ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA NEWS, 8 OCTOBER 2024 : ವ್ಯಕ್ತಿಯೊಬ್ಬರ ಪ್ಯಾನ್ ನಂಬರ್ (Pan Number) ದುರ್ಬಳಕೆ ಮಾಡಿಕೊಂಡು, 7 ನಕಲಿ ಕಂಪನಿಗಳನ್ನು ಸ್ಥಾಪಿಸಿ, ಸರ್ಕಾರಕ್ಕೆ ಜಿ.ಎಸ್.ಟಿ ವಂಚಿಸಲಾಗಿದೆ. ಬ್ಯಾಂಕ್ ಖಾತೆ ಫ್ರೀಜ್ ಮಾಡಿದ್ದ ಹಿನ್ನೆಲೆ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಬ್ಯಾಂಕ್ಗೆ ಹೋದಾಗ ಕಾದಿತ್ತು ಶಾಕ್
ಶಿವಮೊಗ್ಗದ ಅಕೌಂಟೆಂಟ್ ಒಬ್ಬರು (ಹೆಸರು ಗೌಪ್ಯ) ಸ್ನೇಹಿತರೊಬ್ಬರಿಗೆ ಫೋನ್ ಪೇ ಮೂಲಕ ಹಣ ವರ್ಗಾವಣೆ ಮಾಡಲು ಯತ್ನಿಸಿದಾಗ ಬ್ಯಾಂಕ್ ಖಾತೆ ಫ್ರೀಜ್ ಆಗಿರುವ ವಿಚಾರ ಗೊತ್ತಾಗಿದೆ. ಕೂಡಲೆ ಬ್ಯಾಂಕ್ಗೆ ತೆರಳಿ ವಿಚಾರಿಸಿದಾಗ ಮುಂಬೈನ ಕೇಂದ್ರಿಯ ಜಿ.ಎಸ್.ಟಿ ಕಚೇರಿ ನೊಟೀಸ್ ಮೇರೆಗೆ ಬ್ಯಾಂಕ್ ಖಾತೆ ಫ್ರೀಜ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಏಳು ನಕಲಿ ಕಂಪನಿ ಸ್ಥಾಪನೆ
ಈ ಕುರಿತು ಅಕೌಂಟೆಂಟ್ ಅವರು ಪರಿಶೀಲಿಸಿದಾಗ ಅವರ ಪ್ಯಾನ್ ಕಾರ್ಡ್ ನಂಬರ್ ದುರ್ಬಳಕೆ ಮಾಡಿಕೊಂಡು, ಏಳು ನಕಲಿ ಕಂಪನಿ ಸ್ಥಾಪಿಸಿರುವುದು ಗೊತ್ತಾಗಿದೆ. ಇವುಗಳ ಮೂಲಕ ಜಿ.ಎಸ್.ಟಿ ವಂಚನೆ ಮಾಡಿದ್ದ ಹಿನ್ನೆಲೆ ಬ್ಯಾಂಕ್ ಖಾತೆ ಫ್ರೀಜ್ ಮಾಡಲಾಗಿತ್ತು. ಆನ್ಲೈನ್ ಮೂಲಕ ತಮ್ಮ ಪ್ಯಾನ್ ಕಾರ್ಡ್ ಬಳಸಿ ಕಂಪನಿಗಳನ್ನು ರಿಜಿಸ್ಟರ್ ಮಾಡಿಕೊಂಡು, ತೆರಿಗೆ ವಂಚಿಸಲಾಗಿದೆ ಎಂದು ಆರೋಪಿಸಿ ಅಕೌಂಟೆಂಟ್ ದೂರು ನೀಡಿದ್ದಾರೆ. ಶಿವಮೊಗ್ಗದ ಸಿ.ಇ.ಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ » ಶಿವಮೊಗ್ಗ, ಶಿಕಾರಿಪುರ ಟೋಲ್, ಸಚಿವರನ್ನು ಭೇಟಿಯಾದ ನಿಯೋಗ