್ಚರರ್‌ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್‌

ಬೆಳಗ್ಗೆ ಲೇಔಟ್‌ಗೆ ಬಂದ ಲೆಕ್ಚರರ್‌ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್‌

ಶಿವಮೊಗ್ಗ TO ಬೆಂಗಳೂರು ಇನ್ನಷ್ಟು ವೇಗ, ದ್ವಿಪಥ ಯೋಜನೆಗೆ ಒತ್ತಾಯ

ಶಿವಮೊಗ್ಗ TO ಬೆಂಗಳೂರು ಇನ್ನಷ್ಟು ವೇಗ, ದ್ವಿಪಥ ಯೋಜನೆಗೆ ಒತ್ತಾಯ

ಜಮೀನಿಗೆ ನೀರು ಹರಿಸಲು ಹೋಗಿದ್ದ ವ್ಯಕ್ತಿಗೆ ಕಾದಿತ್ತು ಸಾವು, ಆಗಿದ್ದೇನು?

ಜಮೀನಿಗೆ ನೀರು ಹರಿಸಲು ಹೋಗಿದ್ದ ವ್ಯಕ್ತಿಗೆ ಕಾದಿತ್ತು ಸಾವು, ಆಗಿದ್ದೇನು?

ನಾಳೆಯಿಂದ SSLC ಪರೀಕ್ಷೆ, ಹೇಗಿದೆ ಸಿದ್ಧತೆ? ಯಾವ್ಯಾವ ತಾಲೂಕಿನಲ್ಲಿ ಎಷ್ಟು ಪರೀಕ್ಷಾ ಕೇಂದ್ರಗಳಿವೆ?

ನಾಳೆಯಿಂದ SSLC ಪರೀಕ್ಷೆ, ಹೇಗಿದೆ ಸಿದ್ಧತೆ? ಯಾವ್ಯಾವ ತಾಲೂಕಿನಲ್ಲಿ ಎಷ್ಟು ಪರೀಕ್ಷಾ ಕೇಂದ್ರಗಳಿವೆ?

Leave a Comment