ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIMOGA NEWS, 4 OCTOBER 2024 : ದಸರಾ ಜಂಬೂ ಸವಾರಿಯಲ್ಲಿ ಭಾಗವಹಿಸಲು ಸಕ್ರೆಬೈಲು ಬಿಡಾರದಿಂದ ಮೂರು ಆನೆಗಳು (Elephants) ಶಿವಮೊಗ್ಗಕ್ಕೆ ಆಗಮಿಸಿವೆ. ಸಂಜೆ ನಗರಕ್ಕೆ ಬಂದ ಆನೆಗಳಿಗೆ ಪೂಜೆ ಸಲ್ಲಿಸಿ, ಸ್ವಾಗತಿಸಲಾಯಿತು.
ಸಕ್ರೆಬೈಲು ಬಿಡಾರದ ಸಾಗರ, ಬಾಲಣ್ಣ ಮತ್ತು ಬಹದ್ದೂರ್ ಆನೆಗಳು ಶಿವಮೊಗ್ಗಕ್ಕೆ ಆಗಮಿಸಿವೆ. ಮಂಗಳವಾದ್ಯ ಸಹಿತ ಆನೆಗಳನ್ನು ಸ್ವಾಗತಿಸಲಾಯಿತು. ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇಗುಲದಿಂದ ಪೂಜೆ ಸಲ್ಲಿಸಿದ ಬಳಿಕ ಶಾಸಕ ಚನ್ನಬಸಪ್ಪ, ಆಯುಕ್ತೆ ಕವಿತಾ ಯೋಗಪ್ಪನವರ್ ಅವರು ಆನೆಗಳಿಗೆ ಪೂಜಿಸಿದರು.

ವಾಸವಿ ಶಾಲೆ ಆವರಣದಲ್ಲಿ ಆನೆಗಳು ತಂಗಲು ವ್ಯವಸ್ಥೆ ಮಾಡಲಾಗಿದೆ. ಆನೆಗಳ ಜೊತೆಗೆ ಬಿಡಾರದಿಂದ ಮಾವುತರು, ಕಾವಾಡಿಗಳು ಆಗಮಿಸಿದ್ದಾರೆ. ಶಿವಮೊಗ್ಗ ನಗರದಲ್ಲಿ ಆನೆಗಳಿಗೆ ತಾಲೀಮು ನಡೆಸಲಾಗುತ್ತದೆ. ಶಿವಮೊಗ್ಗ ದಸರಾದಲ್ಲಿ ಸಾಗರ ಆನೆ ಅಂಬಾರಿ ಹೊರಲಿದೆ.

ಇದನ್ನೂ ಓದಿ » ಶಿವಮೊಗ್ಗದ NESನಲ್ಲಿ ಶಿಕ್ಷಕ, ಉಪನ್ಯಾಸಕ ಹುದ್ದೆಗೆ ಅರ್ಜಿ ಆಹ್ವಾನ
LATEST NEWS
- ಭದ್ರಾವತಿ ಹುತ್ತಾ ಕಾಲೋನಿಯಲ್ಲಿ ಬೈಕ್ ಸಹಿತ ಚಾನಲ್ಗೆ ಬಿದ್ದ ವ್ಯಕ್ತಿ, ಆಗಿದ್ದೇನು?

- ಗೋಪಿ ಸರ್ಕಲ್ನಲ್ಲಿ ಡೊನಾಲ್ಡ್ ಟ್ರಂಪ್ ಹೇಳಿದಂತೆ ನರೇಂದ್ರ ಮೋದಿ ಡಾನ್ಸ್, ಸೌದೆ ಒಲೆ ಅಡುಗೆ

- ಶಿವಮೊಗ್ಗ ಜಿಲ್ಲೆಯ ಕಡಿಮೆಯಾದ ತಾಪಮಾನ, ಇವತ್ತು ಎಲ್ಲೆಲ್ಲಿ ಹೇಗಿರಲಿದೆ ವಾತಾವರಣ?

- ಶಿವಮೊಗ್ಗದ ಸೂಳೆಬೈಲ್ ಮಹಿಳೆ ಅರೆಸ್ಟ್, ₹18,00,000 ಮೊತ್ತದ ಆಭರಣ ಸೀಜ್, ಏನಿದು ಕೇಸ್?

- ಶಿವಮೊಗ್ಗ ವಿದ್ಯಾನಗರದಲ್ಲಿ ಅದ್ಧೂರಿ ಜಾತ್ರೆ, ಯಾವ್ಯಾವ ದಿನ ಏನೇನು ನಡೆಯಲಿದೆ? ಹೇಗಿದೆ ಸಿದ್ಧತೆ?

About The Editor
ನಿತಿನ್ ಆರ್.ಕೈದೊಟ್ಲು





