ಶಿವಮೊಗ್ಗ | ಬೈಕ್‌ನಲ್ಲಿ ಹಳ್ಳ ದಾಟುತ್ತಿದ್ದಾಗ ಕೊಚ್ಚಿ ಹೋದ ವ್ಯಕ್ತಿ

SHIMOGA NEWS, 9 OCTOBER 2024 : ತುಂಬಿ ಹರಿಯುತ್ತಿದ್ದ ಹಳ್ಳ ದಾಟುವಾಗ ಬೈಕ್‌ ಸಹಿತ ವ್ಯಕ್ತಿಯೊಬ್ಬರು ಕೊಚ್ಚಿ ಹೋಗಿದ್ದಾರೆ. ಬೈಕ್‌ ಸವಾರನಿಗಾಗಿ ಶೋಧ ಕಾರ್ಯ (rescue) ನಡೆಯುತ್ತಿದೆ.

ಶಿವಮೊಗ್ಗ ತಾಲೂಕು ಮುದುವಾಲದ ಕೊಂಡಜ್ಜಿ ಹಳ್ಳದಲ್ಲಿ ಇಂದು ಬೆಳಗ್ಗೆ ಘಟನೆ ಸಂಭವಿಸಿದೆ. ಕಳೆದ ರಾತ್ರಿ ಸುರಿದ ಮಳೆಗೆ ಹಳ್ಳ ತುಂಬಿ ಹರಿಯುತ್ತಿತ್ತು. ಈ ಸಂದರ್ಭ ಚಿನ್ನಿಕಟ್ಟೆಯ ಎಕ್ಬಾಲ್‌ ಎಂಬುವವರು ಬೈಕ್‌ನಲ್ಲಿ ಹಳ್ಳ ದಾಟುವಾಗ ಕೊಚ್ಚಿ ಹೋಗಿದ್ದಾರೆ ಎಂದು ತಿಳಿದು ಬಂದಿದೆ.

muduvala-lake-rescue-operation

ಎಕ್ಬಾಲ್‌ ಅವರು ಶಿವಮೊಗ್ಗದಿಂದ ಮುದುವಾಲ ಮಾರ್ಗವಾಗಿ ಚಿನ್ನಿಕಟ್ಟೆಗೆ ತೆರಳುತ್ತಿದ್ದರು. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿದ್ದು ಶೋಧ ಕಾರ್ಯ ನಡೆಯುತ್ತಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಿದೆ.

ಇದನ್ನೂ ಓದಿ » ಶಿವಮೊಗ್ಗ | ಮಳೆಗೆ ಕೊಚ್ಚಿ ಹೋದ ಹಳಿ ಕೆಳಗಿನ ಜೆಲ್ಲಿ, ರೈಲುಗಳ ಸಂಚಾರ ವಿಳಂಬ

muduvala-lake-rescue-operation

Leave a Comment